Advertisement

UP; ಪತ್ನಿಯನ್ನು ಇಬ್ಬರು ಪುರುಷರೊಂದಿಗೆ ಹೋಟೆಲ್ ರೂಮ್ ನಲ್ಲಿ ಕಂಡ ವೈದ್ಯ!; ರಾದ್ದಾಂತ

01:18 PM May 12, 2024 | Team Udayavani |

ಕಾಸ್‌ಗಂಜ್‌(ಉತ್ತರ ಪ್ರದೇಶ): ವೈದ್ಯರೊಬ್ಬರು ತನ್ನ ಪತ್ನಿಯನ್ನು ಹೋಟೆಲ್‌ ರೂಮ್ ನಲ್ಲಿ ಇತರ ಇಬ್ಬರು ಪುರುಷರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ವೇಳೆ ದಾಲ್ ನಡೆಸಿ ಹಿಡಿದು ಕೆಂಡಾಮಂಡಲವಾಗಿ ಬಡಿದಾಡಿಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡು ಕಡೆಯವರ ನಡುವೆ ನಡೆದ ತೀವ್ರ ವಾಗ್ವಾದ ಮತ್ತು ಘರ್ಷಣೆ ನಡೆದಿದ್ದು ಕೆಮರಾದಲ್ಲಿ ಸೆರೆಯಾಗಿದೆ.

Advertisement

ಪತ್ನಿಯ ಚಟುವಟಿಕೆಯಿಂದ ಅನುಮಾನಗೊಂಡ ವೈದ್ಯ ಇತರರೊಂದಿಗೆ ಗುರುವಾರ ರಾತ್ರಿ ಹೊಟೇಲ್ ಕೋಣೆಗೆ ನುಗ್ಗಿದ್ದು, ಹೆಂಡತಿಯೊಂದಿಗೆ ಇಬ್ಬರು ಪುರುಷರನ್ನು ಆಕ್ಷೇಪಾರ್ಹ ಪರಿಸ್ಥಿತಿಯಲ್ಲಿ ಕಂಡಿದ್ದಾರೆ. ಈ ವೇಳೆ ಕುಟುಂಬ ಸದಸ್ಯರು ಮತ್ತು ಇಬ್ಬರು ಪುರುಷರ ನಡುವೆ ದೈಹಿಕ ಘರ್ಷಣೆ ನಡೆದು ಹೈಡ್ರಾಮಾ ನಡೆದಿದೆ. ಘಟನೆ ಈಗ ಬಟಾಬಯಲಾಗಿದೆ.

ಪೊಲೀಸರ ಪ್ರಕಾರ, ವೈದ್ಯ ದಂಪತಿಗಳು ಕಳೆದ ಒಂದು ವರ್ಷದಿಂದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಉದ್ಯೋಗದಲ್ಲಿರುವ ಮಹಿಳೆ ಮತ್ತು ಆಕೆಯೊಂದಿಗೆ ಇದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪುರುಷರ ಪೈಕಿ ಒಬ್ಬ ಗಾಜಿಯಾಬಾದ್‌ ನವನಾಗಿದ್ದು ಇನ್ನೊಬ್ಬ ಬುಲಂದ್‌ಶಹರ್‌ ಮೂಲದವನು ಎಂದು ತಿಳಿದು ಬಂದಿದೆ.

ವೈದ್ಯ ತನ್ನ ಪತ್ನಿ ಮತ್ತು ಇಬ್ಬರು ಪುರುಷರ ವಿರುದ್ಧ ಅನುಚಿತ ವರ್ತನೆಯನ್ನು ಆರೋಪಿಸಿ ದೂರು ದಾಖಲಿಸಿದ್ದಾರೆ. ಮಹಿಳೆ ತನ್ನ ಪತಿ ವಿರುದ್ಧ ಇದುವರೆಗೆ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next