Advertisement
ಆದರೆ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಇದನ್ನು ಬಳಸಲು ಸರಿಯಾದ ಮಾರ್ಗ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದ್ದರಿಂದ ಇದುವರೆಗೂ ಅವರು ಅರಿಶಿನ ಬಳಸುವಾಗ ತಪ್ಪುಗಳನ್ನು ಮಾಡುತ್ತಲೇ ಬಂದಿದ್ದಾರೆ. ಇಲ್ಲಿ ಜನರು ತಮ್ಮ ಚರ್ಮಕ್ಕೆ ಅರಿಶಿನವನ್ನು ಬಳಸುವಾಗ ಮಾಡಿರುವ ತಪ್ಪುಗಳು ಯಾವುವು ಎಂದುದನ್ನು ತಿಳಿದುಕೊಳ್ಳೋಣ.
Related Articles
Advertisement
ಹೆಚ್ಚು ಸಮಯ ಬಿಡಬೇಡಿ
ಅರಿಶಿನವು ಮುಖದ ಮೇಲಿನ ಕಲೆಗಳನ್ನು ತೆಗೆಯುತ್ತದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದನ್ನು ಮುಖದ ಮೇಲೆ ದೀರ್ಘಕಾಲದವರೆಗೆ ಬಿಟ್ಟರೆ, ಅದು ನಿಮ್ಮ ಮುಖದ ಮೇಲೆ ಕಲೆ ಮೂಡುವಂತೆ ಮಾಡುತ್ತದೆ. ಆದ್ದರಿಂದ ನೀವು ಅರಿಶಿನವನ್ನು ನಿಮ್ಮ ಚರ್ಮದ ಮೇಲೆ ಹೆಚ್ಚು ಹೊತ್ತು ಬಿಡದಂತೆ ನೋಡಿಕೊಳ್ಳಿ. ನಂತರ ಚೆನ್ನಾಗಿ ತೊಳೆಯಿರಿ. ಹಾಗೆಯೇ ಅರಿಶಿನವನ್ನು ಮುಖಕ್ಕೆ ಸರಿಯಾಗಿ ಹಚ್ಚದಿದ್ದರೆ ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸಮ ಮತ್ತು ತೆಳುವಾದ ಪದರವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಬೇಕು.
ಚೆನ್ನಾಗಿ ಮುಖ ತೊಳೆಯಿರಿ
ಚರ್ಮದ ರಕ್ಷಣೆಯ ವಿಷಯಕ್ಕೆ ಬಂದಾಗ ನಮ್ಮ ಮುಖವನ್ನು ಚೆನ್ನಾಗಿ ತೊಳೆಯುವುದು ಒಂದು ಪ್ರಮುಖ ಅಂಶವಾಗಿದೆ. ಆದರೆ ದೈನಂದಿನ ಜೀವನದ ಒತ್ತಡದಿಂದ, ನಮ್ಮ ಚರ್ಮದ ರಕ್ಷಣೆಯ ದಿನಚರಿಯ ಮುಖ್ಯವಾದ ಅಂಶಗಳನ್ನು ನಾವು ಹೆಚ್ಚಾಗಿ ಕಡೆಗಣಿಸುತ್ತಿದ್ದೇವೆ. ಅವುಗಳಲ್ಲಿ ಒಂದು ನಮ್ಮ ಮುಖಗಳನ್ನು ಸಂಪೂರ್ಣವಾಗಿ ತೊಳೆಯುವುದು. ನೀವು ನಿಮ್ಮ ಚರ್ಮದಿಂದ ಅರಿಶಿನವನ್ನು ತೆಗೆದ ನಂತರ, ಅದನ್ನು ತಣ್ಣನೆಯ ಅಥವಾ ಉಗುರು ಬೆಚ್ಚಗಿನ ಉಷ್ಣಾಂಶದ ನೀರಿನಿಂದ ಚೆನ್ನಾಗಿ ತೊಳೆಯಬೇಕು.
ಫೇಸ್ ವಾಶ್ ಬಳಸಬೇಡಿ
ಬಹಳಷ್ಟು ಜನರು ಮಾಡುವ ತಪ್ಪೆಂದರೆ ಫೇಸ್ ಪ್ಯಾಕ್ ಹಾಕಿದ ನಂತರ, ಮುಖವನ್ನು ಸೋಪಿನಿಂದ ತೊಳೆಯುವುದು. ಅರಿಶಿನ ಪ್ಯಾಕ್ ತೆಗೆದ ನಂತರ, ನಿಮ್ಮ ಚರ್ಮ ಅಥವಾ ಮುಖದ ಮೇಲೆ 24 ರಿಂದ 48 ಗಂಟೆಗಳ ಕಾಲ ಸೋಪ್ ಬಳಸುವುದನ್ನು ತಪ್ಪಿಸಿ. ಹಾಗೆಯೇ ಫೇಸ್ ಪ್ಯಾಕ್ ತೆಗೆದ ನಂತರ ಯಾವುದೇ ಫೇಸ್ ವಾಶ್ ಅನ್ನು ಸಹ ಎಂದಿಗೂ ಬಳಸಬೇಡಿ. ಜನರು ಮಾಡುವ ಸಾಮಾನ್ಯ ತಪ್ಪೆಂದರೆ ಫೇಸ್ ಪ್ಯಾಕ್ ಅನ್ನು ಹಚ್ಚಿದ ನಂತರ ಮುಖವನ್ನು ಸೋಪಿನಿಂದ ತೊಳೆಯುವುದು ಅಥವಾ ಮುಖ ಸ್ವಚ್ಛಗೊಳಿಸುವುದು.
ಈ ರೀತಿಯ ತಪ್ಪನ್ನು ಮಾಡುವುದರಿಂದ ಫೇಸ್ ಪ್ಯಾಕ್’ನ ಯಾವುದೇ ಪ್ರಯೋಜನಗಳು ಸಿಗುವುದಿಲ್ಲ, ತಕ್ಷಣ ಹೊರಟುಗೋಗುತ್ತದೆ. ಜೊತೆಗೆ ಫೇಸ್ ಪ್ಯಾಕ್ ಅನ್ನು ಹಚ್ಚಿದ ನಂತರ ಮುಂದಿನ 24 ಗಂಟೆಗಳ ಕಾಲ ಯಾವುದೇ ಫೇಸ್ ವಾಶ್ ಅನ್ನು ಬಳಸಬಾರದು ಎಂದು ತಜ್ಞರು ಬಲವಾಗಿ ಶಿಫಾರಸ್ಸು ಮಾಡುತ್ತಾರೆ.
*ಶ್ವೇತಾ ಮುಂಡ್ರುಪ್ಪಾಡಿ