Advertisement
ಆಭರಣ ಜಗತ್ತಿನಲ್ಲಿ ಹೊಸ ಡಿಸೈನ್‌ಗಳ ಆಯುಷ್ಯ ಅತಿ ಕಡಿಮೆ ಅವಧಿಯದ್ದು. ಆದರೆ, ಕೆಲವು ಡಿಸೈನ್‌ಗಳು ಎಂದೆಂದಿಗೂ ತಮ್ಮ ಹೊಳಪು ಕಳೆದುಕೊಳ್ಳುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ. ಅವುಗಳಲ್ಲಿ ಚಾಕರ್ ನೆಕ್ಲೆಸ್, ಇಯರ್‌ಕಫ್ನಂಥ ಆಭರಣಗಳು ಮುಖ್ಯವಾದುವು. ಈ ಒಡವೆಗಳು ಕೇವಲ ಅಲಂಕಾರವನ್ನಷ್ಟೇ ಪ್ರತಿನಿಧಿಸುವುದಲ್ಲ, ಅದು ಒಂದು ಸುಸಂಪನ್ನ ಅಭಿರುಚಿಯ ಕೈಗನ್ನಡಿಯೂ ಹೌದು. ಈ ಜ್ಯುವೆಲರಿ ಆಯ್ಕೆ, ಫ್ಯಾಷನ್ ಜಗತ್ತಿಗೆ ನೀವೆಷ್ಟು ಬೇಗ ಅಪ್‌ಡೇಟ್ ಆಗಿದ್ದೀರೆಂದು ಸಾರುತ್ತದೆ. ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಒಡವೆಗಳು ಇಲ್ಲಿವೆ.
ಹೊಸ ವಿನ್ಯಾಸದ, ವಜ್ರದ ಹಾಗಿರುವ ಆಶ್ಚರ್, ಎಮರಾಲ್ಡ್‌ನಂಥ ರತ್ನಗಳ ಆಭರಣಗಳು ಎಂದೆಂದಿಗೂ ಹೊಸದರಂತೆ ಇರುತ್ತವೆ. ಈ ರೀತಿಯ ಫ್ಯಾಷನ್, ವಿಶೇಷವಾಗಿ ನಿಶ್ಚಿತಾರ್ಥದ ಉಂಗುರಗಳಿಗೆ ಹೊಂದುತ್ತವೆ. ಇದೇ ಮಾದರಿಯ ಬಳೆಗಳು, ಮಲ್ಟಿಲೈನ್ಸ್ ನೆಕ್ಲೆಸ್‌ಗಳು ಫ್ಯಾಷನ್‌ಪ್ರಿಯರ ಅಚ್ಚುಮೆಚ್ಚಿನ ಒಡವೆಗಳು. 2. ವಜ್ರಲೇಪಿತ ಆಭರಣಗಳು
ಡಿಸೈನ್ ಯಾವುದೇ ಇರಲಿ, ವಜ್ರದ ಒಡವೆಗಳು ಸದಾಕಾಲ ಮುಂಚೂಣಿಯಲ್ಲಿರುವ ಟ್ರೆಂಡ್. ಒಂಟಿ ರೇಖೆಯ ಅಥವಾ ಗೆರೆಯ ವಜ್ರದ ಕೊರಳ ಸರ ಮತ್ತು ಬಳೆಗಳು ಯುವತಿಯರನ್ನು ಆಕರ್ಷಿಸುತ್ತವೆ. ಸಿಂಪಲ್ ಆಗಿರುವ ಕಾರಣ, ಪ್ರತಿದಿನ ತೊಡಬಹುದಾದ್ದರಿಂದ ಇವು ಎಲ್ಲರಿಗೂ ಇಷ್ಟವಾಗುತ್ತದೆ.
Related Articles
ಮದುವೆ ಸಮಾರಂಭಗಳಲ್ಲಿ ಎಲ್ಲರ ಗಮನ ಸೆಳೆಯುವ ಆಭರಣ ಇದು. ದಿರಿಸಿಗೆ ತಕ್ಕಂತೆ ಧರಿಸಿದರೆ, ಕೊರಳಿನ ಅಂದ ಇನ್ನೂ ಹೆಚ್ಚುತ್ತದೆ. ಸರಕ್ಕೆ ಅಂಟಿಕೊಂಡಂತೆ ಡೈಮಂಡ್ ಅಥವಾ ಮಧ್ಯ ಭಾಗದಲ್ಲಿ ದೊಡ್ಡ ಹರಳುಗಳಿದ್ದರೆ ಹೆಚ್ಚು ಸೂಕ್ತ. ಆಯ್ಕೆ ಮಾಡುವಾಗ ಅಳತೆಗೆ ತಕ್ಕಂತೆ, ದಿರಿಸಿಗೆ ಹೊಂದುವಂತೆ ಇರಲಿ. ಅತ್ಯಂತ ಉದ್ದದ ಗೆರೆಗಳುಳ್ಳ ಚಾಕರ್ ನೆಕ್‌ಲೆಸ್‌ಗಳು ಗ್ರಾಂಡ್ ಲುಕ್ ಕೊಟ್ಟರೂ, ಆಕರ್ಷಣೆಯಲ್ಲಿ ಪ್ರಖರತೆ ಇರುವುದಿಲ್ಲ.
Advertisement
4. ಇಯರ್ ಕಪ್ಸ್ತರುಣಿಯರ ಅಭಿರುಚಿಗೆ ತಕ್ಕಂಥ ಇಯರ್ ಕಪ್ಸ್ ಡಿಸೈನ್‌ಗಳು ಹೊಸ ಟ್ರೆಂಡ್ ಸೃಷ್ಟಿಸಿವೆ. ವಿವಿಧ ಪ್ರಾಣಿಗಳ, ಹೂವಿನ ಚಿತ್ತಾರವಿರುವ, ಹರಳುಗಳ ಹೊರತಾಗಿಯೂ ಅರ್ಧ ಚಂದ್ರ, ಪತಂಗ, ಸುರುಳಿ, ಹಕ್ಕಿ-ರೆಕ್ಕೆಯ ಡಿಸೈನ್‌ಗಳು ವಿಶೇಷವಾಗಿ ಕಣ್ಮನ ಸೆಳೆಯುತ್ತವೆ. ಮಲ್ಟಿ ಲೇಯರ್‌ಗಳು ಸಹ ಮುಂಚೂಣಿಯಲ್ಲಿವೆ. ಯಾವುದು ಸೂಕ್ತ?
ಭಾರತೀಯ ಹೆಂಗಸರ ಚರ್ಮಕ್ಕೆ ಎಲ್ಲಾ ನಮೂನೆಯ ಬಣ್ಣದ ಜ್ಯುವೆಲರಿಗಳೂ ಹೊಂದುತ್ತವೆ. ನೇರಳೆ ಮಿಶ್ರಿತ ಕೆಂಪು ಬಣ್ಣ, ತಿಳಿನೀಲಿ, ಹಸಿರು, ಹಸಿರುಮಿಶ್ರಿತ ನೀಲಿ, ಬೂದು ಬಣ್ಣದ ಕಾಂಬಿನೇಷನ್‌ಗಳು ಭಾರತೀಯ ನಾರಿಯರಿಗೆ ಸೂಕ್ತ ಎನ್ನುವುದು ಫ್ಯಾಷನ್ ಡಿಸೈನರ್‌ಗಳ ಅಭಿಪ್ರಾಯ. ಎಡೆಯೂರು ಪಲ್ಲವಿ