ಮಣಿಪಾಲ: ಪ್ರಪಂಚದಾದ್ಯಂತ ಕೋವಿಡ್ ಆರ್ಭಟ ಮುಂದುವರೆದಿದೆ. ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆ ಪ್ರತಿದಿನ 15 ಸಾವಿರ ದಾಟುತ್ತಿದ್ದು ನೂರಾರು ಮಂದಿ ಮೃತರಾಗುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಂತೂ ಕೋವಿಡ್ ಭೀತಿ ಹೆಚ್ಚಾಗಿದ್ದು ರಾಜ್ಯ ರಾಜಧಾನಿಯನ್ನು ಸಂಪೂರ್ಣ ಲಾಕ್ ಡೌನ್ ಮಾಡಬೇಕೆಂಬ ಕೂಗುಗಳು ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಉದಯವಾಣಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿರುವುದರಿಂದ ಸಂಫೂರ್ಣ ಲಾಕ್ ಡೌನ್ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವೇ ಎಂಬ ಪ್ರೆಶ್ನೆಯನ್ನು ಕೇಳಿತ್ತು. ಇದಕ್ಕೆ ಹಲವಾರು ಮಂದಿ ಓದುಗರು ಪ್ರತಿಕ್ರಿಯಿಸಿದ್ದು ಆಯ್ದ ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಿಲಾಗಿದೆ.
ವೈರಸ್ ಪ್ರಭಾವ ಹೆಚ್ಚಾಗುತ್ತಿರುವುದರಿಂದ ಬೆಂಗಳೂರನ್ನು ಸಂಪೂರ್ಣ ಲಾಕ್ ಡೌನ್ ಮಾಡಬೇಕೆಂದು ಶೇ. 50 ರಷ್ಟು ಓದುಗರು ಅಭಿಪ್ರಾಯಪಟ್ಟಿದ್ದಾರೆ.
ಸಣ್ಣಮಾರಪ್ಪ ಚಂಗಾವರ: ಲಾಕ್ ಡೌನ್ ಮಾಡುವುದಕ್ಕಿಂತ ಜನರೇ ಸ್ವಯಂ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಲಾಕ್ ಡೌನ್ ಮುಖ್ಯ ಎನಿಸಿದರೂ, ಸಂಘಜೀವಿ ಮನುಷ್ಯನಿಗೆ ಇದು ತುಸು ಕಷ್ಟವೇ.
ಸತೀಶ್ ರಾವ್: ಕೋವಿಡ್ ಈ ಮಟ್ಟಕ್ಕೆ ಹಬ್ಬಲು ನೇರವಾಗಿ ಸರ್ಕಾರದ ಆತುರದ ನಿರ್ಧಾರಗಳು ಕಾರಣ. ಈಗ ಮತ್ತೆ ಲಾಕ್ ಡೌನ್ ಹೇರುವುದು ಹಾಸ್ಯಾಸ್ಪದ.
ಶ್ರೀಕಾಂತ್: ಲಾಕ್ ಡೌನ್ ಜಾರಿಗೊಳಿಸಬೇಕು. ಏಕೆಂದರೇ ಇದು ಖಂಡಿತ ಸಮುದಾಯಕ್ಕೆ ಹರಡೋ ಲಕ್ಷಣ ಕಾಣಿಸುತ್ತಿದೆ. ಈಗಲೇ ಎಚ್ಚೆತ್ತುಕೊಂಡರೆ ಒಳ್ಳೆಯದು. ಬೆಂಗಳೂರು ಮಾತ್ರವಲ್ಲದೆ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡಬೇಕು.
ಸತ್ಯನಾರಾಯಣ: ಲಾಕ್ ಡೌನ್ ಒಂದೇ ಪರಿಹಾರವಲ್ಲ. ನಾಗರಿಕರು ಪರಿಸ್ಥಿತಿಯನ್ನು ಅರಿತುಕೊಂಡು ಸರ್ಕಾರದ ಜೊತೆ ಕೈಜೋಡಿಸಬೇಕು. ಮಾತ್ರವಲ್ಲದೆ ಆದೇಶಗಳನ್ನು ಪಾಲಿಸಬೇಕು. ಹಾಗಾದಲ್ಲಿ ಮಾತ್ರ ನಿಯಂತ್ರಣಕ್ಕೆ ಬರಲು ಸಾಧ್ಯ.