Advertisement
ಎಲ್ಲವೂ ಕಲೆಸಿಹೋದಾಗ ವಿರಾಟ ದರ್ಶನವಾಗುತ್ತದೆ. ಏಳು ಬಣ್ಣಗಳು ಕಣ್ಣು ಗ್ರಹಿಸುವ ಬಿಡಿಭಾಗಗಳನ್ನು ಗ್ರಹಿಸಲಾರದಷ್ಟು ವೇಗವಾಗಿ ಸುತ್ತಿಕೊಂಡಾಗ ಬಿಳಿಯ ಬಣ್ಣವಾಗುತ್ತದೆ. ವಾಸ್ತವದಲ್ಲಿ ಬಿಳಿಯ ಬಣ್ಣವೂ ಇಲ್ಲ ಕಪ್ಪು ಬಣ್ಣವೂ ಇಲ್ಲ. ಆದರೂ ಬಿಳಿಯನ್ನೂ ಕಪ್ಪನ್ನೂ ನಮ್ಮ ಸಂಸ್ಕೃತಿಯಲ್ಲಿ ಆಧ್ಯಾತ್ಮಕ ವಿಚಾರ ವಿಶೇಷಗಳಲ್ಲಿ ಪ್ರಧಾನವಾಗಿ ಗ್ರಹಿಸುತ್ತೇವೆ. ಕೃಷ್ಣನು ಅರ್ಜುನನಿಗೆ ತೆರೆದು ತೋರಿದ ವಿರಾಟ ದರ್ಶನವನ್ನು ನಮ್ಮ ಕಲಾವಿದರುಗಳು ವೈಭವೀಕರಿಸಿ ಒಡಮೂಡಿಸುವ ಪ್ರಮಾಣಬದ್ಧ ವಿರಾಟ ರೂಪ ಬೇರೆ. ಆದರೆ ವಾಸ್ತವದಲ್ಲಿ ನೀರು, ಮಣ್ಣು, ಗಾಳಿ, ಬೆಳಕು ಹಾಗೂ ಅನಂತವಾದ ಭ್ರಮಾಪೂರ್ಣ ಆಕಾಶತತ್ವ ಅಲ್ಲಿ ಒಂದು ಇನ್ನೊಂದರೊಳಗೆ ಕಲಿಸಿ ಹೋದ ವಿಕಾರ ಸ್ವರೂಪ. ಗಣಪತಿಯನ್ನು ಪ್ರಥಮಂ ವಕ್ರತುಂಡ ಎಂದು ಕರೆಯುವುದರಲ್ಲೂ ಇದೇ ಆಧಾರ. ಪ್ರಥಮದಲ್ಲಿ ಆಕಾರದ ವಿಕಾರವೇ ಎಲ್ಲದರ ಮೂಲ. ನಂತರ ಅಲ್ಲಿ ಆಕೃತಿಗಳು ಒಡಮೂಡ ತೊಡಗಿದವು. ಈ ಆಕೃತಿಗಳಿಗೆ ಅಂಕೆ ಸಂಖ್ಯೆ ಆಧಾರವಾಗಿದೆ. ಒಬ್ಬ ಮನುಷ್ಯನಿಗೆ ಒಂದೇ ಮುಖ, ಎರಡೇ ಕಣ್ಣು, ಎರಡೇ ಕಿವಿ, ಒಂದೇ ನಾಲಗೆ, ಒಂದೇ ಮೂಗು ಇತ್ಯಾದಿ ಇದ್ದಾಗಲೇ ಧನಾತ್ಮಕ ಬಲವನ್ನು ಹೊಂದಲು ಸಾಧ್ಯ. ಒಂದೇ ಒಂದು ಅಳತೆ ಮೀರಿ ಇದ್ದರೂ ಅದು ವಿಕಾರ ವೆನಿಸುತ್ತದೆ.
ಭಾರತೀಯ ಧರ್ಮ ಮೀಮಾಂಸೆ, ಸಂಸ್ಕೃತಿ, ಆಗಮ ಶಾಸ್ತ್ರಾದಿ ಸಾಂಗತ್ಯ, ತಂತ್ರ, ಯಂತ್ರ, ಮಂತ್ರ ವಿವೇಚನೆಗಳಲ್ಲಿ ಅಂಕೆಗಳು, ಸಂಖ್ಯೆಗಳು ಅತಿಶಯವಾದ ಮಹತ್ವವನ್ನು ಸಾಧಕ ಸಿದ್ಧಿಗೆ ತಳಪಾಯ ಒದಗಿಸುತ್ತದೆಂಬುದರ ಉಲ್ಲೇಖಗಳಿವೆ. ಮೂರು, ಐದು, ಏಳು, ಒಂಭತ್ತು, ಹನ್ನೆರಡು, ಹದಿಮೂರು, ಹದಿನಾಲ್ಕು, ಇಪ್ಪತ್ತೂಂದು, ನೂರಾ ಎಂಟು ಇತ್ಯಾದಿ ಬಹಳ ರೀತಿಯಲ್ಲಿ ಶಕ್ತಿಯುತ ಸಂಖ್ಯೆಗಳಾಗಿದೆ. ಸಾಧನೆಗೆ ಈ ಅಂಕಿ ಸಂಖ್ಯೆಗಳು ಒಂದು ಶಿಷ್ಟ ಸ್ಪಂದನವನ್ನು ಪಡಿಮೂಡಿಸುತ್ತದೆ. ನೂರಾ ಎಂಟು ಗಾಯತ್ರಿ ಮಂತ್ರ ಉಚ್ಛ ರಿಸುವುದು ಎಂದರೆ ಅದನ್ನು ಸಮ್ಮಿಳಿತ ಪೂರ್ವಕ ಸದೃಢಸ್ವರದ ಏರಿಳಿತಗಳಲ್ಲಿ ಅನುಷ್ಠಾನಗೊಳಿಸಿದಾಗ ಕಾಂತ ವಲಯಗಳು ಮನುಷ್ಯನ ಜೈವಿಕ ಅನುಸಂಧಾನದಲ್ಲಿ ವಿದ್ಯುತ್ ಬಲುºಗಳು ಉರಿದು ಬೆಳಕು ಕೊಡುವಂತೆ ಪ್ರಚ್ಛನ್ನತೆಯನ್ನು ಕೊಡುತ್ತದೆ. ಸಪ್ತಶತಿ ರುದ್ರಾದಿ ಚಮಕಗಳು ನಿರ್ದಿಷ್ಟ ಸಂಖ್ಯೆಗಳಲ್ಲಿ
ಉದ್ಘೋಷಗೊಂಡಾಗಲೂ ಜೈವಿಕ ಸ್ಪಂದನಗಳಿಗೆ ಚಾಲನೆ ದೊರಕಿ ವ್ಯಕ್ತಿ ಕ್ರಿಯಾಶೀಲನಾಗುತ್ತಾನೆ. ಮೃತ್ಯುಂಜಯ ಮಂತ್ರ ಉಚ್ಛಾರಣೆ ಕೊಲೆಸ್ಟ್ರಾಲ್ ಸಂಖ್ಯೆಯನ್ನು ಅಧಿಕ ಸಕ್ಕರೆ ಕಾಯಿಲೆಯ ನಿಯಂತ್ರಣವನ್ನು ಸಾಕಾರಗೊಳಿಸುತ್ತದೆ. ಆಶ್ಚರ್ಯವಾದರೂ ಇದು ಸತ್ಯ. ಈ ಎಲ್ಲಾ ಮಂತ್ರ ಪಠಣಗಳು ಇಂದು ನಾವು ಕಾಣುತ್ತಿರುವ ವ್ಯಾಪಾರಶೀಲ ಜಗತ್ತಿನ ವಿಧಿವಿಧಾನಗಳಲ್ಲಿ ಫಲಕಾರಿಯಾಗದಿರುವ ಅನಾಹುತ ಗಮನಿಸಿ, ಇವುಗಳೊಳಗಿನ ಅಂತರ್ಗತ ಸತ್ಯವನ್ನ ಹಾಸ್ಯಸ್ಪದ ಗೊಳಿಸುವ ನಿರ್ಣಯಕ್ಕೆ ಬರುವ ಆತು ತೋರಬಾರದು. ಹೀಗಾಗಿ ಅದೃಷ್ಟ ಶಾಲಿ ಅಂಕೆಯನ್ನು, ಸಂಖ್ಯೆಯನ್ನು ಒಬ್ಬ ತನ್ನ ಜೈವಿಕ ಆವರಣಕ್ಕೆ ಸರಳವಾಗುವ ಮಂತ್ರ, ಭಕ್ತಿ ಆಗದ ಮೂಲಕ ಕಂಡು ಹಿಡಿದುಕೊಳ್ಳಬೇಕು.
Related Articles
Advertisement
ಹೆಸರಿನ ಮೂಲಕ ಅದೃಷ್ಟ ಸಂಖ್ಯೆ ಕಂಡು ಹಿಡಿಯಬಹುದೇ?ಬಹಳ ಜನ ಈ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ನಮ್ಮ ವ್ಯಾಪರೀಕರಣ ಜಗತ್ತು ಅದೃಷ್ಟದ ಮೇಲೆ ನಿಂತಿದೆ ಎಂಬುದು ನೇರ ನೋಟಕ್ಕೆ ಕಾಣುವ ಸತ್ಯ. ಆದರೆ ವ್ಯಾವಹಾರಿಕ ಜಗತ್ತಲ್ಲದ ಅಧ್ಯಾತ್ಮದ, ಅವಧೂತ ಶಕ್ತಿಯ ಸಂಪನ್ನ ಆವರಣದ ತಾಂತ್ರಿಕ ಜಗತ್ತು ಗೂಢವೊಂದನ್ನು ವಿಶ್ಲೇಷಿಸಿ ಅದೃಷ್ಟದ ನಿಕ್ಷೇಪವನ್ನು ಒದಗಿಸಿಕೊಡುತ್ತದೆ. ಇದನ್ನು ತಿಳಿಯಲು ವ್ಯವಧಾನ, ತಾಳ್ಮೆಗಳು ಬೇಕು. ಹೀಗಾಗಿ ವ್ಯಕ್ತಿಯ ಹೆಸರೊಂದನ್ನೇ ಅಲ್ಲದೇ, ಅವನ ಜೀವನದ ಕೆಲ ಘಟನಾವಳಿಗಳ ಆಧಾರದ ಮೇಲೆ, ಬ್ರಹ್ಮ ಕಲ್ಪದ ಪದ್ಮದೆಳೆಗಳನ್ನು, ಅವನ ಜಾತಕ, ಹಸ್ತರೇಖೆಗಳ ಕೆಲ ಸಂಯೋಜನೆ ಆಧರಿಸಿ ಅದೃಷ್ಟ ಸಂಖ್ಯೆ ನಿರ್ಣಯವಾಗಬೇಕು. ಇದನ್ನು ನಿರ್ಧರಿಸಲು ಆತುರ ಸಾಧುವಲ್ಲ. ನಮ್ಮ ಮಾಜಿ ಪ್ರಧಾನಿ, ಜವಾಹರಲಾಲ್ ನೆಹರು ಅವರ ಏಳುಬೀಳುಗಳು 5ರಿಂದ 8ರಿಂದ ಮತ್ತು 7ರಿಂದ ಅನೇಕ ಅಂಶಗಳನ್ನು ತನ್ನ ಮೂಲದಲ್ಲಿ ಆರಿಸಿಕೊಂಡಿದ್ದವು ಎಂದರೆ ಆಶ್ಚರ್ಯವಾದೀತು. ಆರು ಅವರನ್ನು ಸೋಲಿಸಲೆಂದೇ ಬಂದ ಸಂಖ್ಯೆಯಾಗಿರುತ್ತಿತ್ತು. ಗುರುವಿಗೂ, ಕೇತುವಿಗೂ ಬಿದ್ದ ಜಟಾಪಟಿಯ ಆರಂಕಿಯ ಸಂದರ್ಭದ ಅವರ ನಿರ್ಣಯಗಳಿಗೆ ಧಕ್ಕೆ ತರುತ್ತಿತ್ತು. ವಿರೋಧಿಗಳನ್ನು ಗಮನಿಸುವ ಶಕ್ತಿಯನ್ನು ಅವರಿಗೆ ಆರು ಒದಗಿಸಿತ್ತಾದರೂ, ಆರು ಅನೇಕ ಅವನಮಾನಗಳನ್ನೂ ಸೃಷ್ಟಿಸಿತ್ತು. ಅವರ ಜಾತಕದ ಕೇತು ಗುರುವನ್ನು ನಿಯಂತ್ರಿಸಿದ್ದು ಇದಕ್ಕೆ ಕಾರಣ. ಆದರೆ ಮೋಹಕ ರೂಪ, ಶುಭ ಕರ್ತರಿ ಸೂರ್ಯ ಶನಿ ತರುವ ಮಾತಿನ ದೋಷವನ್ನು ನಿಯಂತ್ರಿಸಿದ್ದ. ಇನ್ನಿಷ್ಟು ವಿವರಗಳು, ವಿಶ್ಲೇಷಣೆಗಳು ಬೇಡ. ಇದು ಅವರ ವೈಯುಕ್ತಿಕ ಜೀವನವನ್ನ ಕಲಕಿದಂತಾಗುತ್ತದೆ. ಅದು ಸಾಧುವಲ್ಲ. ರಿಚರ್ಡ ನಿಕ್ಕನ್ ಅಮೇರಿಕಾದ ಮಾಜಿ ಅಧ್ಯಕ್ಷರಿಗೆ ಸಂಖ್ಯೆ ಎರಡು ಯಾವಾಗಲೂ ಆಘಾತಕಾರಿಯಾಗಿರುತ್ತಿತ್ತು. ಸಂಖ್ಯೆ ಎರಡು ಶುಭ ಪ್ರದವಾದುದಲ್ಲವಾದ್ದರಿಂದ ಅವರ ವಾಕ್ ಸ್ಥಾನಕ್ಕೆ ಪೆಟ್ಟು ಒದಿತ್ತು. ಅಧ್ಯಕ್ಷರಿಗೆ ಸಲ್ಲದ ಮಾತಿನ ಚಲಾವಣೆ ಅವರಿಂದ ಸಾಧ್ಯವಾಗಿ ವಾಟರ್ ಗೇಟ್ ಹಗರಣ ಸಂಭವಿಸಿತು. ಅಧ್ಯಕ್ಷ ಸ್ಥಾನದಿಂದ ಪದಚ್ಯುತರೂ ಆದರು. ಕ್ಲಿಂಟನ್ ಕೂಡ ಅಮೇರಿಕಾದ ಮಾಜಿ ಅಧ್ಯಕ್ಷರು. 2 ಇವರ ಅದೃಷ್ಟ ಸಂಖ್ಯೆ ಹೀಗಾಗಿ ಅವರ ಜಾತಕ ಸೂರ್ಯ ಪದಚ್ಯುತರಾಗುವ ಅವಕಾಶವಿದ್ದರೂ ಅವಮಾನವನ್ನು ತಪ್ಪಿಸಿದ. ಹೀಗೆ ದಾಖಲಿಸುತ್ತ ಹೋದರೆ ಅಂಕಿ ಸಂಖ್ಯೆಗಳು ಮಾನವನ ಏಳು ಬೀಳುಗಳಲ್ಲಿ ನಿರ್ವಹಿಸುವ ಪಾತ್ರ ದೊಡ್ಡದು. ಹೀಗಾಗಿ ಅಂಕಿ, ಸಂಖ್ಯೆಗಳಲ್ಲಿ ಹಣ ಲೆಕ್ಕಾಚಾರ ಮಾತ್ರವಲ್ಲ. ಬದುಕಿನ ಕ್ರಿಯಾಶೀಲ ಯಶಸ್ಸಿನ ಪಾತ್ರಕ್ಕೂ ದಾರಿಗಳು ಅಡಗಿವೆ.