ಸಾಧಾರಣವಾಗಿ ಯಾವುದೇ ದೇವರುಗಳಿಗೂ ಹಸಿರನ್ನು ನಾವು ಪ್ರಧಾನವಾಗಿ ದೇವರುಗಳ ಇಷ್ಟದ ಬಣ್ಣ ಎನ್ನುವುದಾಗಿ ಗ್ರಹಿಸಬಹುದು. ಗರಿಕೆ, ಹುಲ್ಲು, ತ್ರಿದಳಗಳ ಬಿಲ್ವ ಪತ್ರೆ, ತುಳಸೀದಳ, ಮಾನಸೊಪ್ಪು ಬಾಳೆ ಎಲೆ, ಹುಣಿಸೆ ಮರದ ಎಲೆ ಚಿಗುರು, ನೆಲ್ಲಿ ಕಾಯಿ ವೀಳೆÂದೆಲೆ ಇತ್ಯಾದಿಗಳೆಲ್ಲಾ ಹಸಿರು ಎಲೆಗಳು ಹಸಿರು ಬಣ್ಣ. ಕಾಳಿದಾಸನೂ ಪ್ರಧಾನವಾಗಿ ಪಾರ್ವತಿಯ ಬಗ್ಗೆ ಕುಮಾರಸಂಭವ¨ಲ್ಲಿ ಬರೆಯುವಾಗೆಲ್ಲ ಹಸಿರು ಪರಿಸರ ಹಸಿರು ಬಣ್ಣವನ್ನೇ ಹೆಚ್ಚು ಪ್ರಮುಖವಾಗಿಸುತ್ತಾನೆ.
Advertisement
ಹಸಿರು ಬಣ್ಣ ಮತ್ತು ಮೇಧಾ ಶಕ್ತಿಹಸಿರು ಸಾಮಾನ್ಯವಾಗಿ ಬುಧಗ್ರಹವನ್ನು ಪ್ರತಿನಿಧಿಸುತ್ತದೆ. ಬುದ್ಧಿಯನ್ನು ಉದ್ದೀಪಿಸುವ ಬುಧ ಗ್ರಹದ ಸಲುವಾಗಿ ಪಚ್ಚೆಯನ್ನು ಧರಿಸಬೇಕು ಎನ್ನುವುದಾಗಿ ಭಾರತೀಯ ಜೋತಿಷ್ಯ ಶಾಸ್ತ್ರ ಪ್ರತಿಪಾದಿಸುತ್ತದೆ. ಹಸಿರು ಯಾವಾಗಲೂ ಜೀರ್ಣಕ್ರಿಯೆಯನ್ನೂ ರಕ್ತಶುದ್ಧಿಯನ್ನೂ ವೃದ್ಧಿಸುತ್ತದೆ. ಉತ್ತಮವಾದ ಜೀರ್ಣಕ್ರಿಯೆಯಿಂದಾಗಿ ರಕ್ತಶುದ್ಧಿಂದಾಗಿ ನಿರೋಗಿಯಾಗಿರಲು ಸಾಧ್ಯ. ಚರ್ಮವ್ಯಾಧಿ ಇರುವ ಜನ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ಸೂಕ್ತ. ಜೀವ ಸಂಜೀವಿನಿಯಾಗಿ ಹಸಿರು ಯಾವಾಗಲೂ ಮಾನವನ ಜೀವನದಲ್ಲಿ ಬೆಂಬಲಕ್ಕೆ ಬರುತ್ತಲೇ ಇರುತ್ತದೆ. ಬುಧನ ದೌರ್ಬಲ್ಯವನ್ನು ನೀಗಿಸಿಕೊಳ್ಳಲು ಪಚ್ಚೆಯನ್ನು ಬಲಗೈನ ಕಿರು ಬೆರಳು ಅಥವಾ ನಡು ಬೆರಳಿಗೆ ಧರಿಸುವುದು ಸೂಕ್ತ. ಕೊರಳ ಚೈನಿಗೆ ಪಚ್ಚೆಯ ಪದಕವನ್ನು ಮಾಡಿಕೊಂಡು ಧರಿಸುವುದೂ ಅನುಕೂಲವೇ. ಆದರೆ ಯಾವುದೇ ಕಾರಣಕ್ಕೂ ಒಬ್ಬರ ಜನ್ಮ ಕುಂಡಲಿಯ ಆಧಾರದ ಮೇಲೇ ಪಚ್ಚೆ ಹರಳಿನ ಉಪಯೋಗ ಮಾಡಬೇಕೇ ವಿನಃ ಮನಸ್ಸಿಗೆ ಬಂದಂತೆ ಧರಿಸಬಾರದು. ಬುಧನು ಮೇಧಾಶಕ್ತಿ ದಯಪಾಳಿಸುವವನಾದ್ದರಿಂದ ಬುಧನ ಶಕ್ತಿಯು ಸೂರ್ಯನ ಪ್ರಕಾಶಮಯವಾದ ಬೆಳಕಿನ ತೇಜೋಪುಂಜಃ ಬುಧನನ್ನು ಇನ್ನಿಷ್ಟು ದ್ವತ್ತನ್ನು ದಯಪಾಲಿಸುವ ಶಕ್ತಿಬಿಂದುವಾಗಿ ಪರಿವರ್ತಿಸುತ್ತದೆ. ಆದರೆ ಸೂರ್ಯನಿಗೆ ಹಸಿರಿನ ಬಗ್ಗೆ ಒಲವಿಲ್ಲ. ಹಸಿರಿನ ಕುಡಿ ಒಡೆಯಲು ಸೂರ್ಯಪ್ರಕಾಶ ಬೇಕು. ಹಾಗಲಕಾಯನ್ನು ನೇರವಾಗಿ ತಿನ್ನುವುದು ಕಷ್ಟ. ಆದರೆ ಸೂಕ್ತವಾಗಿ ಸಂಸ್ಕರಿಸಿ ಯುಕ್ತವಾದ ಮಸಾಲೆ ಉಪ್ಪುಹುಳಿ ಸೇರಿಸಿದರೆ ಹಾಗಲಕಾಯಿಯ ಬಗ್ಗೆ ಯಾರಿಗೆ ಬಾಯಲ್ಲಿ ನೀರೂರದು? ಗ್ರಹಗಳನ್ನೂ ಹಾಗೇ ಒಂದೋ ಮಂತ್ರ ಮುಖೇನಾ ಅಥವಾ ಹರಳುಗಳ ಮುಖೇನಾ ಅಥವಾ ಬಣ್ಣಗಳ ಮುಖೇನಾ ನಮಗೆ ಉತ್ತಮ ಫಲ ಒದಗಿಸುವ ಹಾಗೇ ಅವುಗಳ ಶಕ್ತಿಯನ್ನು ಒಳಿತಿಗಾಗಿ ಸಂವೇದನಾಪೂರ್ಣವಾಗಿಸಬಹುದು.
Related Articles
Advertisement
ಪಿತೃಪಿತಾಮಹರನ್ನು ಸಂಕೇತಿಸಲು ಕೂಡಾ ಕಪ್ಪುಬಣ್ಣವೇ ಸೂಕ್ತ. ಅವರು ಕಪ್ಪಿ ಹಿನ್ನೆಲೆಯ ಅಂತರಿಕ್ಷದಲ್ಲಿ ಹೋಗಿದ್ದಾರೆ ಎಂಬುದು ನಮ್ಮ ನಂಬಿಕೆ. ಬರಲಿರುವ ಎಲ್ಲಾ ಪ್ರಳಯಗಳೂ ಬೆಳಕನ್ನು ನುಂಗಿ ಕಪ್ಪನ್ನು ಸೃಷ್ಟಿಸುವ ಕಾರ್ಯ ಮರುಸೃಷ್ಟಿಗಾಗಿನ ಅನಿವಾರ್ಯ ಕ್ರಿಯೆ ಎಂಬುದನ್ನು ಭಾರತೀಯರು ಅನಾದಿಯಿಂದ ನಂಬಿದ್ದಾರೆ. ಅನಂತದ ಕಲ್ಪನೆ ಇಂದಿದು ಸ್ಪಷ್ಟ. ಛಾಯಾಪುತ್ರ ಶನೈಶ್ಚರನು ಸೂರ್ಯ ಹಾಗೂ ಛಾಯ ( ನೆರಳು ಯಾವಾಗಲು ಕಪ್ಪು ಎಂಬುದನ್ನು ನಾವಿಲ್ಲಿ ಗಮನಿಸಬೇಕು) ಇವರಿಬ್ಬರ ಮೂಲಕವಾಗಿ ಸಂಭವಿಸಲ್ಪಟ್ಟವನು ಎಂಬ ಕಥೆ ನಾವು ತಿಳಿದಿದ್ದೇವೆ. ಹೀಗಾಗಿ ಶನೈಶ್ಚರನು ಕಪ್ಪುಬಣ್ಣಕ್ಕೆ ಆಕೃತಿ ತಂದುಕೊಡುವ ಅಪೂರ್ವವಾದ ಗ್ರಹ. ಕಪ್ಪು ಬಟ್ಟೆ ಅವನಿಗೆ ಪ್ರಿಯ. ಕಾಗೆಯ ಬಣ್ಣ ಕಪ್ಪು. ಅದುವೇ ಶನೈಶ್ಚರನ ವಾಹನ. ಕಪ್ಪು ಎಳ್ಳು ಶನೈಶ್ಚರನಿಗೆ ಇಷ್ಟ. ಹಿರಿಯರ ಶ್ರಾಧœ, ಕರ್ಮ ಇತ್ಯಾದಿ ಸಂದರ್ಭದಲ್ಲಿ ಕಾಗೆ ಕಪ್ಪು ಎಳ್ಳು ಮುಖ್ಯವಾದ ಪಾತ್ರ ನಿರ್ವಹಿಸಿ ಕತ್ತಲಿಗೆ ಸರಿವ ಆತ್ಮಗಳನ್ನು ಮತ್ತೆ ಚೇತನಕ್ಕೆ ತರುವ ದಾರಿಯಲ್ಲಿ ಇದಕ್ಕಾಗಿನ ಉಪಯೋಗಕ್ಕೆಂದು ಸಾಧನವಾಗುತ್ತದೆ.
ಬೂದಿ ಬಣ್ಣ ಮತ್ತು ಜೀವದೊಳಗಿನ ಕಾವುಬೂದಿಯ ಬಣ್ಣ ಹೇಗೆಂಬುದನ್ನು ವಿವರಿಸುವುದು ಕಷ್ಟ. ತ್ರಿಮೂರ್ತಿಗಳಲ್ಲಿ ಪ್ರಮುಖನಾದ ಈಶ್ವರನು ದೇಹವನ್ನು ದಹಿಸಿದಾಗ ದೊರೆತ ಬಿಸಿ ಬೂದಿಯನ್ನು ದೇಹಕ್ಕೆ ಭಸ್ಮವಾಗಿ ಧರಿಸಿ ಭಸ್ಮಿàಭೂತನಾಗುತ್ತಾನೆ. ಶಿವನ ಶೋಭೆಯೇ ವಿಭೂತಿ. ತೀರಾ ಅಸ್ವಾಸ್ಥ್ಯದಲ್ಲಿ ಕಾಲುಗಳು ಥಂಡಿ ಹುಟ್ಟಿದಾಗ ಕಾಲುಗಳಿಗೆ ಪಾದಕ್ಕೆ ವಿಭೂತಿ ಬಳಿದು ತಿಕ್ಕುತ್ತಾರೆ. ಜೀವದ ಚಲನೆಗೆ ಬೇಕಾದ ಕಾಂತೀಯ ಶಕ್ತಿ ವಿದ್ಯುತ್ ತರಂಗ ಬೂದಿಯಲ್ಲಿ ಲಭ್ಯ. ಬೂದಿಬಣ್ಣ ಯಾವಾಗಲೂ ಮರು ಜನ್ಮದ ಕುರಿತಾಗಿನ ಸಂಕೇತ. ಶಿವನು ಜೀವವನ್ನು ಬಿಡುಗಡೆಗೊಳಿಸಿ ತನ್ನೆಡೆಗೆ ಸೆಳೆದುಕೊಳ್ಳುವ ಹರ. ಜೀವದ ಭದ್ರತೆಗಾಗಿನ ಮೃತ್ಯುಂಜಯನೂ ಹೌದು. ಭೂದಿಯಿಂದಾಗಿ ದೇಹ ಒಂದು ಸುಸಂಬದ್ಧ ನೆಲೆಯಲ್ಲಿ ಶಾಖವನ್ನು ಸಂರಕ್ಷಿಸುತ್ತದೆ. ಸಾಧಾರಣವಾಗಿ ಬೂದಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳುವುದರಿಂದ ನರ ಸಂಬಂಧಿ ರಕ್ತ ಸಂಬಂಧಿ ಅಸಮತೋಲನಗಳನ್ನು ನಿವಾರಿಸಿಕೊಳ್ಳಬಹುದು. ಚಂದ್ರನು ಮುಖ್ಯವಾಗಿ ಅಶ್ವಿನಿ ಮಖ ಮೂಲಾ ನಕ್ಷತ್ರದಲ್ಲಿರುವವರು ಪ್ರಧಾನವಾಗಿ ಬೂದಿಬಣ್ಣದ ಕರವಸ್ತ್ರ ಬಳಸಿದರೆ ಲವಲವಿಕೆ ಉತ್ಸಾಹಗಳಿಗೆ ಸಂವರ್ಧನೆ. ಅನಂತಶಾಸ್ತ್ರೀ