Advertisement

“ಕಿಸ್ಮತ್​’ನಲ್ಲಿ ಸಮಯದ ಬಗ್ಗೆ ವಿಜಯ್ ಹೇಳಿದ್ದೇನು ಗೊತ್ತಾ?: Watch

04:09 PM Nov 14, 2018 | |

ನಟ ವಿಜಯ ರಾಘವೇಂದ್ರ ನಿರ್ಮಾಣದಲ್ಲಿ “ಕಿಸ್ಮತ್​’ ಎಂಬ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ “ಟೈಂ ನಲ್ಲಿ ಎರಡು ಥರ, ಒಂದು ಒಳ‍್ಳೆಯ ಟೈಮ್, ಇನ್ನೊಂದು ಕೆಟ್ಟ ಟೈಮ್…’ಎಂದು ಸಮಯದ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದು, ಇದೇ ಮೊದಲ ಬಾರಿಗೆ ಡೈರೆಕ್ಟರ್‌ ಕ್ಯಾಪ್‌ ತೊಟ್ಟು ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ.

Advertisement

ಆ್ಯಕ್ಷನ್, ಕಾಮಿಡಿ ಹಾಗೂ ಹಲವು ಕುತೂಹಲಕಾರಿ ಘಟನೆಗಳ ಸುತ್ತ ಕಥೆ ಸುತ್ತೋ ಝಲಕ್‌ ಇದೆ. ಎಂದಿನಂತೆ ವಿಜಯ್ ತಮ್ಮ ನಟನೆ, ಆ್ಯಕ್ಷನ್‌ನಲ್ಲಿ ಮಾಸ್ ಅನ್ನೋದು ಟ್ರೈಲರ್‌ನಲ್ಲೇ ಗೊತ್ತಾಗುತ್ತಿದೆ. ಅಂದಹಾಗೆ, ಕಾಮಿಡಿ ಥ್ರಿಲ್ಲರ್ ಜಾನರ್‌ನ ಸಿನಿಮಾ “ಕಿಸ್ಮತ್‌’ ಚಿತ್ರ ಮಲೆಯಾಳಂ-ತಮಿಳಿನ “ನೇರಂ’ ಚಿತ್ರದ ರಿಮೇಕ್. ಚಿತ್ರಕ್ಕೆ ರಾಜೇಶ್ ಮುರುಗೇಶನ್ ಸಂಗೀತ ನಿರ್ದೇಶನ, ರಾಜೇಶ್ ಯಾದವ್ ಅವರ ಛಾಯಾಗ್ರಹಣವಿದೆ.

ವಿಜಯರಾಘವೇಂದ್ರ, ಸಂಗೀತಾ ಭಟ್, ಸುಂದರ್‌ರಾಜ್, ನವೀನ್ ಕೃಷ್ಣ, ದಿಲೀಪ್ ರಾಜ್, ನಂದ, ತಬಲನಾಣಿ ಮುಂತಾದವರ ತಾರಾಬಳಗವಿದೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವು ಇದೇ ನವೆಂಬರ್ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next