Advertisement

ಪಿತೃ ದೋಷ; ಹೀಗಂದರೇನು ಗೊತ್ತಾ?

02:56 PM Dec 02, 2017 | |

ಪಿತೃದೋಷದ ಬಗೆಗೆ ಒಬ್ಬ ವ್ಯಕ್ತಿಯ ಜಾತಕದಲ್ಲಿ ಸುಳಿವುಗಳು ಸಿಗುತ್ತದೆ. ಬ್ರಹ್ಮ ಪುರಾಣ, ಗರುಡ ಪುರಾಣ ಮುಂತಾದ ಪುರಾಣಗಳಲ್ಲಿ ದೊರಕುವ ಪಿತೃದೋಷದ ವಿಚಾರಗಳನ್ನು, ಜಾತಕದಲ್ಲಿ ಕೆನೆಗಟ್ಟುವ ಪಿತೃ ದೋಷ ವಿಚಾರ ಸ್ಥಿತಿಗತಿಗಳನ್ನು ಒಟ್ಟಂದದಲ್ಲಿ ಸೂಕ್ಷ್ಮವಾಗಿ ಅರಿಯಬೇಕು. ಮಾನವನ ಸಂಬಂಧವಾಗಿ (ಇತರ ಪ್ರಾಣಿಗಳಿಗಿಂತಲೂ ಬೇರೆಯೇ ಆಗಿ ದೇವರೂ ಆಗಲು ಸಾಧ್ಯವಿಲ್ಲದ, ರಾಕ್ಷಸನಾಗಬಾರದ ಮಾನವೀಯತೆಯ ಅಪ್ಪಟ ಗುಣ ಧರ್ಮಗಳಿಂದ, ನಾಕರೀಕತೆಯ ಕಟ್ಟುಪಾಡುಗಳೊಂದಿಗೆ)  ಒಂದು ಜಾತಕ ಕುಂಡಲಿ ತನ್ನ ಗರ್ಭದಲ್ಲಿ ಅವನ ವ್ಯಕ್ತಿತ್ವ ಸಿದ್ಧಿ ಏನು, ವಾಕ್‌ ಚಾತುರ್ಯವೇನು, ಆರ್ಥಿಕ ಬಲವೇನು,ಸ್ಥೈರ್ಯ ಧೈರ್ಯಗಳೇನು, ಸುಖೀದ ವಿಚಾರವಾದ ಒಟ್ಟೂ ಶಕ್ತಿ ಅಥವಾ ಮತಿಗಳೇನು, ಸಂತಾನದ ವಿಷಯದ ಏರಿಳಿತಗಳೇನು, ದರಿದ್ರಾದಿ ಸಕಲ ದುರಾದೃಷ್ಟಗಳ ವಿಚಾರಗಳೇನು, ವೈವಾಹಿಕ ಜೀವನದ ಪಾಲೇನು, ಮರಣ ಯಾವಾಗ, ಹೇಗೆ ಮತ್ತು ಏಕೆ ಸಂಬಂಧಿಸಬಹುದು ಎಂಬುದರ ಚೌಕಟ್ಟುಗಳು ಯಾವ ಬಗೆಯದು, ಭಾಗ್ಯದ ವಿಚಾರವಾಗಿ ಏನು ಪಡೆದು ಬಂದಿರುವುದು, ಮಾಡುವ ಕಾಯಕ ಯಾವುದಾಗಿರುತ್ತದೆ. ಭಾಗ್ಯದ ನಿಕ್ಷೇಪ ಒಳಿತಿನ ಮೊತ್ತ ಕಟ್ಟಿಕೊಟ್ಟಿದೆಯೇ ವಿಧಿ, ನಷ್ಟಗಳ ಯಾದಿ ಹೇಗಿರುತ್ತದೆ ಇತ್ಯಾದಿ ಇತ್ಯಾದಿಗಳ ಬಗೆಗಿನ ಸೂಕ್ಷ್ಮಗಳನ್ನು ಕೆನೆಗಟ್ಟಿಸಿರುತ್ತದೆ. ಇಲ್ಲಾ ಹರಳು ಗಟ್ಟಿಸಿರುತ್ತ¨ ಎಂದೂ ಅನ್ನಬಹುದು. ಜಾತಕ ಕುಂಡಲಿಯ ಗ್ರಹಗಳು ಸೂರ್ಯ, ಚಂದ್ರಾದಿ ನವ ಗ್ರಹಗಳು, ( ರಾಹು ಕೇತುಗಳ ಅಸ್ತಿತ್ವದಲ್ಲಿ ಇರದ ಗ್ರಹಗಳಾದರೂ ಅವು ಸೂರ್ಯ ಹಾಗೂ ಚಂದ್ರರ ಪರಿಭ್ರಮಣದ ವೇಗದ ಛೇದವನೇ ಕಾರಣವಾಗಿ ಅಪಾರವಾದ ಕಂಡು ಕತ್ತಲ ಹೊತ್ತು ಶಕ್ತಿ ಮೂಲವಾಗಿ ಹೊರ ಹೊಮ್ಮುತ್ತವೆ) ತಂತಮ್ಮದೇ ಆದ ರೀತಿಯಲ್ಲಿ ಲೋಕದ ಜೀವಿಗಳ ಮೇಲೆ ತಮ್ಮ ಪ್ರಬಾವ ನೀಡುತ್ತಿರುತ್ತವೆ. ಪ್ರಭಾವದ ಕಾರಣಗಳಿಂದಾಗಿ ಅದೃಷ್ಟ ದುರಾದೃಷ್ಟಗಳು ಕೂಡಿ ಬರುತ್ತವೆ. ಇದನ್ನು ನಂಬಿದವನು ತನ್ನ ದೃಢವಾದ ನಂಬಿಗೆಯಿಂದ ಹೊರಬರಲಾರ. ನಂಬದೇ ಹೋದವನೂ ಎಂದೋ ಒಂದು ದಿನ “ಹೌದು, ನಿಜ.  ಏನೋ ಒಂದು ಇದೆ. ತನ್ನನ್ನು ಮೀರಿದ ಅಗೋಚರ ಶಕ್ತಿ ‘ ನಂಬಿಗೆಗೆ ಬಂದು ತಲುಪುತ್ತಾನೆ. ಕೆಲವೇ ಕೆಲವು ಮಂದಿ ಅದೇನು ಅದೃಷ್ಟ, ಥೂ ಇಂಥದ್ದನ್ನು ನಂಬಲಾರೆ ಎಂಬ ನಂಬಿಗೆಯೊಂದಿಗೇ ನಾಸ್ತಿಕರಾಗಿ ಇರುತ್ತಾರೆ. ನಾಸ್ತಿಕರನ್ನು ನಾವು ಅಗೌರವಿಸಬೇಕಾಗಿಲ್ಲ. ಅವರ ರೀತಿ ಅವರದ್ದು. ಆದರೆ ಅವರು ಆಸ್ತಿಕರನ್ನು ಅಣಕಿಸಿದಿದ್ದರೆ ಸೂಕ್ತ. ಆಸ್ತಿಕರು ನಾಸ್ತಿಕರನ್ನು ದ್ವೇಷಿಸದಿದ್ದರೆ ಸೂಕ್ತ. 

Advertisement

 ರವಿ, ಚಂದ್ರನೂ ಒಂದು ಗ್ರಹವೇ?
 ಹಾಸ್ಪ್ಯಾಸ್ಪದ ವಿಷ?ವಾಗಿ ಗೋಚರಿಸುವ ಈ ವಿಚಾರ ಅನೇಕರ ವ್ಯಂಗ್ಯಕ್ಕೆ ಗುರಿಯಾಗುತ್ತಿರುತ್ತದೆ. ಸ್ವಯಂ ಬೆಳಕೇ ಇರದ, ಬೂಮಿಯ ಬಾಲಂಗೋಚಿಯಾದ ಚಂದ್ರನೂ ಒಂದು ಗ್ರಹವೇ ಎಂದು ಪ್ರಶ್ನಿಸುತ್ತ, ಈ ಒಂದು ಪ್ರಶ್ನೆಗೆ ಉತ್ತರವನ್ನು ( ಒಂದು ಕುತೂಹಲ ತಳೆದು ಯಾರ ಬಳಿಯಾದರೂ ಕೇಳಿ ತಿಳಿಯೋಣ ಎಂಬುದನ್ನು ಯೋಚಿಸದೆ) ಯಾರೋ ಭಾರತೀಯ ಆಷೇìಯ ವೈಜ್ಞಾನಿಕ ಸಂಗತಿಗಳನ್ನು ತಿಳಿದವರ ಬಳಿ ಚರ್ಚಿಸದೇ ಸಾರಾಸಗಟವಾಗಿ ತಿರಸ್ಕರಿಸುತ್ತಾರೆ. ನಮ್ಮ ಆಯುರ್ವೇದದ ಮದ್ದು, ಲೇಹ್ಯ, ಲೇಪನಗಳ ಬಗೆಗೆಊ ಆಧುನಿಕವಾದುದನ್ನು ತಿಳಿದಿದ್ದೇವೆ. ಇವೆಲ್ಲ ಅವೈಜ್ಞಾನಿಕ ಎಂದು ಸಾರಾಸಗಟಾಗಿ ತಿರಸ್ಕಾರ ತೋರುವ ಅವಸರ ಪ್ರದರ್ಶಿಸುತ್ತಾರೆ. ಆದರೆ ಗ್ರಹಿಕೆಗೆ ಬೇಕಾದದ್ದು ವೈಜ್ಞಾನಿಕ ಚೌಕಟ್ಟಿನಲ್ಲಿ ಎಷ್ಟು ವಿಸ್ತಾರವಾಗಿದೆಯೋ ಅಷ್ಟೇ ವಿಸ್ತಾರವಾಗಿ ಅನ್ಯ ಬಗೆಯಲ್ಲಿ ಇರುತ್ತದೆ. ತಿಳಿಯಬೇಕು ಎಂಬ ಕುತೂಹಲವಾದರೂ ಬೇಕು. ಕುತೂಹಲ ಕೇವಲ ಒಂದೇ ನಿಟ್ಟಿನಲ್ಲಿ ಎಂಬುದು ಬುದ್ಧಿವಂತರ ಲಕ್ಷಣವಾಗಬಾರದು. ನಮ್ಮ ಕುತೂಹಲ ಈಗಲೂ ರವಿಚಂದ್ರರ ಬಗೆಗೆ ಅಗಾಧವಾಗಿಯೇ ಇರುತ್ತದೆ. ಆದರೆ ಅವರುಗಳ ದೂರ, ನಮ್ಮ ಭೂಮಿಯ ದೃಷ್ಟಿಯಿಂದ ಎಷ್ಟೆಷ್ಟು ಅಂತರವನ್ನು ಹೊಂದಿದೆ ಎಂಬುದನ್ನು ಗ್ರಹಿಸಿದರೆ ಸೂರ್ಯ ಹಾಗೂ ಚಂದ್ರರು ಅವರವರ ಪರಿಭ್ರಮಣದ ಕಾರಣದಿಂದಾಗಿ ನಮ್ಮ ಮೇಲೆ ಅವರುಗಳ ಪರಿಣಾಮಗಳೇನು ಎಂಬುದನ್ನು ಲೆಕ್ಕ ಹಾಕಿದಾಗ ದೂರದಲ್ಲಿದ್ದರೂ ಸೂರ್ಯ (ಚಂದ್ರನ ಮತ್ತು ಅವ ದ್ರವ್ಯರಾಶಿ ಎಷ್ಟೇ ಅಂತರ ಪಡೆದಿದ್ದರೂ ) ನೀಡುವ ಪರಿಣಾಮ, ಹತ್ತಿರದಲ್ಲಿರುವ ಚಂದ್ರನು ಸ್ವಯಂ ಪ್ರಕಾಶಿತನಲ್ಲದಿದ್ದರೂ ಕೊಡುವ ಪರಿಣಾಮ ಒಂದೇ ಪರಿಮಾಣದ್ದು ಎಂಬುದನ್ನು ನಾವು ತಿಳಿಯಬೇಕು. 

   ಪೃಥ್ವಿ ಪಾಲಿಗಿರುವ ದೂರದಿಂದಾಗಿ ಚಂದ್ರನೂ ಒಂದು ಗ್ರಹ
 ನಮ್ಮ ಮನೆಯ ಬಿಸಿ ಕಾವಲಿ ನೆರೆ ಮನೆಯವರಿಗೆ ತನ್ನ ಬಿಸಿ ಕಾವನ್ನು ರವಾನಿಸಲಾರದು. ಹಾಗೆಯೇ ಎಷ್ಟೋ ದೂರದ ಸೂರ್ಯನ ಪ್ರಭಾವ, ಅತಿ ಸಮೀಪದ ಚಂದ್ರಗ್ರಹವಷ್ಟೇ ಪ್ರಭಾವ ಒಂದೇ ಆಗಿದೆ. ಹೀಗಾಗಿ ಭಾರತೀಯ ಜ್ಯೋತಿಷ್ಯ ವಿಜ್ಞಾನ ಸೂರ್ಯನನ್ನೂ ಗ್ರಹಹ ಎಂದು ಕರೆಯಿತು. ಚಂದ್ರನನ್ನೂ ಒಂದು ಗ್ರಹ ಎಂದೇ ಗುರುತಿಸಿತು. ಇವರಿಬ್ಬರ ಪ್ರಭಾವಗಳೂ ಭೂಮಿಯ ತಾತ್ವಿಕ, ಭೌಗೋಳಿಕ, ಖಗೋಳ ಸಂಬಂಧಿತ, ಜ್ಞಾನ, ಕಾಂತಿರ ಪಿತೃ ಪಿತಾಮಹ, ಮಾತೃ- ಹೀಗೆ ಅಪ್ಪ, ಅಜ್ಜ, ಮುತ್ತಜ್ಜ, ತಾಯಿ, ಅಜ್ಜಿ, ಮುತ್ತಜ್ಜಿಗಳ ಸ್ಥಿತಿಗತಿಗಳ ಮೇಲೆ ಸಂಬಂಧಿಸಿದ ಘಟಕಗಳ ತನ್ನತನವನ್ನು ಛಾಪುಗಳಿಸುತ್ತದೆ. ಪಿತೃ ಸಂಬಂಧಿ ದೋಷಗಳು, ಮಾತೃ ಸಂಬಂಧ ದೋಷ, ಮಾನಿಸಕ ವ್ಯಾಧಿ, ಪೀಡೆ, ಏಳ್ಗೆಗಳ ಶಕ್ತಿ ಹಾಗೂ ಮಿತಿ ಸಂತಾನ ಭಾವ, ಸಂತಾನ ಸಂಬಂಧಿ ವ್ಯಾಕುಲತೆ, ನಕಾರಾತ್ಮಕ ಸುಳಿಗಳ ನಿರ್ಮಾಣ, ಆನಂದ, ಸಾಧನೆಗಳ ಮೂಲಕವಾದ ಉತ್ಕರ್ಷ ಇತ್ಯಾದಿಗಳನ್ನು ನಿಯಂತ್ರಿಸುತ್ತವೆ. ದೋಷವಿರದಿದ್ದಾಗ ಸಂತೋಷ ನಿಶ್ಚಿತ. 

  ಸೂರ್ಯ ಮತ್ತು ಪ್ರಜನನ ಶಕ್ತಿ
  ಸೂರ್ಯನೇ ಬ್ರಹ್ಮ. ಸೂರ್ಯನೇ ವಿಷ್ಣು, ಸೂರ್ಯನೇ ಮಹೇಶ್ವರ, ಚಂದ್ರ, ಮಾತೃ ಸ್ವರೂಪಿ. ಹೂವಿಗೆ ಸುಗಂಧವನ್ನು ಸೂರ್ಯ ತುಂಬಲಾರ. ಚಂದ್ರನಶೀಲ ಕಿರಣಗಳೇ ತುಂಬಬೇಕು. ಸೂರ್ಯ ಪುರುಷನನ್ನು ಸರ್ವಶಖೀ¤ನನ್ನಾಗಿ ರೂಪಿಸಬಲ್ಲ. ಚಂದ್ರ ಸ್ತ್ರೀಯನ್ನು ಮಾತೃಮಯಿಯಾದ ಸರ್ವೇಶ್ವರಿಯನ್ನಾಗಿ ರೂಪಿಸಬಲ್ಲ. ಜಾತಕ ಕುಂಡಲಿಯ ಒಂಭತ್ತನೆಯ ಭಾವ ತಂದೆ, ಪಿತೃ ಸಂಬಂಧೀ ಅನ್ಯ ವಿಚಾರ, ಆಸ್ತಿ ಪಾಸ್ತಿಯ ಸಂಬಂಧವಾದ ಸೂಕ್ಷ್ಮ ಇತ್ಯಾದಿಗಳನ್ನು ನಿರ್ದೇಶಿಸಿದರೆ, ನಾಲ್ಕನೇ ಮನೆ ಮಾತನೆಯನ್ನು ಪ್ರತಿನಿಧಿಸುತ್ತದೆ. ಉತ್ತಮ ಆಹಾರ, ಸುಖ, ಉತ್ತಮ ವಾಸದ ಮನೆ, ನೆರಳು, ಭದ್ರತೆ, ಸಹಜ ಸ್ವಭಾವಾದಿಗಳನ್ನು ನಿಯಂತ್ರಿಸುತ್ತದೆ. ಕಾಲ ಪುರುಷನ ಜಾತಕ ಕುಂಡಲಿಯ ಪೂರ್ವ ಭಾಗದ ಮೇಷ ರಾಶಿಯನ್ನು ಆತ್ಮಭಾವವನ್ನಾಗಿಸಿಕೊಂಡಿದ್ದಾನೆ. ಕುಜ ಎಂದರೆ ಕೆಂಡದ ಕಾವು ಎಂಬ ಅರ್ಥ ಹೊರಡಿಸುತ್ತದೆ. ಜೀವನದ ಚಲನಶೀಲತೆಗೆ ಕಾವು ಬೇಕು. ಹೆಣ್ಣು ಗಂಡಿನ ಮಿಲನದ ಸಂದರ್ಭದಲ್ಲಿ ಕಾವು, ಬೆಂಕಿ, ಶಕ್ತಿ, ಪ್ರಜ್ವಲನ, ಘರ್ಷಣೆ ಇದ್ದಿದ್ದೇ. ಪ್ರೇಮದ ಸಂಘರ್ಷ ಜೀವವನ್ನು ಹುಟ್ಟುಹಾಕುತ್ತದೆ. ವೈರತ್ವದ ಸಂಘರ್ಷ ಜೀವನದ ವ್ಯಾಪಾರಕ್ಕೆ ತೆರೆ ಎಳೆದು ಸಾವು ತರಿಸುತ್ತದೆ. ಸೂರ್ಯ ಹೀಗಾಗಿ ಜಗತ್ತಿನ ನಿರ್ಮಾಣಕ್ಕೆ ಪಿತೃಕಾರಕ. ಜಗ ತಂದೆ. ಪರಮೇಶ್ವರ. ಚಂದ್ರ ಕಾವನ್ನು ಹೀರಿ ಪ್ರತಿಫ‌ಲಿಸಿ ಅಂತರಂಗದ ಸುಹಾಸ ಕರತೆಗೆ ಕಾರಣವಾಗುವ ಬಂಗಾರ ಬೆಳಕನ್ನು ಫ‌ಲಿಸುತ್ತಾನೆ. ಸೂರ್ಯನು ಎಬ್ಬಿಸಿದ ಉರಿಯಿಂದಾಗಿ ಹುಟ್ಟಿದ ಜೀವ, ಚಂದ್ರನ ಕಾರಣದಿಂದಾದ ಶೀತಲ ಕಿರಣಗಳಿಂದ ತನಗೆ ಬೇಕಾದ ನೆರಳು ಪಡೆಯುತ್ತದೆ. ಕಾವಿಗೂ ನೆರಳು ಬೇಕು. ನೆರಳಿಗಾಗಿ ಕಾವು ಬೇಕು. 

  ಈ ಹಿನ್ನೆಲೆಯಲ್ಲಿ ನಮ್ಮ ಕರ್ಮಫ‌ಲ ನಮ್ಮ ಒಳ್ಳೆಯ ಕೆಟ್ಟ ನಡತೆಗಳ ಪರಿಣಾಮದಿಂದಲೇ ಬದುಕಿನ ಏಳುಬೀಳುಗಳನ್ನು ನಿರ್ಧರಿಸುತ್ತದೆ. ಮಿತಿ ಮೀರಿದ ಪಾಪದ ನಡದೆ ಪಿತೃದೋಷವನ್ನು ನೇರವಾಗಿ ನಮಗೇ ಕಟ್ಟಿ ಕೊಡಬಹುದು. ಪರರ ಹಣ ಲಪಟಾಯಿಸುವುದು, ಕಳ್ಳತನ ನಡೆಸಿ ಅನ್ಯರ ಭಾವುಕತೆಯ ಮೇಲೆ ದೌರ್ಜನ್ಯ ನಡೆಸುವುದು, ಮಾನವೀಯ ಏಳ್ಗೆಗಳಿಗಾಗಿ ದೈವ ಸಂಬಂಧೀ, ಧರ್ಮ ಸಂಬಂಧೀ, ಸಾರ್ವಜನಿಕ ಹಿತದ ಸಂಬಂಧೀ ದ್ರವ್ಯ ಅಪಹರಣಗಳನ್ನು ನಡೆಸಿದವನನ್ನು ಅದೃಷ್ಣ ಬೆನ್ನಟ್ಟುತ್ತದೆ. ತಪ್ಪಿಸಿಕೊಂಡು ಹೋದನ ನಂತರ ಮುಂದಿನ ಪೀಳಿಗೆಗಳನ್ನಾದರೂ ಈ ದೋಷ ಹಿಡಿದೇ ತೀರುತ್ತದೆ. ಈ ದೋಷಗಳ ಪಿತೃದೋಷ ಎಂಬ ಭಾರವಾದ ಗಂಟನ್ನು ಬೆನ್ನಿಗಿಡುತ್ತದೆ. 

Advertisement

ಅನಂತ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next