Advertisement

ಅಂಗಳವಿರುವ ಮನೆ ಹೇಗೆ ಕಟ್ಟಬಹುದು ಗೊತ್ತಾ?

03:45 AM Jan 23, 2017 | Harsha Rao |

ಕರಾವಳಿಯ ಕಡೆಯಲ್ಲಿ ಅಂಗಳವಿರುವ ಮನೆಯನ್ನು ಕಟ್ಟುವ ವಿಧಾನವಿದೆ. ಬಹುತೇಕ ಕೇರಳದಲ್ಲಿ ಇದು ಹೆಚ್ಚು ಪ್ರಚಲಿತ. ಪ್ರತಿ ಊರಿನ ಬೆಳೆಗಳು, ಆಹಾರ ಕ್ರಮಗಳು ಹೇಗೆ ಬದಲಾವಣೆ ಹೊಂದಿರುತ್ತವೋ ಹಾಗೆ ಪ್ರತಿ ಭೌಗೋಳಿಕ ಪ್ರದೇಶದಲ್ಲಿ ಮನೆಯ ರಚನೆಗಳು ಭಿನ್ನತೆಯನ್ನು ಪಡೆದಿರುತ್ತದೆ. ಆದರೆ ದುರ್ದೈವವಶಾತ್‌ ಕಾಂಕ್ರಿಟ್‌ ಕಾಡಾಗಿ ಕಾಂಕ್ರೀಟ್‌ ಕಾಡಾಗಿ ಉರಿಯುವ ಅಗ್ನಿ ಕುಂಡಗಳಾಗಿ ಇದು ದೇಶದಾದ್ಯಂತ ತಲೆಯೆತ್ತಿ ಮನೆಗಳು ನಿಂತಿವೆ. ಒಂದೇ ವಿಧ ಒಂದೇ ಮಾದರಿ ಅಳತೆ ಆಕಾರಗಳು ಯಾವುದೋ ಒಂದು. ಅಂಗಳ ಇರುವ ಮನೆಯ ವಿಚಾರವಾಗಿ ಯೋಚಿಸಿದಾಗ ಜಾತಕ ಕುಂಡಲಿಯಲ್ಲಿ ಜಲತತ್ವವನ್ನು ಪ್ರಧಾನವಾಗಿ ಪರಿಗಣಿಸಿ ಅಂಗಳದ ಅಪಾಯಗಳ ವಿಚಾರದಲ್ಲಿ ನಿರ್ಧಾರಕ್ಕೆ ಬರಬೇಕು. ಮಳೆಗಾಲದ ಮಳೆನೀರು ಇಂಥ ಮನೆಗಳ ಒಳವಸತಿ ಕುಟುಂಬಕ್ಕೆ ಹೆಚ್ಚಿನ ಸಿದ್ಧಿಯನ್ನು ವರುಣ ದೇವ ಸಿದ್ಧಿಯ ಮೂಲಕ ಒದಗಿಸುತ್ತದೆ. ಅಂಗಳ ಇರುವ ಮನೆಯು ಚತುಶ್ಯಾಲ ಎನಿಸಿಕೊಳ್ಳುತ್ತದೆ. ಅಂಗಳದ ಸುತ್ತ ಸುಮಾರಾಗಿ ನಾಲ್ಕು ಕೊಠಡಿಗಳಿರುತ್ತವೆ.

Advertisement

ಮನೆಯ ಯಜಮಾನನ ವಿಚಾರದಲ್ಲಿ ಸಮೃದ್ಧಿಯ ವಿಚಾರ ದೃಷ್ಟಿಯಲ್ಲಿಟ್ಟುಕೊಂಡೇ ಇಂಥ ಮನೆಗಳ ವಿನ್ಯಾಸ ನಡೆಯಬೇಕು. ಪ್ರಸ್ತುತ ಮನೆಯ ಯಜಮಾನನ ಕಾಲಾನಂತರವೂ ಮುಂದಿನ ಮನೆಯ ಯಜಮಾನನ ವಿಚಾರವಾಗಿ
ಮತ್ತೆ ವಾಸ್ತು ಬದಲಾವಣೆಯ ವಿಚಾರ ಏಳಲಾರದು. ಪಿತೃ, ಪಿತಾಮಹ, ಪ್ರಪಿತಾಮಹರ ವಿಷಯಗಳನ್ನು ದೃಷ್ಟಿಯಲ್ಲಿರಿಸಿಕೊಂಡೇ ಯಾರ ಕಾಲಾವಧಿಯಲ್ಲಿ ಕಟ್ಟಿದ್ದಾರೋ ಅದು ಮನೆಯ ಸಕಾರಾತ್ಮಕ ಸ್ಪಂದನಕ್ಕೆ ಕೇಂದ್ರವಾಗಿರುತ್ತದೆ. ಸರಿಯಾದ ದಿಕ್ಕಿಗೆ ಯಜಮಾನನ ಸಂಬಂಧವಾದ ಗ್ರಹ ಸಂಪತ್ತಿನ ವಿಚಾರ ಗಮನಿಸಿ ರಚನೆಯ
ವಿಚಾರವಾಗಿ ಮುಂದುವರೆದರಾಯ್ತು.

ಯಜಮಾನ ಅಥವಾ ಯಜಮಾನಿ ಮುಖ್ಯ ಭೂುಮಿಕೆ ನಿರ್ವಹಿಸುತ್ತಾರೆ. ಯಜಮಾನ ಅಥವಾ ಯಜಮಾನಿಯ ಹಸ್ತದ ಅಳತೆಯನ್ನು ಗಮನಿಸುವುದು ಇಲ್ಲಿ ಮುಖ್ಯ. ಹಸ್ತದ ಅಳತೆಯ ಮೇಲಿಂದ ಆಯಾಯ ಷಡ್ವರ್ಗ ಸೂತ್ರಗಳು
ಮುಖ್ಯವಾಗುತ್ತದೆ. ಮನೆಯಲ್ಲಿ ವಾಸಿಸುವವರು ಯಜಮಾನ ಅಥವಾ ಯಜಮಾನತಿಯ ಮೂಲ ನೆಲೆಯಿಂದಲೇ ಚತುರ್ಶಯಾಲಾ ರೂಪದ ಮನೆಯಿಂದ ತಮ್ಮ ಸೌಖ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಮುಂದೊಂದು ಅವಧಿಯ
ಜೀರ್ಣೋದ್ಧಾರದ ಅವಧಿಯ ಸಮಯದಲ್ಲಿ ಯಾವನು ಯಜಮಾನನಿರುತ್ತಾನೋ ಅವನ ಆ ಸಂದರ್ಭದ ಯಜಮಾನತಿಯ ವಿವರ ಪ್ರಮುಖವಾಗುತ್ತದೆ. ಹೊಸದಾಗಿ ಮನೆಯನ್ನು ಕಟ್ಟಬೇಕಾದಾಗಲೂ ಇದು ಪ್ರಧಾನವಾಗುತ್ತದೆ. ಇಷ್ಟು ದೀರ್ಘ‌ ಎನ್ನುವುದಾಗಿ ಕರೆಯಲ್ಪಡುವ ಸಂಗತಿ ಇದು. ಆಯ ವ್ಯಯ ಯೋನಿ ನಕ್ಷತ್ರ, ವಾರ,
ತಿಥಿಗಳ ಲೆಕ್ಕಾಚಾರದಿಂದ ಮನೆಯ ಮುಖ್ಯಸ್ಥನ ಹಸ್ತದಳತೆಯ ಇಷ್ಟ ದೀರ್ಘ‌ವನ್ನು ನಿರ್ಣಯಿಸುತ್ತದೆ.

ಪರಮಸಾಯಿಕ ಮಂಡಲದ ಒಂಭತ್ತು ಚಚ್ಚೌಕದ ಮಾದರಿ ರೂಪು ರೇಷೆಗಳನ್ನು ಮುಖ್ಯವಾಗಿರಿಸಿಕೊಂಡು ಕೊಠಡಿಗಳ ನಿರ್ಮಾಣ ಕೈಗೊಳ್ಳಬಹುದು. ಅಡುಗೆ ಮನೆಯನ್ನು ಒಟ್ಟಂದದಲ್ಲಿ ಸದಸ್ಯರೆಲ್ಲ ಸೇರುವ ಕೋಣೆಗಳು ಪರಮಸಾಯಿಕ
ಮಂಡಲದಲ್ಲಿ ಕಲ್ಪನೆಯು ಹರಳುಗಟ್ಟುತ್ತದೆ. ಅಂಗಳದ ಒಂದು ನಿವೇಶನ ಮಂಡಳ ಚೌಕ ಕಟ್ಟಡದ ಮುಂದುವರಿಕೆ ಇರದೆ ಖಾಲಿಯಾಗಿರಬೇಕು. ಈ ವಲಯವನ್ನು ಪೈಶಾಚಿಕ ಬಿಂದು ಎಂದು ಕರೆಯುತ್ತಾರೆ. ಇದು ಶೂನ್ಯಅಥವಾ ನಕಾರಾತ್ಮಕ ಸ್ಪಂದನಗಳ ಗಂಟು ತುಂಬಿರುವ ಸ್ಥಳ. ಇದು ಖಾಲಿ ಇದ್ದಾಗ ಖಾಲಿಯಾದ ಜಾಗದಲ್ಲೇ ನಕಾರಾತ್ಮಕ ಧಾತುಗಳು ಇಂಗಿ ಭೂಗರ್ಭದ ಒಳಗೆ ಸೇರುಕೊಳ್ಳುತ್ತದೆ. ಮನೆಯ ಯಜಮಾನನಿಗೂ ಇತರ ಸದಸ್ಯರಿಗೂ ಕೆಟ್ಟ ಪರಿಣಾಮಗಳು ಒದಗಿ ಬರದೆ ತಂತಾನೆ ನಾಶವಾಗಿ ಹೋಗುತ್ತದೆ.

ಒಟ್ಟಿನಲ್ಲಿ ಅಂಗಳದ ಮನೆಯೆಂಬುದು ಆಯಾ ಪ್ರದೇಶದ ಭೌಗೋಳಿಕ ಪರಿಸ್ಥಿತಿಯನ್ನು ಆಧರಿಸಿ ಕಟ್ಟಬೇಕು. ಅಂಗಳದ ಮನೆಗೆ ಅದರದೇ ಆದ ಸೊಗಸು ಭದ್ರತೆಗಳಿರುತ್ತದೆ. ಮಳೆಗಾಲದಲ್ಲಿ ಮಳೆಯ ಸೌಂದರ್ಯವನ್ನು ನೋಡುತ್ತಾ ಒತ್ತಡ
ಭಿನ್ನತೆಗಳನ್ನು ನಿವಾರಿಸಿಕೊಳ್ಳಲು ಸೂಕ್ತವೂ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next