Advertisement

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವನಿಗೆ ಎಷ್ಟು ದಂಡ ಹಾಕಿದ್ರು ಗೊತ್ತಾ?

10:16 AM Sep 04, 2019 | Suhan S |

ಗುರುಗ್ರಾಮ: ಸೆಪ್ಟಂಬರ್ ಒಂದರಿಂದ ದೇಶಾದ್ಯಂತ  “ಮೋಟರ್ ವಾಹನ ತಿದ್ದುಪಡಿ ಕಾಯಿದೆ” ಜಾರಿಯಾಗಿದೆ. ಹೊಸ ನಿಯಮವನ್ನು ಉಲ್ಲಂಘನೆ ಮಾಡಿ ವಾಹನ ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ತಡೆದು ಬರೋಬ್ಬರಿ 23 ಸಾವಿರ ದಂಡವನ್ನು ಹಾಕಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

Advertisement

ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ  ದಿನೇಶ್ ಮದನ್ ಎನ್ನುವ ವ್ಯಕ್ತಿಯನ್ನು ಸಂಚಾರಿ ಪೊಲೀಸರು ಗುರುಗ್ರಾಮ ನ್ಯಾಯಾಲದ ಮುಂದುಗಡೆ ತಡೆದು ವಾಹನದ ದಾಖಲೆ ಹಾಗೂ ಇನ್ನಿತರ ಮಾಹಿತಿಯನ್ನು ಕೇಳಿದ್ದರು. ಈ ವೇಳೆಯಲ್ಲಿ ದಿನೇಶ್ ತನ್ನ ಲೈಸನ್ಸ್ ಬಿಟ್ಟು ಬಂದಿದ್ದಾನೆ. ಪೊಲೀಸರು ಎಲ್ಲಾ ದಾಖಲೆಯಗಳ ಕೇಳಿದಾಗ ದಿನೇಶ್ ಬಳಿ ಯಾವ ದಾಖಲೆಯೂ ಇಲ್ಲ. ಸಂಚಾರಿ ಪೊಲೀಸರು ವಿವಿಧ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಒಟ್ಟು  23,000ಸಾವಿರ ದಂಡವನ್ನು ಹಾಕಿದ್ದಾರೆ.

ದಿನೇಶ್ ಲೈಸನ್ಸ್ ಇಲ್ಲದ ಕಾರಣ ಹೊಸ ನಿಯಮದ ಪ್ರಕಾರ 5,000 ಸಾವಿರ ದಂಡ  ಜೊತೆಗೆ ವಾಹನವನ್ನು ರಿಜಿಸ್ಟರ್ ಮಾಡದ ಕಾರಣ ಮತ್ತೆ 5 ಸಾವಿರ ದಂಡ ಇದರ ಜೊತೆಗೆ ವಾಹನದ ವಿಮೆ ಇಲ್ಲದ್ದಕ್ಕಾಗಿ 2,000 ದಂಡ, ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದಕ್ಕಾಗಿ 1000 ಸಾವಿರ ಹಾಗೂ ವಾಯುಮಾಲಿನ್ಯ ಆಗುವ ಹೊಗೆ ಸೂಸುವ ಕಾರಣಕ್ಕಾಗಿನ 10,000 ದಂಡವನ್ನು ಹಾಕಿದ್ದಾರೆ. ಮದನ್ ದಂಡವನ್ನು ಆನ್ಲೈನ್ ಮುಖಾಂತರ ಅಥವಾ ನ್ಯಾಯಾಲಯದಲ್ಲಿ ಕಟ್ಟಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next