Advertisement

Green Vegetables Benefits: ಹಸಿರು ತರಕಾರಿ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ?

04:50 PM Jul 11, 2024 | ಕಾವ್ಯಶ್ರೀ |

ಹಸಿರು ತರಕಾರಿ ಹಾಗೂ ಹಸಿರೆಲೆ ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತದೆ. ಇಂತಹ ತರಕಾರಿಗಳಲ್ಲಿ ಹಲವಾರು ರೀತಿಯ ವಿಟಮಿನ್, ಖನಿಜ, ಫೈಬರ್ ಹಾಗೂ ಪೋಷಕಾಂಶಗಳು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೈನಂದಿನ ಆಹಾರಗಳಲ್ಲಿ ಹಸಿರೆಲೆ ತರಕಾರಿಗಳನ್ನು ಹೆಚ್ಚಾಗಿ ಬಳಸಿದರೆ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು.

Advertisement

ಹಸಿರು ತರಕಾರಿಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ, ಅವುಗಳೆಂದರೆ:

ತೂಕ ಇಳಿಕೆಗೆ ಸಹಕಾರಿ:

ಹಸಿರು ತರಕಾರಿಗಳಲ್ಲಿ ಫೈಬರ್ ಮತ್ತು ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ತೂಕ ಇಳಿಕೆಗೆ ಸಹಕಾರಿಯಾಗಿದೆ. ತರಕಾರಿಗಳಲ್ಲಿ ಇರುವಂತ ಹೆಚ್ಚಿನ ನಾರಿನಾಂಶ ಹೊಟ್ಟೆ ತುಂಬಿದಂತೆ ಮಾಡಿ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಹಸಿರು ತರಕಾರಿಗಳನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಹೃದಯದ ಆರೋಗ್ಯ:

Advertisement

ಹಸಿರು ತರಕಾರಿಗಳು ಫೋಲೇಟ್‌ ಎಂಬ ಅಂಶ ಉತ್ತಮವಾಗಿದ್ದು, ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಬೇಕಾಗುವಂತ ಹೆಚ್ಚಿನ ಪೋಷಕಾಂಶಗಳು ಹಸಿರು ತರಕಾರಿಗಳಲ್ಲಿ ಇರುತ್ತವೆ. ರಕ್ತದೊತ್ತಡ ಕಡಿಮೆ ಮಾಡಿ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ತರಕಾರಿ ಸೇವನೆ ಮಾಡಿದರೆ ರಕ್ತದೊತ್ತಡವು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.

ಕಿಡ್ನಿಯ ಆರೋಗ್ಯ:

ಯಾವುದೇ ರೀತಿಯ ಅಪಾಯಕಾರಿ ರಾಸಾಯನಿಕ ಬಳಸದೆ ಇರುವ ತರಕಾರಿಗಳು ಆರೋಗ್ಯಕ್ಕೆ ಉತ್ತಮ. ಹಸಿರು ತರಕಾರಿಗಳಲ್ಲಿ ರಾಸಾಯನಿಕ ಬಳಸದಿರುವ ಕಾರಣ ಕಿಡ್ನಿಯ ಮೇಲೆ ಹೆಚ್ಚಿನ ಒತ್ತಡ ಬೀಳದೆ ಕಿಡ್ನಿಯು ಆರೋಗ್ಯವಾಗಿರುತ್ತದೆ. ಸಾವಯವ ತರಕಾರಿಗಳನ್ನು ಬಳಸುವುದು ಹೆಚ್ಚು ಸೂಕ್ತ ಎಂಬುದು ತಜ್ಞರ ಸಲಹೆ.

ಮೂಳೆ ಆರೋಗ್ಯ:

ಹಸಿರು ತರಕಾರಿಗಳು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಕೆ ಮತ್ತು ಫೋಲೇಟ್ ಅಂಶ ಒಳಗೊಂಡಿರುತ್ತವೆ. ಇದು ಮೂಳೆಯ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ:

ನೈಸರ್ಗಿಕದತ್ತವಾಗಿ ಸಿಗುವಂತ ಹಸಿರು ತರಕಾರಿಗಳಲ್ಲಿ ಕ್ಯಾನ್ಸರ್ ತಡೆಯುವ ಶಕ್ತಿಯಿದೆ. ಆ್ಯಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ದೇಹದಲ್ಲಿರುವ ಫ್ರಿ ರ್ಯಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ದೃಷ್ಟಿ ಆರೋಗ್ಯ:

ಹಸಿರು ತರಕಾರಿಗಳು ವಿಟಮಿನ್ ಸಿ ಹೊಂದಿರುತ್ತವೆ. ಇದು ಸುಕ್ಕುಗಳು ಮತ್ತು ಬೂದು ಕೂದಲಿನಂತಹ ವಯಸ್ಸಾದ ಚಿಹ್ನೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮೊಡವೆ ಹಾಗೂ ಇತರ ಚರ್ಮರೋಗ ಪರಿಹರಿಸಲು ಸಹಾಯ ಮಾಡುತ್ತದೆ.

ಕೂದಲು ಉದುರುವ ಸಮಸ್ಯೆ:

ನಮ್ಮಲ್ಲಿ ವಿಟಮಿನ್ ಹಾಗೂ ಪ್ರೋಟೀನ್ ಕೊರತೆಯಿಂದಾಗಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈಗ ಹೆಚ್ಚಿನವರಲ್ಲಿ ಈ ಸಮಸ್ಯೆ ಸಾಮನ್ಯವಾಗಿದೆ. ಅಂತಹ ಸಮಸ್ಯೆ ಇದ್ದವರು ಹಸಿರು ತರಕಾರಿಗಳನ್ನು ಹೆಚ್ಚಾಗಿ

ಕೂದಲು ಉದುರುವ ಸಮಸ್ಯೆಗೆ ಕೂದಲು ಉದುರುವ ಸಮಸ್ಯೆ ಇರುವವರು ಆದಷ್ಟು ತರಕಾರಿ ಸೇವನೆ ಮಾಡಿದರೆ ಸಮಸ್ಯೆ ಗಣನೀಯವಾಗಿ ನಿಯಂತ್ರಣಕ್ಕೆ ಬರುವುದು.

ವಿಟಮಿನ್ ಎ:

ಹಸಿರು ತರಕಾರಿಗಳು ವಿಟಮಿನ್‌ ಎ ಅಂಶ ಒಳಗೊಂಡಿರುತ್ತದೆ. ವಿಟಮಿನ್ ಎ ಆರೋಗ್ಯಕರ ಜೀವಕೋಶದ ಬೆಳವಣಿಗೆಗೆ ಮುಖ್ಯವಾಗಿದೆ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಿಗೆ ಇದು ಮುಖ್ಯವಾಗಿದೆ.

ರಕ್ತ ಪರಿಚಲನೆ:

ಹಸಿರು ತರಕಾರಿಗಳು ನೈಟ್ರಿಕ್ ಆಕ್ಸೈಡ್ ರಚನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಕ್ತನಾಳಗಳನ್ನು ವಿಸ್ತರಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆ ಸಮಸ್ಯೆ ನಿವಾರಣೆ:

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ತರಕಾರಿಗಳಲ್ಲಿ ಇರುವಂತಹ ಉನ್ನತ ಮಟ್ಟದ ನಾರಿನಾಂಶ ಮಲಬದ್ಧತೆ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next