Advertisement
ಕಂಪನಿಗಳಿಗಳಲ್ಲಿ ಸರಿಯಾದ ಸಿಬ್ಬಂದಿಗಳನ್ನು ಆಯ್ಕೆ ಮಾಡುವುದು, ಅವರನ್ನು ಉಳಿಸಿಕೊಳ್ಳವುದು ಕಷ್ಟ. ಹೆಚ್ಚಿನ ಸಂಬಳ- ಸೌಲಭ್ಯ, ಇನ್ನೂ ಅನುಕೂಲಕರ ಕಾರ್ಯ ಕ್ಷೇತ್ರ, ಶೀಘ್ರ ಪದೋನ್ನತಿ, ವಿದೇಶಿ ಪೋಸ್ಟಿಂಗ್ ಮುಂತಾದ ಸೌಲಭ್ಯಗಳಿಗಾಗಿ ಸಿಬ್ಬಂದಿಗಳು ತ್ವರಿತ ಗತಿಯಲ್ಲಿ ಕಂಪನಿಗಳನ್ನು ಬದಲಿಸುವುದು ಈ ದಿನಗಳಲ್ಲಿ ತೀರಾ ಸಾಮಾನ್ಯ. ವೃತ್ತಿಯಲ್ಲಿ ನೈಪುಣ್ಯತೆ ಮತ್ತು ಅನುಭವ ಇದ್ದರೆ, ಬೇಡಿಕೆ ಪೂರೈಕೆ ಅನ್ವಯ ಈ ರೀತಿಯ ವಲಸೆ ಇನ್ನೂ ಹೆಚ್ಚಾಗುತ್ತದೆ. ಅಂತೆಯೇ, ಕಂಪನಿಗಳು ತಮ್ಮ ಸಿಬ್ಬಂದಿಗಳನ್ನು ಉಳಿಸಿಕೊಳ್ಳಲು ಮತ್ತು ಅವರಿಂದ ಹೆಚ್ಚಿನ ಕೆಲಸ ನಿರೀಕ್ಷಿಸಲು ಅವರಿಗೆ ಮಾಮೂಲು ಸಂಬಳ- ಸೌಲಭ್ಯದ ಜೊತೆಗೆ ಬೋನಸ್,ವಸತಿ, ಪ್ರಯಾಣ ಸೌಲಭ್ಯ, ಪ್ರವಾಸ (ಎಲ್‌ಟಿಎ), ಮಕ್ಕಳಿಗೆ ಶಿಕ್ಷಣ ಭತ್ತೆ, ಗೃಹಸಾಲ ಸೌಲಭ್ಯ ಮುಂತಾದವುಗಳನ್ನು ಹೆಸರಿನಲ್ಲಿ ನೀಡುತ್ತವೆ. ಸೂರತ್ ನಗರದಲ್ಲಿ ಒಬ್ಬ ವಜ್ರದ ಉದ್ಯಮಿ 2018 ರಲ್ಲಿ ತನ್ನ ಸಿಬ್ಬಂದಿಗಳಿಗೆ 600 ಕಾರ್‌ಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದ್ದ. 2015 ರಲ್ಲಿ 491 ಕಾರ್ ಮತ್ತು 200 ಫ್ಲಾಟ್‌ಗಳನ್ನು ಕೊಟ್ಟ. 2016 ರಲ್ಲಿ 400 ಫ್ಲಾಟ್ಸ್ ಮತ್ತು 1260 ಕಾರುಗಳನ್ನು ವಿತರಿಸಿದ.
ಇದು ಸಿಬ್ಬಂದಿಗಳಿಗೆ, ಅವರ ಸಾಧನೆಗೆ ನೀಡುವ ಪ್ರೋತ್ಸಾಹ ಧನವಾಗಿದ್ದು, ವಾರ್ಷಿಕವಾಗಿ ನೀಡುವ ಬೋನಸ್ ಪರಿಕಲ್ಪನೆಯಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿರುತ್ತದೆ. ಬೋನಸ್ ಅನ್ನು ಸರ್ಕಾರದ ಬೋನಸ್ ಕಾಯ್ದೆಗನುಗುಣವಾಗಿ ನೀಡಲಾಗುವುದು. ಇದಕ್ಕೊಂದು ಮಿತಿ ಇರುತ್ತದೆ. ಅದರೆ, ESOP (Employees Stock Ownership) ಯಾವುದೇ ಕಾಯ್ದೆಯ ಅಡಿಯಲ್ಲಿ ಬರದೇ, ಇದು ಸಂಪೂರ್ಣವಾಗಿ ಮಾಲೀಕರ, ಆಡಳಿತವರ್ಗದ ವಿವೇಚನೆ ಮತ್ತು ನಿರ್ಣಯಕ್ಕೆ ಬಿಟ್ಟ ವಿಷಯವಾಗಿರುತ್ತದೆ. ಇದನ್ನು ಸಿಬ್ಬಂದಿಗಳು ತಮ್ಮ ಬೇಡಿಕೆಯಲ್ಲಿ ಸೇರಿಸಲಾಗದು. ಆದರೆ, ಬೋನಸ್ಸನ್ನು ಕೇಳುವ ಹಕ್ಕು ಸಿಬ್ಬಂದಿಗಳಿಗೆ ಇರುತ್ತದೆ. ಇದನ್ನು ಕಂಪನಿಗಳಲ್ಲಿ ಸಿಬ್ಬಂದಿಗಳನ್ನು ಉಳಿಸಿಕೊಳ್ಳಲು ಮತ್ತು ಅವರ ಬಧœತೆಗೆ ನೀಡುವ ಕಾಣಿಕೆ ಎನ್ನಲಾಗುತ್ತದೆ.
Related Articles
Advertisement
ಈ ಯೋಜನೆಯ ಲಾಭ ಪಡೆಯಲು ಯಾರು ಅರ್ಹರು?ದೇಶದ ಹೊರಗೆ ಅಥವಾ ದೇಶದೊಳಗೆ ಕಾರ್ಯ ನಿರ್ವಹಿಸುತ್ತಿರುವ ಕಂಪನಿಯ ಖಾಯಂ ಸಿಬ್ಬಂದಿಗಳು ಈ ಯೋಜನೆಗೆ ಅರ್ಹರು. ಕಂಪನಿಯ ಪೂರ್ಣಾವಧಿ ಅಥವಾ ಅಲ್ಪಾವಧಿ ನಿರ್ದೇಶಕರುಗಳು. ಕಂಪನಿಯ ಉಪ (subsidary)ಮತ್ತು ಅಂಗ
(Associate) ಕಂಪನಿಗಳ ಸಿಬ್ಬಂದಿಗಳು. ಯಾರು ಅರ್ಹರಲ್ಲ?ಇದನ್ನು ಹೇಗೆ ನೀಡುತ್ತಾರೆ?
ಶೇ. 10 ಕ್ಕಿಂತ ಹೆಚ್ಚು ಇಕ್ವಿಟಿ ಶೇರು ಹೊಂದಿರುವ ಕಂಪನಿಯ ಪ್ರವರ್ತಕರು ಮತ್ತು ನಿರ್ದೇಶಕರುಗಳು ಈ ನೀಡಿಕೆಗೆ ಅರ್ಹರಲ್ಲ. ಕಂಪನಿಯು ತನ್ನ ಅಂತರಿಕ ನಿರ್ಣಯದಂತೆ, ಸಂಬಂಧಪಟ್ಟ ಶೇರು ಮತ್ತು ಡಿಬೆಂಚರ್ ನೀತಿ ನಿಯಮಾವಳಿ ಅನ್ವಯ (Capital Debenture Act 2014) ತನ್ನ ಸಿಬ್ಬಂದಿಗಳಿಗೆ ಮೊದಲೇ ನಿರ್ದರಿಸಿದ ದರದಲ್ಲಿ (ಇದು ಸಾಮಾನ್ಯವಾಗಿ ಮಾರುಕಟ್ಟೆ ದರಿಕ್ಕಿಂತ ಕಡಿಮೆ ಇರುತ್ತದೆ) ತನ್ನ ಶೇರು ಖರೀದಿಸಲು ಅವಕಾಶ ನೀಡುತ್ತದೆ. ಸಿಬ್ಬಂದಿಗಳಿಗೆ ಇದನ್ನು ಖರೀದಿಸುವಂತೆ ಕಡ್ಡಾಯ ಮಾಡಲಾಗುವುದಿಲ್ಲ. ಸಿಬ್ಬಂದಿಗಳಿಗೆ ಆಯ್ಕೆ ಮಾಡಿ ಖರೀದಿಸಲು ಒಂದು ವರ್ಷ ದ ಲಾಕ್ ಇನ್ ಪಿರಿಯಡ್ ಇದ್ದು, (ಲಾಕ್ ಇನ್ ಪಿರಿಯಡ್ ಒಂದು ವರ್ಷದ್ದಾಗಿರುತ್ತದೆ) ಒಂದು ವರ್ಷದ ನಂತರ ಅವರು ಅದನ್ನು ಖರೀದಿಸಬಹುದು. ಅದನ್ನು ಒಂದೇ ಲಾಟ್‌ನಲ್ಲಿ ಖರೀದಿಸದೇ , ಒಂದು ಕಾಲ ಮಿತಿಯಲ್ಲಿ, ಕಾಲ ಘಟ್ಟದಲ್ಲಿ ಹಂತ ಹಂತವಾಗಿಯೂ ಖರೀದಿಸಬಹುದು. ಆಯ್ಕೆಯನ್ನು (option) ನೀಡಿ ಹಣ ಪಾವತಿಸಿದ ನಂತರ ಇದು ಶೇರ್ ಆಗಿ ಪರಿವರ್ತಿತವಾಗುತ್ತದೆ. ಆಯ್ಕೆಯನ್ನು ನೀಡಿ ಶೇರುಗಳನ್ನು ಖರೀದಿಸುವವರೆಗೂ ಈ ESOP ಮೊತ್ತ, ESOP ಟ್ರಸ್ಟ್ ಖಾತೆಯಲ್ಲಿ ಇರುತ್ತದೆ. ಸಿಬ್ಬಂದಿಗಳು ಇಂತಿಷ್ಟೇ ಶೇರುಗಳನ್ನು ತೆಗೆದುಕೊಳ್ಳಬೇಕು ಎನ್ನುವ ನಿರ್ಬಂಧ ಇರುವುದಿಲ್ಲ.ಅವರ ಹಣಕಾಸು ಶಕ್ತಿಗೆ ಅನುಗುಣವಾಗಿ, ಮಾಲೀಕರು ಮತ್ತು ಆಡಳಿತವರ್ಗ ನೀಡುವ ಲಿಮಿಟ್‌ಗೆ ಸಮೀಕರಿಸಿ ತೆಗೆದುಕೊಳ್ಳಬಹುದು. ಇದಕ್ಕೆ ತೆರಿಗೆ ಇದೆಯೇ?
ಕಂಪನಿಗಳು ತನ್ನ ಸಿಬ್ಬಂದಿಗಳಿಗೆ ನೀಡುವ ಈ ಕಾಣಕೆಗೆ ತೆರಿಗೆ ಇದ್ದು, ಎರಡು ಬಾರಿ ತೆರಿಗೆಗೆ ಒಳಪಡುತ್ತದೆ. ಈ ಯೋಜನೆಯನ್ವಯ ಕಂಪನಿಗಳು ತನ್ನ ಸಿಬ್ಬಂದಿಗಳಿಗೆ ಶೇರುಗಳನ್ನು ನೀಡಿದಾಗ, ಹೆಚ್ಚಿನ ಗಳಿಕೆ ಅಥವಾ ಸೌಕರ್ಯದ ಹೆಸರಿನಲ್ಲಿ ಸಿಬ್ಬಂದಿಗಳು ತೆರಿಗೆ ನೀಡಬೇಕಾಗುತ್ತದೆ. ನಂತರದ ದಿನಗಳಲ್ಲಿ ಈ ಶೇರುಗಳನ್ನು ಮಾರಿದಾಗ, ಕ್ಯಾಪಿಟಲ್ ಗೇನ್ಸ್ ಹೆಸರಿನಲ್ಲಿ ತೆರಿಗೆ ವಿಧಿಸಲಾಗುವುದು. ತೆರಿಗೆ ತಜ್ಞರ ಪ್ರಕಾರ ESOP ಗಳ ಮೇಲೆ ತೆರಿಗೆ ಸರಳವಾಗಿರದೆ, ತುಂಬಾ ಕ್ಲಿಷ್ಟಕರವಾಗಿದೆ. ಈ ವಿಷಯವಾಗಿ ನ್ಯಾಯಾಲಯಗಳಲ್ಲಿ ಏಕ ರೂಪದ ಆಭಿಪ್ರಾಯವಿಲ್ಲ ಎಂದು ಹೇಳಲಾಗುತ್ತದೆ. ಇದನ್ನು perquisite ಎಂದು ತೆರಿಗೆ ವಿಧಿಸದೇ , ಕ್ಯಾಪಿಟಲ್ ಗೇನ್ಸ್ ಎಂದು ಸಿಬ್ಬಂದಿಗೆ ತೆರಿಗೆ ವಿಧಿಸಬೇಕು. ಶೇರು ಪಡೆಯಲು ESOP ನೀಡಿದ ದಿನದಿಂದ ಅಥವಾ ಶೇರುಗಳನ್ನು ನೀಡಿದ ದಿನದಿಂದ… ಈ ರೀತಿ ಹಲವಾರು ಜಿಜ್ಞಾಸೆ ಇದ್ದು ತೆರಿಗೆ ತಜ್ಞರ ಸಹಾಯ ಬೇಕಾಗುತ್ತದೆ. ವಿದೇಶಿ ಕಂಪನಿಗಳು ESOP ನೀಡಿದಾಗ, ಫಲಾನುಭವಿಗಳು ಆ ದೇಶದೊಂದಿಗಿನ Double Tax Avoidence Treaty ಪ್ರಕಾರ ತೆರಿಗೆಯನ್ನು ನೀಡಬೇಕಾಗುತ್ತದೆ. ಬ್ಯಾಂಕುಗಳಲ್ಲಿ ESOP
2017 ರಲ್ಲಿ ಕೇಂದ್ರ ಸರ್ಕಾರ ಬ್ಯಾಂಕುಗಳಲ್ಲಿ ಕೂಡಾ ESOP ನೀಡಲು ಅನುಮತಿ ನೀಡಿದೆ . ಬ್ಯಾಂಕುಗಳು discounted ದರದಲ್ಲಿ ತನ್ನ ಸಿಬ್ಬಂದಿಗಳಿಗೆ ಇವುಗಳನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ಅಲಹಾಬಾದ್ ಬ್ಯಾಂಕ್ ಮೊದಲನೆಯದಾಗಿದ್ದು, 25% discount ನಲ್ಲಿ 5 ಕೋಟಿ ಶೇರುಗಳನ್ನು 53.94 ದರದಲ್ಲಿ ನೀಡಿತ್ತು. ಆದರೆ, 4.38 ಕೋಟಿ ಶೇರುಗಳನ್ನಷ್ಟೇ ನೀಡಿ 315 ಕೋಟಿಯನ್ನು ಸಂಗ್ರಹಿಸಲು ಸಾಧ್ಯವಾಯಿತು. ಆನಂತರ ಯುನೈಟೆಡ್ ಬ್ಯಾಂಕ್ ತನ್ನ ಶೇರುಗಳನ್ನು ಈ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗಳಿಗೆ ನೀಡಿತು. ಕೆನರಾಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕುಗಳೂ ತಲಾ 6 ಮತ್ತು 10 ಕೋಟಿ ಶೇರುಗಳನ್ನು ನೀಡಲು ಚಿಂತನೆ ನಡೆಸಿದ್ದವು. ಬ್ಯಾಂಕ್ ಸಿಬ್ಬಂದಿಗಳು ವೇತನ ಪರಿಷ್ಕರಣೆ ಮತ್ತು ವೇತನ ಹೆಚ್ಚಳದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದರೇ ವಿನಃ ಶೇರುಗಳ ಮೂಲಕ ನೀಡುವ ಹಣಕಾಸು ವಿಚಾರದಲ್ಲಿ ಹೆಚ್ಚಿನ ಅಸಕ್ತಿ ತೋರಿಸದಿರುವುದರಿಂದ ಪ್ರಗತಿ ಕಾಣಲಿಲ್ಲ. – ರಮಾನಂದ ಶರ್ಮಾ