Advertisement

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದೆಯಾ? ವಹಿವಾಟಿಲ್ಲದ ಖಾತೆಗಳನ್ನು ಸ್ಥಗಿತಗೊಳಿಸೋದು ಹೇಗೆ

06:37 PM Dec 05, 2020 | Nagendra Trasi |

ಮಣಿಪಾಲ: ಇತ್ತೀಚೆಗಿನ ದಿನಗಳಲ್ಲಿ ಜನರ ಜೀವನದ ಗುಣಮಟ್ಟ ಮೇಲ್ದರ್ಜೆಗೆ ಏರಿದೆ. ಜೊತೆಗೆ ಖಾಸಗಿ/ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವವರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಸಾಮಾನ್ಯ ವಿಚಾರವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಒಂದು ಕಂಪನಿ ಬಿಟ್ಟು ಮತ್ತೊಂದು ಹೊಸ ಕಂಪನಿಗೆ ಸೇರಿದಾಗ ಬ್ಯಾಂಕ್ ಖಾತೆ ಕೂಡಾ ಬದಲಾಗುತ್ತದೆ.

Advertisement

ಆದರೆ ಬಹುತೇಕ ಸಂದರ್ಭದಲ್ಲಿ ಹಲವು ಬ್ಯಾಂಕ್ ಖಾತೆ ಹೊಂದಿದ್ದರು ಕೂಡಾ ಅದರಲ್ಲಿ ಒಂದು ಅಥವಾ ಎರಡು ಖಾತೆ ಮಾತ್ರ ವಹಿವಾಟು ನಡೆಸಲು ಉಪಯೋಗಿಸುತ್ತಿರುತ್ತೇವೆ. ಕೆಲವು ಬ್ಯಾಂಕ್ ಗಳು ಜೀರೋ ಬ್ಯಾಲೆನ್ಸ್ ಮೂಲಕ ಸಂಬಳದ ಖಾತೆಯನ್ನು ಉಳಿತಾಯ(ಸೇವಿಂಗ್ಸ್) ಖಾತೆಯನ್ನಾಗಿ ಮಾರ್ಪಡಿಸುತ್ತದೆ.(ಒಂದು ವೇಳೆ ಕೆಲವು ತಿಂಗಳ ಕಾಲ ಸಂಬಳ ಖಾತೆಗೆ ಕ್ರೆಡಿಟ್ ಆಗದಿದ್ದಾಗ ಈ ರೀತಿ ಮಾಡಲಾಗುತ್ತದೆ).ಸ್ಯಾಲರಿ ಖಾತೆ ಹೊರತುಪಡಿಸಿ, ಸಂಬಳೇತರ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಬೇಕಾಗುತ್ತದೆ. ಆದರೆ ಬಹುತೇಕ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರುವುದೇ ಇಲ್ಲ. ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಇಲ್ಲದ ಖಾತೆಗಳನ್ನು ಕ್ಲೋಸ್ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಹೆಚ್ಚುವರಿ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡುವಾಗ ಕೆಲವೊಂದು ಮಹತ್ವದ ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಆಟೋಮೆಟಿಕ್(ಸ್ವಯಂಚಾಲಿತ) ಡೆಬಿಟ್ಸ್ ಸ್ಥಗಿತಗೊಳಿಸಿ:

ಖಾತೆಯನ್ನು ಸ್ಥಗಿತಗೊಳಿಸುವ ಸಂದರ್ಭದಲ್ಲಿ  ನಿಮ್ಮ ಖಾತೆಗೆ ಜೋಡಣೆಯಾದ ಎಲ್ಲಾ ಡೆಬಿಟ್ಸ್ ಲಿಂಕ್ ಗಳನ್ನು ಸ್ಥಗಿತಗೊಳಿಸಬೇಕು. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಪ್ರತಿ ತಿಂಗಳ ಸಾಲದ ಇಎಂಐ ಕಟ್ಟಲು ಜೋಡಣೆಯಾಗಿದ್ದರೆ, ಆಗ ನೀವು ಹೊಸ ಬ್ಯಾಂಕ್ ಖಾತೆಯ ನಂಬರ್ ಅನ್ನು(ಸಾಲ ಪಡೆದುಕೊಂಡ ಸಂಸ್ಥೆ, ವ್ಯಕ್ತಿ/ಬ್ಯಾಂಕ್) ಕೊಡಬೇಕು.

ಬ್ಯಾಂಕ್ ಶಾಖೆಗೆ ಭೇಟಿ ಕೊಡಿ:

Advertisement

ಖಾಯಂ ಆಗಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದಿದ್ದರೆ ಆಗ ಬ್ಯಾಂಕ್ ಖಾತೆದಾರ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು. ಅಲ್ಲಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಅರ್ಜಿಯನ್ನು ತುಂಬಿಸಬೇಕು. ಅದರ ಜೊತೆಗೆ ಡಿ ಲಿಂಕ್ ಫಾರಂ ಅನ್ನು ಕೂಡಾ ತುಂಬಿಸಿ ಸಲ್ಲಿಸಬೇಕು. ಅಲ್ಲದೇ ಚೆಕ್ ಪುಸ್ತಕ, ಕ್ರೆಡಿಟ್ ಕಾರ್ಡ್ಸ್ ಹಾಗೂ ಡೆಬಿಟ್ ಕಾರ್ಡ್ಸ್ ಉಪಯೋಗವಿಲ್ಲದ ಕಾರಣ ಅದನ್ನು ಬ್ಯಾಂಕ್ ಗೆ ಕೊಡಬೇಕು.

ಹೊಸ ಬ್ಯಾಂಕ್ ಖಾತೆ ವಿವರ ಅಪ್ ಡೇಟ್ ಮಾಡಿ:

ಹಳೆಯ ಸ್ಯಾಲರಿ(ಸಂಬಳ) ಅಕೌಂಟ್ ಅನ್ನು ಸ್ಥಗಿತಗೊಳಿಸಿದ ನಂತರ, ಉದ್ಯೋಗಿ ಹೊಸ ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕಾಗುತ್ತದೆ.(ಸಂಬಳ, ಪಿಂಚಣಿ ಅಥವಾ ಇನ್ನಿತರ ಹಣದ ವಹಿವಾಟಿಗೆ)

ಒಂದು ಬ್ಯಾಂಕ್ ಖಾತೆಯನ್ನು ತೆರದು 14ದಿನದಿಂದ ಹಿಡಿದು ಒಂದು ವರ್ಷದ ನಂತರ ಸ್ಥಗಿತಗೊಳಿಸಿದರು ಕೂಡಾ ಯಾವುದೇ ಶುಲ್ಕ ವಿಧಿಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next