Advertisement

ಪಿತ್ರಾರ್ಜಿತ ಆಸ್ತಿ ನಿಮಗೆ ಇದೆಯೇ?

01:17 PM Apr 21, 2020 | mahesh |

ನೀವು ಮನೆಯಲ್ಲೋ, ಆಫಿಸಲ್ಲೋ ಕೆಲಸ ಮಾಡುವಾಗ, ಆಗಾಗ ಪಿತ್ತ, ವಾಕರಿಕೆ ಬಂದ್ಹಂಗೆ ಆಗೋದು, ತಲೆನೋವು ಬಂದು ವಾಂತಿ ಮಾಡೋದು ಎಲ್ಲಾ ಆಗಿಬಿಡುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾದಂತೆ, ಇವೆಲ್ಲ ಮತ್ತಷ್ಟು ಹೆಚ್ಚಾಗುತ್ತವೆ. ಅಂಥ ಸಂದರ್ಭಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು, ಇಲ್ಲೊಂದಷ್ಟು ಟಿಪ್ಸ್ ಇದೆ. ಮೊದಲು ಜೀರಿಗೆಯನ್ನು ನೀರಿಗೆ ಹಾಕಿ, ಚೆನ್ನಾಗಿ ಕುದಿಸಿ.
ಅದಕ್ಕೆ ಸ್ವಲ್ಪ ಸಾವಯವ ಬೆಲ್ಲ ಹಾಕಿಕೊಂಡು, ಬಿಸಿ ಇರುವಾಗಲೇ ಒಂದು ಲೋಟ ಕುಡಿಯಿರಿ. ಪಿತ್ತಕ್ಕೆ ಜೀರಿಗೆ ರಾಮಬಾಣ. ಎಷ್ಟೇ ವಾಂತಿಯ ಲಕ್ಷಣ ಇದ್ದರೂ, ನಿಧಾನಕ್ಕೆ ಇಳಿದು ಹೋಗುತ್ತದೆ. ಪಿತ್ತದಿಂದ ಉಂಟಾಗುವ ತಲೆನೋವು ಕೂಡ, ಇದರಿಂದ ಗುಣವಾಗುತ್ತದೆ. ಈ ಪಿತ್ತದ ಇನ್ನೊಂದು ಮುಖ ಅಂದರೆ, ಹೊಟ್ಟೆ ನೋವು ಬರಿಸೋದು. ಇದಕ್ಕೆ ಜೀರಿಗೆ ಕೆಲಸ ಮಾಡೋಲ್ಲ. ಜಾಯಿಕಾಯಿ ಇರಲೇಬೇಕು. ಇದರಲ್ಲಿ ಔಷಧೀಯ ಗುಣಗಳು ಇವೆ. ಆಂಟಿ ಆಕ್ಸಿಡೆಂಟ್‌ನಿಂದಾಗಿ ಹೊಟ್ಟೆ ನೋವು ಬೇಗ ಗುಣವಾಗುತ್ತದೆ. ಹೊಟ್ಟೆ ನೋವು, ಅನಗತ್ಯವಾಗಿ ತಿಂದು ಉಂಟಾಗುವ ಅಜೀರ್ಣದಿಂದಲೂ ಬರಬಹುದು.

Advertisement

ಜಾಯಿಕಾಯಿಗೆ ಅಜೀರ್ಣವನ್ನು ಓಡಿಸುವ ತಾಕತ್ತು ಇದೆ. ಬಿ. ಕಾಂಪ್ಲೆಕ್ಸ್, ವಿಟಮಿನ್‌ “ಸಿ’ ಗುಣ ಇರುವುದರಿಂದ ಪಿತ್ತದಿಂದ ಉಂಟಾಗುವ ಸುಸ್ತು, ಹೊಟ್ಟೆನೋವಿನ ಬಳಲಿಕೆ ಯಾವುದೂ
ಆಗುವುದಿಲ್ಲ. ಪಿತ್ತದ ಇನ್ನೊಂದು ಮುಖ ಎಂದರೆ, ಕಫ‌ ಕಟ್ಟುವುದು. ಇದು ಹೆಚ್ಚಾದರೆ, ಉಸಿರಾಡಲು ಕೂಡ ಆಗದಷ್ಟು ಕಾಡುತ್ತದೆ. ಹೀಗಾಗಿ, ಜಾಯಿಕಾಯಿ ಪೀಸ್‌ನ ಜೊತೆ, ಒಂದೇ ಒಂದು ಕಲ್ಲುಪ್ಪನ್ನು ಸೇರಿಸಿ ದವಡೆಯಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡಿದರೆ, ಕಫ‌ ಹೋಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next