Advertisement

ಗೂಳಿಗೆ ಕೆಂಪು ಬಣ್ಣವನ್ನು ಕಂಡರೆ ದ್ವೇಷವೇ?

06:00 AM Oct 25, 2018 | Team Udayavani |

ಕೆಂಪು ಸೀರೆಯನ್ನುಟ್ಟ ನಾಯಕಿಯನ್ನು ಗೂಳಿ ಅಟ್ಟಿಸಿಕೊಂಡು ಹೋಗುತ್ತಿದೆ. ಧೈರ್ಯಶಾಲಿಯಾದ ನಾಯಕ, ಕೆರಳಿದ ಗೂಳಿಯೊಂದಿಗೆ ಕಾದಾಟಕ್ಕಿಳಿದು ನಾಯಕಿಯನ್ನು ರಕ್ಷಿಸಿ ಅವಳ ಪ್ರೀತಿಯನ್ನು ಗೆಲ್ಲುತ್ತಾನೆ. ಈ ದೃಶ್ಯವನ್ನು ಜಗತ್ತಿನ ಬಹಳಷ್ಟು ಭಾಷೆಗಳ ಸಿನಿಮಾಗಳಲ್ಲಿ ಕಾಣಬಹುದು. ಅಲ್ಲಗಳೆಯಲಾಗದ ಸಂಗತಿಯೆಂದರೆ ಮನುಷ್ಯನಿಗೆ ಅನಾದಿ ಕಾಲದಿಂದಲೂ ಕೆರಳಿದ  ಗೂಳಿಯನ್ನು ಕಂಡರೆ ಅದೆಂಥಧ್ದೋ ಕೆಟ್ಟ ಕುತೂಹಲ. ಈ ಕುತೂಹಲ ಎಷ್ಟು ವಿಪರೀತವೆಂದರೆ ಗೂಳಿ ತನ್ನ ಪಾಡಿಗೆ ತಾನಿದ್ದರೂ ಮನುಷ್ಯ ಅದನ್ನು ಕೆರಳಿಸಿ ತಮಾಷೆ ನೋಡುತ್ತಾನೆ. ಭೂಮಿ ಮೇಲಿನ ಜೀವಚರಗಳನ್ನು ತನ್ನ ಮನರಂಜನೆಗೆ ಬಳಸಿಕೊಂಡಿರುವ ಮನುಷ್ಯ ಗೂಳಿಯನ್ನು ಕೆಣಕುವುದರಲ್ಲೂ ಮನರಂಜನೆ ಕಂಡುಕೊಂಡಿದ್ದಾನೆ. ಸ್ಪೇನ್‌ನ ಗೂಳಿ ಕಾಳಗ ಅದಕ್ಕೊಂದು ಉದಾಹರಣೆ. 

Advertisement

ಸ್ಟೇಡಿಯಂ ಮಧ್ಯದಲ್ಲಿ ಕೆಂಪು ಬಣ್ಣದ ಬಾವುಟ ಹಿಡಿದು ಗೂಳಿಯನ್ನು ಕೆಣಕುವ ಈ ಆಟದ ಕುರಿತು ಚರ್ಚೆ ನಡೆದೇ ಇದೆ. ಅಚ್ಚರಿಯ ವಿಷಯ ಏನು ಗೊತ್ತಾ? ಕೆಂಪು ಬಣ್ಣ ಗೂಳಿಯನ್ನು ಕೆರಳಿಸುವುದಿಲ್ಲ. ಆಶ್ಚರ್ಯ ಆಗುತ್ತಿದೆಯಲ್ಲವಾ? ಗೂಳಿಯನ್ನೊಳಗೊಂಡಂತೆ ಎಲ್ಲಾಜಾನುವಾರುಗಳಿಗೂ ಕೆಲ ಬಣ್ಣಗಳನ್ನು ಗುರುತಿಸಲಾಗುವುದಿಲ್ಲ. ಇದನ್ನು Partial Color blindness ಎನ್ನುವರು. ಜಾನುವಾರುಗಳು ಗುರುತಿಸಲು ಸಾಧ್ಯವಾಗದ ಬಣ್ಣಗಳಲ್ಲಿ ಕೆಂಪು ಕೂಡಾ ಒಂದು!

– ಹರ್ಷ

Advertisement

Udayavani is now on Telegram. Click here to join our channel and stay updated with the latest news.

Next