Advertisement

ಆರೋಗ್ಯ ಸುಧಾರಣೆಗೆ ಯೋಗ ಮಾಡಿ

05:25 PM Jun 04, 2018 | Team Udayavani |

ತೇರದಾಳ: ಯೋಗಕ್ಕೂ ಆಯುರ್ವೇದಕ್ಕೂ ಅವಿನಾಭಾವ ಸಂಬಂಧವಿದೆ. ಆಯುರ್ವೇದ ಚಿಕಿತ್ಸೆಗಳು ಯೋಗದಲ್ಲಿ ನಿರತರಾದವರಿಗೆ ಸಂಪೂರ್ಣ ಫಲಕೊಡುತ್ತವೆ. ಯೋಗದಿಂದ ರೋಗಗಳ ಮುಕ್ತಿ ಸಾಧ್ಯವಿದೆ. ಯೋಗದಿಂದಲೆ ಹಿಂದಿನ ಕಾಲದಲೂ ಜಗತ್ತಿಗೆ ಯೋಗಾಭ್ಯಾಸದ ಮಹತ್ವ ಹೇಳಿಕೊಟ್ಟ
ಭಾರತ ರಾಷ್ಟ್ರವು ಯೋಗ ಗುರುವಾಗಿದೆ ಎಂದು ಡಾ| ಜೆ.ಬಿ. ಆಲಗೂರ ಹೇಳಿದರು. ಪಟ್ಟಣದ ಜೆವಿ ಮಂಡಳದ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವತಯಾರಿ ನಿಮಿತ್ತ ನಡೆದ ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಪ್ರಾಸ್ತಾವಿಕವಾಗಿ ಡಾ|ದೀಪಿಕಾ ಶಿರಗುಪ್ಪೆ ಮಾತನಾಡಿ, ಯೋಗದ ಪ್ರಯೋಜನದ ಬಗ್ಗೆ ಹೇಳಿದರು. ಶಿಲ್ಪಾ ಮಾಲಗಾರ ವಿಶ್ವಯೋಗ ದಿನಾಚಾರಣೆ ಪ್ರಾರಂಭವಾದ ಕುರಿತು ಮಾಹಿತಿ ನೀಡಿದರು. ಬಳಿಕ ಶಿಲ್ಪಾ. ಬಿ ಯೋಗಗಳ ಬಗ್ಗೆ ಹೇಳುತ್ತ ಶಿಬಿರ ನಡೆಸಿಕೊಟ್ಟರು. ಡಾ| ಜಿ.ಎಸ್‌. ಬೆಳ್ಳಂಕಿಮಠ, ಡಾ| ವಿಜಯ, ಡಾ| ಸಂಪೂರ್ಣ, ಡಾ| ಶಿವಲೀಲಾ, ಡಾ| ಛಾಯಾ ಹಾಗೂ ಇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ಸಂತೋಷ ಸ್ವಾಗತಿಸಿದರು. ಸಿಂಚನಾ, ಸಂತೋಷ, ಪವನ, ಅಲ್ತಾಫ್‌ ನಿರೂಪಿಸಿದರು. ಕಾಜಲ್‌ ವಂದಿಸಿದರು. ಇದಕ್ಕೂ ಮೊದಲು ಪ್ರಾತಃಕಾಲ ಧನ್ವಂತರಿ ಪೂಜೆ, ಪ್ರಾರ್ಥನೆ ಜರುಗಿತು.

ಯೋಗ ತರಬೇತಿ ಶಿಬಿರವನ್ನು ಕಾಲೇಜು ವತಿಯಿಂದ ಜೂ. 21ರವರೆಗೆ ಗುರುಕುಲ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 6ಗಂಟೆಯಿಂದ 7ರವರೆಗೆ ನಡೆಯಲಿದ್ದು, ಸಾರ್ವಜನಿಕರು ಸಹ ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಕಾಲೇಜಿನ ಕಾರ್ಯದರ್ಶಿ ಡಾ| ಜೆ.ಬಿ. ಆಲಗೂರ ಹಾಗೂ ಪ್ರಾಚಾರ್ಯ ಡಾ| ಲಿಂಗಾರಡ್ಡಿ ಬಿರಾದಾರ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next