Advertisement

HDK; ತಪ್ಪು ಮಾಡಿ ಎಂದು ಮಕ್ಕಳಿಗೆ ನಾವು ಹೇಳುತ್ತೇವಾ…

10:40 PM Jun 23, 2024 | Team Udayavani |

ರಾಮನಗರ: “ತಪ್ಪುಗಳನ್ನು ಕೆಲವರು ಮಾಡುತ್ತಾರೆ, ನಿಮ್ಮ ಕುಟುಂಬದ ಮಕ್ಕಳೂ ತಪ್ಪೆಸಗುತ್ತಾರೆ. ಹಾಗೆಂದು ಅವರಿಗೆ ತಪ್ಪು ದಾರಿಗೆ ಹೋಗಿ ಎಂದು ನೀವು ಹೇಳುತ್ತೀರಾ, ಈ ದೇಶದಲ್ಲಿ ಕಾನೂನು ಇದೆ. ಯಾರು ತಪ್ಪು ಮಾಡಿದರೂ ಶಿಕ್ಷೆಯಾಗುತ್ತದೆ’ ಎಂದು ಪ್ರಜ್ವಲ್‌ ರೇವಣ್ಣ ಮತ್ತು ಸೂರಜ್‌ ರೇವಣ್ಣ ಪ್ರಕರಣದ ಬಗ್ಗೆ ಸಂಸದ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

Advertisement

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಅವರ ತಪ್ಪನ್ನು ಮುಂದಿಟು ಕೊಂಡು ಯಾರೋ ಒಬ್ಬ ಚಾನಲ್‌ನವ ದೇವೇಗೌಡರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ. ಅದೇ ಮಾತನ್ನು ಇದೀಗ ಚನ್ನಪಟ್ಟಣ ಉದ್ಧಾರ ಮಾಡುತ್ತೇವೆ ಎಂದು ಬಂದಿದ್ದಾರಲ್ಲಾ (ಡಿ.ಕೆ. ಶಿವಕುಮಾರ್‌), ಅವರ ಬಗ್ಗೆ ಆಡಿದ್ದರೆ ಆ ಚಾನಲ್‌ ಪುಡಿಪುಡಿ ಅಗಿರುತ್ತಿತ್ತು. ಆದರೆ ನಾವು ಅಂತಹ ಸಂಸ್ಕೃತಿಯವರಲ್ಲ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸುತ್ತೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next