Advertisement

ಕನ್ನಡದಲ್ಲಿ ಯುಪಿಎಸ್ಸಿ, ಬ್ಯಾಂಕ್‌ ಪರೀಕ್ಷೆ ನಡೆಸಿ

01:36 PM Nov 02, 2020 | Suhan S |

ಯಳಂದೂರು: ಹಿಂದಿ, ಕನ್ನಡ ಸೇರಿದಂತೆ ಅನೇಕ ಭಾಷೆಗಳೂ ರಾಷ್ಟ್ರೀಯ ಭಾಷೆಗಳಾಗಿವೆ. ಆದರೆ, ಕೇಂದ್ರ ಸರ್ಕಾರ ಕೇವಲ ಹಿಂದಿ, ಆಂಗ್ಲ ಭಾಷೆಗೆ ಹೆಚ್ಚು ಮಾನ್ಯತೆ ನೀಡುವ ಮೂಲಕ ಕನ್ನಡ ಭಾಷೆಗೆ ಅಪಚಾರ ಮಾಡಿದೆ ಎಂದು ಶಾಸಕ ಎನ್‌. ಮಹೇಶ್‌ ವಿಷಾದಿಸಿದರು.

Advertisement

ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಭಾನುವಾರ ನಡೆದ 65ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಯುಪಿಎಸ್‌ಪಿ ಪರೀಕ್ಷೆಗಳು ಕೇವಲ ಹಿಂದಿ ಹಾಗೂ ಆಂಗ್ಲ ಭಾಷೆಗಳಲ್ಲಿ ಇರುತ್ತವೆ. ಉತ್ತರ ಭಾರತದವರಿಗೆ ಭಾಷೆ ಮೇಲೆ ಹೆಚ್ಚಿನ ಹಿಡಿತ ಇರುವುದರಿಂದ ಅವರೇ ಹೆಚ್ಚಾಗಿ ಇಂತಹ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳುತ್ತಾರೆ. ಪ್ರಾದೇಶಿಕ ಭಾಷೆಗಳಲ್ಲೇ ಇಂತಹ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು. ಇದರಲ್ಲೇ ಉತ್ತರಿಸಲು ಅನುಕೂಲ ಮಾಡಿಕೊಡಬೇಕು. ಬ್ಯಾಂಕಿಂಗ್‌ ಪರೀಕ್ಷೆಯನ್ನು ಕನ್ನಡದಲ್ಲೇ ನಡೆಸಬೇಕು. ಈ ಬಗ್ಗೆ ಸದನದಲ್ಲಿ ಗಮನ ಸೆಳೆಯಲಾಗುವುದು ಎಂದರು.

ಕೋವಿಡ್ ಹಿನ್ನೆಲೆ ರಾಜ್ಯೋತ್ಸವ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ವರ್ಷದ ಮೊದಲ ತಿಂಗಳಲ್ಲೇ ಕೋವಿಡ್ ಲಸಿಕೆ ಸಿಗುವ ಅವಕಾಶಗಳು ಹೆಚ್ಚಾಗಿವೆ. ಇದಕ್ಕಾಗಿ ಈಗಾಗಲೇ ಇದಕ್ಕೆ ಸಿದ್ಧತೆ ನಡೆಸಲಾಗಿದ್ದು, ಆದಷ್ಟು ಬೇಗ ಇದು ಲಭಿಸುವಂತಾಗಲಿ. ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸುವಂತಾಗಲಿ ಎಂದು ಆಶಿಸಿದರು.

ಮುಖ್ಯ ಭಾಷಣಕಾರ ಶಿವಕುಮಾರ್‌ ಮಾತನಾಡಿ,ನಾಡು ನುಡಿಯ ಬಗ್ಗೆ ಸ್ವಾಭಿಮಾನ ಹೆಚ್ಚಿಸಿಕೊಳ್ಳಬೇಕು. ನಮ್ಮ ಭಾಷೆಯನ್ನು ಉಳಿಸುವ ಇತರರಿಗೂ ಕಲಿಸುವ, ಮಾತನಾಡುವ, ಕಾಪಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಇದಕ್ಕೂ ಮುಂಚೆ ತಹಶೀಲ್ದಾರ್‌ ಸುದರ್ಶನ್‌ ಧ್ವಜಾರೋಹಣ ನೆರವೇರಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಶೇ.100 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ಜಿಪಂ ಸದಸ್ಯರಾದ ಜೆ.ಯೋಗೇಶ್‌, ಉಮಾವತಿ ಸಿದ್ದರಾಜು, ತಾಪಂ ಅಧ್ಯಕ್ಷ ಸಿದ್ದರಾಜು, ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯ ಅಧ್ಯಕ್ಷ ವೈ. ಕೆ.ಮೋಳೆ ನಾಗರಾಜು, ಪದ್ಮಾವತಿ, ಮಲ್ಲಾಜಮ್ಮ, ಪಪಂ ಸದಸ್ಯರಾದ ಮಹೇಶ್‌, ವೈ.ಜಿ.ರಂಗನಾಥ, ಮಹಾದೇವನಾಯಕ, ಕೆ. ಮಲ್ಲಯ್ಯ, ಮಂಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

 ಕನ್ನಡವೇ ಅನ್ನದ ಭಾಷೆ ಆಗಲಿ: ನರೇಂದ್ರ :

ಕೊಳ್ಳೇಗಾಲ: ಕನ್ನಡ ನಾಡು  ನುಡಿ, ಜಲಕ್ಕಾಗಿ ಹೋರಾಟ ಮಾಡಿದ ಮಹಾತ್ಮರನ್ನು ಸ್ಮರಿಸಬೇಕಿದೆ ಎಂದು ಹನೂರು ಶಾಸಕ ಆರ್‌. ನ ರೇಂದ್ರ ಹೇಳಿದರು.

ಪಟ್ಟಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾತನಾಡುವ ಭಾಷೆ, ಇಂಗ್ಲಿ ಷ್‌ ಅನ್ನದ ಭಾಷೆ ಎಂದು ಹೇಳುತ್ತಾರೆ. ಆದರೆ, ಇದನ್ನು ಒಪ್ಪಲು ಸಾಧ್ಯವಿಲ್ಲ. ನಮಗೆ ಕನ್ನಡದಿಂದಲೇ ಅನ್ನ ಸಿಗು ತ್ತಿದ್ದು ಕನ್ನ ಡವೇ ಸತ್ಯ, ಕನ್ನ ಡವೇ ಮಿಥ್ಯ ಎಂದರು.

ಶಾಸಕ ಎನ್‌. ಮ ಹೇಶ್‌ ಮಾತ ನಾಡಿ, ಕೇಂದ್ರ ಸರ್ಕಾರ ವಿವಿಧ ಇಲಾಖೆ ಗಳ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿ ಷ್‌ನಲ್ಲಿ ನಡೆಸು ತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸ  ಬೇಕು. ಪ್ರಾದೇಶಿಕ ಭಾಷೆಗಳಿಗೆ ಮಹತ್ವ ನೀಡ  ಬೇಕು ಎಂದು ಮನವಿ ಮಾಡಿದರು.

ಶಿಕ್ಷಕ ಕೆ.ವಿ. ಮಲ್ಲೇಶ್‌, ಕನ್ನಡ  ಹೋರಾಟ, ಅನೇಕ ಕವಿಗಳು, ಲೇಖಕರು ನೀಡಿ ರುವ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಎಸ್‌ ಎಸ್‌ ಎಲ್‌ಸಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ 31 ವಿದ್ಯಾರ್ಥಿಗಳನ್ನು ಸನ್ಮಾ ನಿಸಲಾಯಿತು. ಈ ವೇಳೆ ಎಸಿ ಡಾ.ಗಿರೀಶ್‌ ಬದೋಲೆ, ನಗರ ಸಭೆ ಅಧ್ಯಕ್ಷೆ ಗಂಗಮ್ಮ, ಉಪಾ ಧ್ಯಕ್ಷೆ ಕವಿತಾ, ಜಿಪಂ ಸದಸ್ಯೆ ಶಿವಮ್ಮ, ತಾಪಂ ಅಧ್ಯಕ್ಷ ಸುರೇಶ್‌, ಉಪಾ ಧ್ಯಕ್ಷೆ ಲತಾ, ಕಸಾಪ ಅಧ್ಯಕ್ಷ ನಂಜುಂಡ ಸ್ವಾಮಿ, ಡಿವೈ ಎಸ್ಪಿ ನಾಗರಾಜು, ಪೌರಾಯುಕ್ತ ನಾಗ ಶೆಟ್ಟಿ, ತಹಶೀಲ್ದಾರ್‌ ಕೆ.ಕು ನಾಲ್‌, ಇಒ ಗಂಗಾಧರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next