Advertisement

ಒಂದೇ ಬಾರಿ ಎರಡು ಡಿಗ್ರಿ ಮಾಡಿ!

03:10 AM Jul 22, 2019 | Sriram |

ಹೊಸದಿಲ್ಲಿ: ಒಂದು ಕೋರ್ಸ್‌ ಮಾಡುತ್ತಿರುವಾಗಲೇ ಇನ್ನೊಂದು ಕೋರ್ಸ್‌ ಮಾಡುವ ಆಸೆ ಹಲವು ವಿದ್ಯಾರ್ಥಿಗಳಲ್ಲಿ ಇರುತ್ತದೆಯಾದರೂ ಸದ್ಯದ ಶಿಕ್ಷಣ ನೀತಿಯಲ್ಲಿ ಅದು ಸಾಧ್ಯವಿಲ್ಲ. ಆದರೆ ಇಂತಹ ಆಸೆ ಹಾಗೂ ಸಾಮರ್ಥ್ಯವಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಶುಭ ಸುದ್ದಿ ನೀಡಿದೆ. ಒಂದೇ ಬಾರಿಗೆ ಹಲವು ಕೋರ್ಸ್‌ ಗಳನ್ನು ಕೈಗೊಳ್ಳುವ ಸಾಧ್ಯತೆಯ ಬಗ್ಗೆ ಸದ್ಯ ಯುಜಿಸಿ ಅಧ್ಯಯನ ನಡೆಸುತ್ತಿದೆ.

Advertisement

ಯುಜಿಸಿ ಉಪಾಧ್ಯಕ್ಷ ಭೂಷಣ್‌ ಪಟವರ್ಧನ್‌ ನೇತೃತ್ವದಲ್ಲಿ ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ. ಒಂದೇ ವಿಶ್ವವಿದ್ಯಾಲಯದಿಂದ ಅಥವಾ ಬೇರೆ ವಿಶ್ವವಿದ್ಯಾಲಯದಿಂದ ಒಂದೇ ಬಾರಿಗೆ ಎರಡು ಡಿಗ್ರಿ ಮಾಡುವ ಸಾಧ್ಯತೆ ಬಾಧ್ಯತೆಗಳ ಅಧ್ಯಯನ ನಡೆಸಲಿದೆ. ಈ ಕೋರ್ಸ್‌ಗಳನ್ನು ದೂರ ಶಿಕ್ಷಣ, ಆನ್‌ಲೈನ್‌ ವಿಧಾನ ಅಥವಾ ಅರೆಕಾಲಿಕ ವಿಧಾನದಲ್ಲಿ ಮಾಡಬಹುದಾಗಿದೆ.

ಅಂದಹಾಗೆ ಇದು ಹೊಸ ಆಲೋ ಚನೆಯಲ್ಲ. 2012ರಲ್ಲೂ ಇದೇ ರೀತಿಯ ಯೋಜನೆ ಯುಜಿಸಿ ಮುಂದೆ ಇತ್ತು. ಸಮಿತಿ ರಚನೆ ಮಾಡಿ, ಅಧ್ಯಯನ ನಡೆಸಿದ ಅನಂತರ ಕೈಬಿಡಲಾಗಿತ್ತು. ಆದರೆ ಈಗ ಮತ್ತೂಮ್ಮೆ ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಒಂದು ತಿಂಗಳ ಹಿಂದೆಯೇ ಸಮಿತಿ ರಚನೆಯಾಗಿದ್ದು, ಸಮಿತಿ ಈಗಾಗಲೇ ಒಮ್ಮೆ ಸಭೆಯನ್ನೂ ಸೇರಿದೆ. ಶಿಕ್ಷಣ ಕ್ಷೇತ್ರದ ವಿವಿಧ ಸ್ತರದ ಪರಿಣತರ ಸಲಹೆಯನ್ನು ಈ ಬಗ್ಗೆ ಪಡೆಯಲಾಗುತ್ತಿದೆ ಎಂದು ಯುಜಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2012ರಲ್ಲಿ ನಿರಾಕರಣೆ
ಒಂದು ಹೆಚ್ಚುವರಿ ಪದವಿ ಕೋರ್ಸ್‌ಗೆ ವಿದ್ಯಾರ್ಥಿ ಸೇರಿಕೊಳ್ಳಲು ಅವಕಾಶವನ್ನು ನೀಡಬಹುದು. ಅದು ಕೂಡ ಮುಕ್ತ ಅಥವಾ ದೂರಶಿಕ್ಷಣ ವಿಧಾನದಲ್ಲಿ ಮಾತ್ರ ಈ ಅವಕಾಶ ನೀಡಬಹುದು ಎಂದು 2012ರಲ್ಲಿ ಹೈದರಾಬಾದ್‌ ವಿವಿ ಉಪಕುಲಪತಿ ಫ‌ುರ್ಖನ್‌ ಖಮರ್‌ ನೇತೃತ್ವದಲ್ಲಿ ಸಮಿತಿ ನೀಡಿದ್ದ ವರದಿ ಹೇಳಿತ್ತು. ಸಾಮಾನ್ಯ ಶಿಕ್ಷಣ ವಿಧಾನದಲ್ಲಿ ಈ ಅವಕಾಶ ನೀಡಿದರೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸಮಸ್ಯೆ ಎದುರಾಗುತ್ತದೆ. ಸಾಮಾನ್ಯ ವಿಧಾನದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ಗರಿಷ್ಠ ಒಂದು ಸರ್ಟಿಫಿಕೆಟ್, ಡಿಪ್ಲೊಮಾ, ಪಿಜಿ ಡಿಪ್ಲೊಮಾ ಅನ್ನು ಸಾಮಾನ್ಯ ಅಥವಾ ಮುಕ್ತ ಮತ್ತು ದೂರಶಿಕ್ಷಣ ವಿಧಾನದಲ್ಲಿ ಮಾಡಲು ಅವಕಾಶ ನೀಡಬಹುದು.

ಸಮಿತಿ ವರದಿಯ ಅನಂತರ ಯುಜಿಸಿ ಇದನ್ನು ತಳ್ಳಿಹಾಕಿತ್ತು. ಆದರೆ ಈಗ ತಂತ್ರಜ್ಞಾನ ಮುಂದುವರಿದಿದೆ. ಸಾಮಾನ್ಯ ಪದವಿ ವ್ಯಾಸಂಗ ಮಾಡು ತ್ತಿರುವ ವಿದ್ಯಾರ್ಥಿಗಳು ವಿಶೇಷ ಕೋರ್ಸ್‌ ಅಭ್ಯಾಸಕ್ಕೂ ಬಯಸು ತ್ತಾರೆ. ಹೀಗಾಗಿ ಮತ್ತೂಮ್ಮೆ ಇದರ ಸಾಧಕ ಬಾಧಕ ಅಧ್ಯಯನ ಕೈಗೊ ಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next