Advertisement

ಮಕಳಿಗೆ ಆತ್ಕಸ್ಥೈರ್ಯ ತುಂಬುವ ಕಾರ್ಯ ಮಾಡಿ

04:41 PM Sep 22, 2020 | Team Udayavani |

ಬನಹಟ್ಟಿ: ಕೋವಿಡ್‌-19 ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಪ್ರಾಥಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಾಗೇನವರ ಹೇಳಿದರು.

Advertisement

ಸ್ಥಳೀಯ ಪೂರ್ಣಪ್ರಜ್ಞೆ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಫಲಿತಾಂಶವು ಶಿಕ್ಷಕರಿಗೆ ಗೌರವ ತಂದುಕೊಡುತ್ತದೆ. ಸಮಾಜದಲ್ಲಿಯ ಅನೇಕ ವೃತ್ತಿಗಳಿವೆ. ಅವುಗಳಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠವಾದುದು ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ| ಜಿ.ಎಸ್‌. ವಡಗಾವಿ ಮಾತನಾಡಿ, ಉತ್ತಮ ಶಿಕ್ಷಕರು ಅಜರಾಮರರು. ವಿದ್ಯಾರ್ಥಿಗಳೆ ಶಿಕ್ಷಕರ ನಿಜವಾದ ಆಸ್ತಿ. ಶಿಕ್ಷಕ ವೃತ್ತಿ ಪವಿತ್ರವಾದುದು. ಶಿಕ್ಷಕ ವೃತ್ತಿಯ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕು ಎಂದರು.

ಮುಖ್ಯ ಶಿಕ್ಷಕಿ ಬಿ.ಆರ್‌. ಬಾಗಲಕೋಟ ಮಾತನಾಡಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಸಿದ್ದಪ್ಪ ಮೇಣಿ ಅಧ್ಯಕ್ಷತೆ ವಹಿಸಿದ್ದರು. ಶಕೀಲ ನದಾಫ್‌, ಎಸ್‌.ಕೆ.ಕರಡಿ, ಅದೃಶ್ಯ ಕಾಡದೇವರ, ಬಿ. ಬಾಗೇನವರ, ಜಿ.ಬಿ.ಸಂಗೊಂದಿ, ಪ್ರಭಾವತಿ ಹಿರೇಮಠ ಇದ್ದರು. ಸಂಸ್ಥೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು.  ಬಿ.ಜಿ.ಜೋರಾಪುರ, ಅರುಣ ಕುಲಕರ್ಣಿ, ಆರ್‌.ಡಿ.ಪಾಠಕ, ಬಿ.ಎಸ್‌. ಬಳ್ಳೂರ ರಾಜು ಉಕ್ಕಲಿ ಸೇರಿದಂತೆ ಅನೇಕರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next