Advertisement
ಬೇಸಿಗೆಯಲ್ಲಿ ಪರಿಸ್ಥಿತಿ ನಿರ್ವಹಣೆಗೆ ನಗರಕ್ಕೆ ಅಗತ್ಯವಾದಷ್ಟು ನೀರು ಶೇಖರಿ ಸಿಟ್ಟುಕೊಳ್ಳುವಂತೆ ಈ ಹಿಂದೆಯೇ ಜಲಮಂಡಳಿಯು ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಿತ್ತು. ಅದರಂತೆ ಜಲಾಶ ಯದಲ್ಲಿನ ನೀರಿನ ಸಂಗ್ರಹದಿಂದ ಮೇ ಮಧ್ಯದವರೆಗೆ ನೀರು ಪೂರೈಸಬಹುದು ಎಂದು ನಿಗಮ ತಿಳಿಸಿದೆ. ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರದಂತೆ ಅಗತ್ಯ ವಿರುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.
Related Articles
Advertisement
ಖಾಸಗಿ ಟ್ಯಾಂಕರ್‌ಗಳು ಸುಪರ್ದಿಗೆ?: ಜಲಮಂಡಳಿಯ ಬಳಿ 68 ಟ್ಯಾಂಕರ್‌ಗಳಿವೆ. ನೀರಿಗೆ ದಿಢೀರ್ ಕೊರತೆ ತಲೆ ದೋರಿದರೆ ಆ ಪ್ರದೇಶಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುವುದು. ಬರ ಘೋಷಣೆ ಹಿನ್ನೆಲೆಯಲ್ಲಿ ಏಪ್ರಿಲ್‌ಗೆ 80 ಹಾಗೂ ಮೇ ತಿಂಗಳಲ್ಲಿ 150 ಖಾಸಗಿ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ನೀಡುವಂತೆ ಈಗಾಗಲೇ ಹಿರಿಯ ಅಧಿಕಾರಿಗಳು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಮಸ್ಯೆ ತಲೆ ದೋರಿದ ಪ್ರದೇಶಗಳಿಗೆ ಆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು ಎಂದು ಹೇಳಿದರು.
ನಗರದಲ್ಲಿ 2000ಕ್ಕೂ ಹೆಚ್ಚು ಮಿನಿ ನೀರಿನ ಟ್ಯಾಂಕ್‌ಗಳಿದ್ದು, ಬಹಳಷ್ಟು ಕಡೆ ಅವುಗಳನ್ನು ವೈಯಕ್ತಿಕವಾಗಿ ಬಳಸಲಾಗುತ್ತಿದೆ. ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗು ವುದು. ಜತೆಗೆ ಬಿಬಿಎಂಪಿ ವತಿಯಿಂದ ಹಾಗೂ ಹಳೆಯ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿದ್ದಾಗ ಕೊರೆದ ಕೊಳವೆ ಬಾವಿಗಳಿದ್ದು, ಅವುಗಳಿಂದಲೂ ಜನ ನೀರು ಬಳಸಲಿದ್ದಾರೆ ಎಂದರು.
ಒಟ್ಟಾರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಗರದ ಜನತೆಯನ್ನು ಕಾಡದಂತೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ತುರ್ತು ಸಂದರ್ಭ ಹೊರತುಪಡಿಸಿ ಏಪ್ರಿಲ್ ಅಂತ್ಯದವರೆಗೆ ಸರಿಸುಮಾರು ಇದೇ ಪ್ರಮಾಣದಲ್ಲಿ ನೀರು ಪೂರೈಕೆಯಾಗಲಿದೆ. ನಂತರವೂ ಸಾಧ್ಯ ವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಸಮಸ್ಯೆ ಉಂಟಾಗದಂತೆ ತಡೆಯಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರಿಗೆ ಈಗ ನಿತ್ಯ 1,350 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿನ ಸಂಗ್ರಹದಿಂದ ಮೇ ಮಧ್ಯ ಭಾಗದವರೆಗೆ ನಗರಕ್ಕೆ ನೀರು ಪೂರೈಸಬಹುದು ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ. ಹಾಗಾಗಿ ಮೇ ತಿಂಗಳವರೆಗೆ ಬಹುತೇಕ ಎಂದಿನಂತೇ ನೀರು ಪೂರೈಕೆಯಾಗಲಿದೆ -ಎಚ್.ಎಂ.ರವೀಂದ್ರ, ಜಲಮಂಡಳಿ ಮುಖ್ಯ ಎಂಜಿನಿಯರ್ (ನಿರ್ವಹಣೆ)