Advertisement
ಹರೆಯದ ಹೆಣ್ಣುಮಕ್ಕಳನ್ನು ಕಾಡುತ್ತಿರುವ ದೀರ್ಘಕಾಲಿಕ ಸಮಸ್ಯೆಗಳಲ್ಲಿ ಪಿ.ಸಿ.ಓ.ಡಿಯೂ ಒಂದು. ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ಎಂದು ಕರೆಯಲ್ಪಡುವ ಈ ಸಮಸ್ಯೆ ಶೇ.15ರಿಂದ 25ರಷ್ಟು ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಋತುಚಕ್ರ ಆರಂಭವಾದಾಗಿನಿಂದ ನಿಲ್ಲುವವರೆಗೂ ಪ್ರತಿ ತಿಂಗಳು ಅಂಡಾಶಯದಲ್ಲಿರುವ ಫಾಲಿಕಲ್‌ಗಳಲ್ಲಿ ಒಂದೇ ಒಂದು ಪಕ್ವವಾಗಿ ಅದರಿಂದ ಅಂಡಾಣು ಬಿಡುಗಡೆಯಾಗುತ್ತದೆ.
ಈ ಸಮಸ್ಯಗೆ ನಿರ್ದಿಷ್ಟ ಕಾರಣಗಳಿಲ್ಲ. ಆದರೆ ಆನುವಂಶೀಯ, ಕೌಟುಂಬಿಕ, ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಕ್ರಮ, ಹೆಚ್ಚುತ್ತಿರುವ ಒತ್ತಡ, ವ್ಯಾಯಾಮ ಇಲ್ಲದಿರುವಿಕೆ, ರಾಸಾಯನಿಕಗಳ ಬಳಕೆ, ಧೂಮಪಾನ, ಮದ್ಯಪಾನ, ಬೊಜ್ಜು ಇದಕ್ಕೆ ಕಾರಣವಾಗಬಹುದು.
Related Articles
ಪಿ.ಸಿ.ಓ.ಡಿ ಇರುವವರಲ್ಲಿ ಋತುಚಕ್ರ ಬೇಗನೆ ಆರಂಭವಾಗುತ್ತದೆ. ಹುಡುಗಿಯರಲ್ಲಿ ಕಡಿಮೆ ಮುಟ್ಟು ಅಥವಾ ಮೂರು ತಿಂಗಳಿಗೊಮ್ಮೆ ಮುಟ್ಟು ಕಾಣಿಸಿಕೊಳ್ಳುತ್ತದೆ. ಅತಿಯಾದ ರಕ್ತಸ್ರಾವ, ಕಂಕುಳು, ಮೊಣ ಕೈ, ಬೆರಳಿನ ಸಂಧಿಗಳಲ್ಲಿ ಚರ್ಮ ಒಣಗಿ ದಪ್ಪಗಾಗಿ ಬೂದು ಬಣ್ಣ ಉಂಟಾಗುವುದು ನಿದ್ರಾಹೀನತೆ, ಬೊಜ್ಜು, ಖನ್ನತೆ ಮತ್ತು ಆತಂಕಗಳು ಕಾಣಿಸಿಕೊಳ್ಳುತ್ತದೆ.
Advertisement
ಪತ್ತೆಹಚ್ಚುವುದು ಹೇಗೆ?ಪಿ.ಸಿ.ಓ.ಡಿ ಸಮಸ್ಯೆ ಪತ್ತೆಹಚ್ಚುವುದರಲ್ಲಿ ಗೊಂದಲ ಉಂಟಾಗಬಹುದು. ಯಾಕೆಂದರೆ ಹದಿಹರೆಯದಲ್ಲಿ ಇರುವ ಕೆಲವು ಲಕ್ಷಣಗಳು ಪಿ.ಸಿ.ಓ.ಡಿಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗಾಗೀ ಗೊಂದಲಗಳು ಸಹಜ. ಅಂಡಾಣು ಬಿಡುಗಡೆಯಾಗದೇ ಇರುವುದು ಅಥವಾ ಕಡಿಮೆ ಬಿಡುಗಡೆಯಾಗುವುದು, ಮುಟ್ಟಿನಲ್ಲಿ ಏರುಪೇರು ಗಳಾಗುವುದು, ಮೊಡವೆ, ಅಸಹಜ ಕೂದಲು ಬೆಳವಣಿಗೆ ಇದರ ಪ್ರಮುಖ ಲಕ್ಷಣಗಳಲ್ಲಿ ಸೇರಿಕೊಂಡಿವೆ. ಚಿಕಿತ್ಸೆ
ಮುಟ್ಟಿನ ತೊಂದರೆಯನ್ನು ಸರಿಪಡಿಸಿ ಹೆಚ್ಚುವ ಆಂಡ್ರೋಜನ್ ಮಟ್ಟವನ್ನು ಕಡಿಮೆ ಮಾಡಬೇಕಾಗುತ್ತದೆ. ಇದಕ್ಕಾಗಿ ಆಹಾರ ಕ್ರಮಗಳನ್ನು ಬದಲಾಯಿಸಬೇಕು. ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯಬೇಕು. ಉಳಿದಂತೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಅಗತ್ಯ. ಆಹಾರ ಸೇವನೆ
ಜಂಕ್ ಫುಡ್, ಫಾಸ್ಟ್ ಫುಡ್‌ಗಳನಂತಹ ಆಹಾರ ಕ್ರಮಗಳಿಂದ ದೂರವಿರಬೇಕು. ಹಸಿರು ಸೊಪ್ಪು ತರಕಾರಿಗಳು, ಕ್ಯಾಬೇಜ್, ಕ್ವಾಲೀಫವರ್, ಬ್ರೋಕ್‌ಲಿ, ಬಸಳೆ, ಮೂಲಂಗಿ, ಸೌತೆಕಾಯಿ ಆಹಾರದಲ್ಲಿರಲಿ. ದ್ವಿದಳ ಧ್ಯಾನಗಳಾದ ಬೀನ್ಸ್, ಕಿಡ್ನಿ ಬೀನ್ಸ್, ಸೋಯಾ ಬೀನ್ಸ್, ಒಣ, ತಾಜಾ ಹಣ್ಣುಗಳು, ಒಮೇಗಾ-3 ಅಂಶ ಹೆಚ್ಚಿರುವ ವಾಲ್‌ನಟ್, ಆಲೀವ್ ಎಣ್ಣೆ, ಸಾಲ್ಮನ್ ಮೀನು, ಅಗಸೆ ಬೀಜ ಸೇವಿಸಬೇಕು. ಆದಷ್ಟು ನೀರು ಸೇವನೆ ಮಾಡಬೇಕು. ಕಾಫಿ, ಟೀ, ಸೇವನೆಯನ್ನು ತ್ಯಜಿಸಿ. ಪ್ರತಿನಿತ್ಯ ವ್ಯಾಯಾಮ ಇರಲಿ. ಪಿ.ಸಿ. ಓ.ಡಿ. ಸಮ ಸ್ಯೆ ಬಗ್ಗೆ ಭಯ ಪಡಬೇಕಾದ ಆವಶ್ಯಕತೆ ಇಲ್ಲ. ಆದರೆ ಅದನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ವೈದ್ಯರಿಂದ ಮಾರ್ಗದರ್ಶನ ಪಡೆದುಕೊಳ್ಳುವುದು ಬಹಳ ಮುಖ್ಯ. ಆಹಾರ ಸೇವನೆ, ವ್ಯಾಯಾಮ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರ ಮಾಡುತ್ತದೆ.
– ಶಿಲ್ಪಾ ಕಾಮತ್ , ಸ್ತ್ರೀ ರೋಗ ತಜ್ಞೆ ಮನೆ ಮದ್ದು
· ಬೆಚ್ಚಗಿನ ನೀರಿಗೆ 1 ಟೀ ಸ್ಪೂನ್ ಚಕ್ಕೆ ಅಥವಾ ದಾಲ್ಚಿನ್ನಿ ಪುಡಿ ಬೆರೆಸಿ ನಿತ್ಯ ಸೇವಿಸಬೇಕು. ಇದರಿಂದ ಮುಟ್ಟು ಕ್ರಮ ಪ್ರಕಾರವಾಗಿ ಉಂಟಾಗಿ ನೀರುಗುಳ್ಳೆಗಳು ಕರಗುತ್ತದೆ.
· ಆಗಸೆ ಬೀಜವನ್ನು (1-2 ಚಮಚ) ಅರೆದು ನೀರಿನಲ್ಲಿ ಬೆರೆಸಿ (1 ಕಪ್) ಪ್ರತಿದಿನ 1-2 ಬಾರಿ ಸೇವಿಸಿದರೆ ಪರಿಣಾಮಕಾರಿ.
· 3 ಚಮಚ ಮೆಂತ್ಯೆಯನ್ನು ಆರು ಗಂಟೆ ನೀರಲ್ಲಿ ನೆನೆಸಿ, 1 ಚಮಚದಂತೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಆಹಾರಕ್ಕೆ ಮೊದಲು ಅರೆದು ಚಿಟಿಕೆ ಬೆಲ್ಲ ಅಥವಾ ಉಪ್ಪು ಬೆರೆಸಿ ನಿತ್ಯ ಸೇವಿಸಬೇಕು. ಮೆಂತ್ಯೆ ಸೊಪ್ಪು, ಮೊಳಕೆ ಬರಿಸಿದ ಮೆಂತ್ಯೆ ಕಾಳಿನ ಕೋಸಂಬರಿ ಆಹಾರದಲ್ಲಿ ನಿತ್ಯ ಬಳಸಿದರೆ ಪರಿಣಾಮಕಾರಿ.
· ನಿತ್ಯ 8-10 ತುಳಸಿ ಎಲೆಗಳನ್ನು ಸೇವಿಸಿದರೆ ಪರಿಣಾಮಕಾರಿ. ಅಥವಾ ತುಳಸಿ ಚಹಾ
ಸೇವನೆಯೂ ಹಿತಕರ.
· 1-2 ಚಮಚ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಿಸಿ ನೀರಿನಲ್ಲಿ ನಿತ್ಯ ಬೆಳಗ್ಗೆ ಕುಡಿಯುವುದು ಕೂಡ ಪಿ.ಸಿ.ಓ.ಡಿ ಸಮಸ್ಯೆಗೆ ಪರಿಹಾರ. ಪ್ರಜ್ಞಾ ಶೆಟ್ಟಿ