Advertisement
ಮೊದಲದಿನದ ಭಯ ಬೇಡಕಾಲೇಜುಗಳಿಗೆ ತೆರಳುವಾಗ ಮೊದಲದಿನ ರ್ಯಾಗಿಂಗ್ ಆಗುತ್ತದೆ ಅಥವಾ ಸೀನಿಯರ್ ಹೆದರಿಸುತ್ತಾರೆಂಬ ಭಯದಲ್ಲಿ ಹೋಗಬಾರದು. ರ್ಯಾಗಿಂಗ್‌ನ್ನು ಎಲ್ಲ ಕಾಲೇಜುಗಳು ಈಗಾಗಲೇ ಸಂಪೂರ್ಣವಾಗಿ ನಿಷೇಧಿಸಿವೆ. ಎಲ್ಲ ಸೀನಿಯರ್‌ಗಳು ಜೂನಿಯರ್‌ಗಳನ್ನು ಗೋಳು ಹೊಯ್ದುಕೊಳ್ಳುವುದಿಲ್ಲ. ಅವರು ನಿಮಗೆ ಸಹಾಯಕರಾಗಲೂಬಹುದು. ಆದುದರಿಂದ ಅವರ ಜತೆ ನಿರಾತಂಕವಾಗಿ ಮಾತನಾಡಿ. ತಪ್ಪುಕಲ್ಪನೆಗಳು ದೂರವಾಗುತ್ತವೆ.
ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸುವು ದಾದರೆ ಅಲ್ಲಿ ಒಂದಿಷ್ಟು ಗೆಳೆಯ ಗೆಳತಿಯರನ್ನು ಸಂಪಾದಿ ಸಿಕೊಳ್ಳಿ. ಮನೆ ಬಿಟ್ಟು ನಿಲ್ಲುವಾಗ ಉಂಟಾಗುವ ಬೇಸರವನ್ನು ನೀಗಿಸಲು ಹಾಸ್ಟೆಲ್ ಗೆಳೆಯರಿಂದ ಸಾಧ್ಯ. ಗೆಳೆಯರೊಂದಿಗೆ ಮಾತನಾಡಿ
ಮೊದಲು ನಿಮ್ಮ ಗೆಳೆಯರು ಯಾವ ಕಾಲೇಜಿಗೆ ತೆರಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ನೀವು ತೆಗೆದುಕೊಳ್ಳುವ ವಿಷಯಗಳು ಒಂದೇ ಆಗಿದ್ದರೆ ಒಟ್ಟಿಗೆ ತೆರಳಬಹುದು. ಅಥವಾ ನಿಮ್ಮ ಹೊಸ ಕಾಲೇಜಿನಲ್ಲಿ ಹಳೆ ಸ್ನೇಹಿತರಿಲ್ಲದಿದ್ದರೆ ಹೊಸಬರನ್ನು ಆದಷ್ಟು ಪ್ರೀತಿಯಿಂದಲೇ ಮಾತನಾಡಿ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಪರಿಚಿತರು ಕಾಲೇಜಿನಲ್ಲಿದ್ದರೆ ಅವರ ಜತೆ ಮೊದಲ ದಿನ ಕಾಲೇಜಿಗೆ ತೆರಳಿ.
Related Articles
ಹೊಸ ತರಗತಿ ಆರಂಭವಾದ ಕೂಡಲೇ ಫ್ರೆಶರ್ ಡೇ ಗಳು ಇರುತ್ತವೆ. ಆ ಸಂದರ್ಭದಲ್ಲಿ ಮುಜುಗರಪಟ್ಟುಕೊಳ್ಳದೆ ನಿಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಪ್ರಕಟಿಸಿ. ಕಲೆಯಲ್ಲಿ ಆಸಕ್ತಿ ಇಲ್ಲದವರು ಇತರ ತಮ್ಮ ಪ್ರತಿಭೆಗಳನ್ನು ಪ್ರಕಟಿಸಿ. ಇದರಿಂದ ನೀವು ಬೇಗ ಎಲ್ಲರಿಗೂ ಪರಿಚಿತರಾಗುತ್ತೀರಿ.
ಕಲಿಯುವ ವಿಷಯದಷ್ಟೇ ಕಾಲೇಜಿಗೂ ಪ್ರಾಮುಖ್ಯತೆಯಿದೆ. ಒಂದೆರೆಡು ಸಣ್ಣ ಸಣ್ಣ ಕಾರಣಗಳನ್ನಿಟ್ಟುಕೊಂಡು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಬೇಡಿ. ಇಂದಿನ ಮನಸ್ಸಿಗೆ ಬೇಸರವಾಗುವ ಘಟನೆಗಳು ನಾಳೆ ನಗು ತರಿಸಬಹುದು. ಆದದನ್ನು ಅಲ್ಲೆ ಮರೆತು ಕಲಿಯುವತ್ತ ಆಸಕ್ತಿ ತೋರಿಸಿ.
Advertisement
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು