Advertisement

ವಿಚ್ಛೇದನಕ್ಕೆ  6 ತಿಂಗಳು ಕಾಯಬೇಕಿಲ್ಲ: ಸು.ಕೋ.

06:05 AM Sep 13, 2017 | Harsha Rao |

ಹೊಸದಿಲ್ಲಿ: ಹಿಂದೂ ವಿವಾದ ಕಾಯ್ದೆಯಲ್ಲಿ ಬದಲಾವಣೆ ಮಾಡಿರುವ ಸುಪ್ರೀಂ ಕೋರ್ಟ್‌, ಡೈವೋರ್ಸ್‌ ಸಂದರ್ಭದಲ್ಲಿ 
“6 ತಿಂಗಳ ಕಾಯುವಿಕೆ’ ಬೇಡ ಎಂದು ಮಹಣ್ತೀದ ತೀರ್ಪು ನೀಡಿದೆ. ನ್ಯಾ| ಆದರ್ಶ್‌ ಕೆ. ಗೋಯಲ್‌ ಮತ್ತು ನ್ಯಾ| ಉದಯ್‌ ಯು. ಲಲಿತ್‌ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದ್ದು, ಪತಿ-ಪತ್ನಿ ಒಪ್ಪಿ ಸ್ವಯಂ ಪ್ರೇರಿತವಾಗಿ ವಿಚ್ಛೇದನಕ್ಕೆ ಮುಂದಾದರೆ 6 ತಿಂಗಳು ಕಾಯುವ ಆವಶ್ಯಕತೆ ಇಲ್ಲ ಎಂದು ಹೇಳಿದೆ.

Advertisement

ಇದಷ್ಟೇ ಅಲ್ಲ, ಬೇರೆ ಬೇರೆಯಾಗಿ ಒಂದು ವರ್ಷವಾಯ್ತು, ಹೀಗಾಗಿ ಡೈವೋರ್ಸ್‌ ಕೊಡಿ ಎಂದು ಕೇಳುವ ಅಗತ್ಯವೂ ಇಲ್ಲ ಎಂದಿದೆ. ಅಂದರೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13(ಬಿ) ನಲ್ಲಿ 18 ತಿಂಗಳು ಕಾಯು ವಿಕೆ ಅವಧಿ ಅನಂತರ ಡೈವೋರ್ಸ್‌ ಕೊಡಬಹುದು ಎಂದಿದೆ.

ಸೆಕ್ಷನ್‌ 13(1)ರಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸುವ ಮುನ್ನ ಒಂದು ವರ್ಷ ಬೇರೆ ಬೇರೆಯಾಗಿರಬೇಕು ಎಂದಿದೆ. ಹಾಗೆಯೇ ಸೆಕ್ಷನ್‌ 13ಬಿ(2)ನಲ್ಲಿ ವಿಚ್ಛೇದನ ಪ್ರಕ್ರಿಯೆ ಶುರುವಾದ ಮೇಲೆ ಆರು ತಿಂಗಳು ಮತ್ತೆ ಜತೆಯಾಗಿರಬೇಕು. ಅಂದರೆ ಒಟ್ಟಾರೆ 18 ತಿಂಗಳುಗಳ ಕಾಲ ಒಟ್ಟಾಗಿರಬೇಕು ಎಂದು ಹೇಳಿದೆ.

ಪತಿ-ಪತ್ನಿ ಸಮ್ಮತಿಯಿಂದಲೇ ಡೈವೋರ್ಸ್‌ಗೆ ಅರ್ಜಿ ಸಲ್ಲಿಸುವ ಮುನ್ನ   ಒಂದು ವರ್ಷ ಹಾಗೂ ಅನಂತರ ಆರು ತಿಂಗಳು ಜತೆಯಲ್ಲಿ ಇರಬೇಕು ಎಂಬ ನಿಯಮಗಳನ್ನೇ ಸುಪ್ರೀಂ ಕೋರ್ಟ್‌ ತೆಗೆದು ಹಾಕಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13ಬಿ ಪ್ರಕಾರ ಪರಸ್ಪರ ಒಪ್ಪಿಗೆ ಇದ್ದರೆ ಡೈವೋರ್ಸ್‌ ಕೊಡಬಹುದು ಎಂದಿದೆ. ಆದರೆ ಪತಿ-ಪತ್ನಿಗೆ ಒಟ್ಟಾಗಿ ಬದುಕುವುದೇ ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾದಾಗ ಡೈವೋರ್ಸ್‌ ಕೊಡಬಹುದು ಎಂದಿದೆ.

Advertisement

ಕಾಯ್ದೆಯ ಪ್ರಕಾರ, ಆರು ತಿಂಗಳ ಅವಧಿ ಇರುವುದು ತೀರಾ ಅವ ಸರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು. ಒಂದು ವೇಳೆ ಪತಿ-ಪತ್ನಿ ಈ ಸಂದರ್ಭದಲ್ಲಿ ಪರಸ್ಪರ ಅರಿತು ಒಟ್ಟಾಗಿ ಜೀವನ ನಡೆಸಲು ಒಪ್ಪಿದರೂ ಒಪ್ಪಬಹುದು ಎಂಬ ಕಾರಣಕ್ಕೆ ಈ ಅವಧಿ ಇದೆ.

ಕಾಯ್ದೆಯ ಈ ಅಂಶ ಚೆನ್ನಾ ಗಿಯೇ ಇದೆ. ಆದರೆ, ಪತಿ-ಪತ್ನಿಗೆ ಜತೆಯಲ್ಲಿ ಬಾಳಲು ಸಾಧ್ಯವೇ ಇಲ್ಲ ಎಂದು ಅರಿವಾದ ಮೇಲೆ ಜತೆಯಲ್ಲಿ ಬಾಳುವೆ ನಡೆಸಿ ಎಂದು ಹೇಳುವುದರಲ್ಲಿ ಯಾವುದೇ ಅರ್ಥ ವಿಲ್ಲ. ಹೀಗಾಗಿ ಈ ಕೂಲಿಂಗ್‌ ಆಫ್ ಅವಧಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

ನಿಯಮವಿದೆ ಎಂಬ ಕಾರ‌ಣಕ್ಕೆ ತತ್‌ಕ್ಷಣವೇ ಡೈವೋರ್ಸ್‌ ನೀಡ ಬಾರದು. ಪತಿ-ಪತ್ನಿ ಜತೆ ಚರ್ಚೆ ನಡೆಸಿ, ಪರಿಸ್ಥಿತಿ ನೋಡಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೆಳಹಂತದ ಕೋರ್ಟ್‌ಗಳಿಗೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next