Advertisement
ಮಾರ್ಚ್ 5ರಿಂದ ಸಿಬಿಎಸ್‌ಸಿ 10 ಮತ್ತು 12ನೇ ತರಗತಿ ಪರೀಕ್ಷೆಗಳು ಆರಂಭವಾಗಲಿವೆ. ಈ ವೇಳೆ, ಕೆಲ ಶಾಲೆಗಳ ಆಡಳಿತ ಮಂಡಳಿಗಳು, ಇತ್ತೀಚೆಗೆ ತಾವೇ ನಡೆಸಿರುವ ಪೂರ್ವಸಿದ್ಧತಾ (ಪ್ರೀ-ಫೈನಲ್) ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಹಾಲ್ ಟಿಕೆಟ್‌ಗಳನ್ನು ತಡೆಹಿಡಿದಿವೆ. ಇವುಗಳನ್ನು ವಿತರಿಸಲು ವಿದ್ಯಾರ್ಥಿ ಗಳಿಂದ ಶುಲ್ಕವನ್ನೂ ಪೀಕುತ್ತಿವೆ ಎಂಬ ದೂರುಗಳು ಕೇಳಿಬಂದಿದ್ದರಿಂದ ಸಿಬಿಎಸ್‌ಸಿ ಪರೀಕ್ಷಾ ಕಂಟ್ರೋಲರ್ ಕೆ.ಕೆ. ಚೌಧರಿ ಈ ಆದೇಶ ಹೊರ ಡಿಸಿದ್ದಾರೆ. ಅಲ್ಲದೆ, ಹಾಲ್ ಟಿಕೆಟ್ ಹಿಡಿದಿಟ್ಟುಕೊಳ್ಳುವುದು ಸಿಬಿಎಸ್‌ಸಿ ಪರೀಕ್ಷಾ ನಿಯಮಾವಳಿಗಳ 15ನೇ ನಿಯಮದ ಉಲ್ಲಂಘನೆ ಎಂದಿದ್ದಾರೆ. Advertisement
ಹಾಲ್ ಟಿಕೆಟ್ ತಡೆ ಬೇಡ: ಸಿಬಿಎಸ್‌ಸಿ
09:00 AM Feb 27, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.