Advertisement

ಕಲೆ ನಿಂತ ನೀರಾಗದಿರಲಿ: ಪಟ್ಲ ಸತೀಶ್‌ ಶೆಟ್ಟಿ 

02:29 PM Feb 28, 2018 | Team Udayavani |

ಬೆಂದೂರ್‌ವೆಲ್‌ : ಯಕ್ಷಗಾನದಲ್ಲಿ ಗಾನ ಎಂಬ ಪದಕ್ಕೆ ಹೆಚ್ಚು ಮಹತ್ವ. ಗಾನ ಎಂದ ಮೇಲೆ ಸಂಗೀತ ಬೇಕು. ಕಲೆ ನಿಂತ ನೀರಾಗಬಾರದು. ಅದಕ್ಕಾಗಿ ಪ್ರಯೋಗಗಳು ನಡೆಯುತ್ತಲೇ ಇರಬೇಕು ಎಂದು ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

‘ಯಕ್ಷಗಾನ – ಪರಂಪರೆ ಮತ್ತು ಪ್ರಯೋಗ ಇತ್ತೀಚಿನ ಒಲವುಗಳು’ ವಿಷಯದ ಮೇಲೆ ಮಂಗಳೂರು ಸಂತ ಆ್ಯಗ್ನೆಸ್‌ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.

ವಿದ್ವಾಂಸರ ಸಂಖ್ಯೆ ಹೆಚ್ಚಳದಿಂದಲೋ, ಕಲಾವಿದರ ಅಜ್ಞಾನದಿಂದಲೋ ಯಕ್ಷಗಾನದ ಸರಿ- ತಪ್ಪುಗಳಲ್ಲಿ ಗೊಂದಲ ಏರ್ಪಟ್ಟಿವೆ. ಈ ಗೊಂದಲಗಳನ್ನು ನಿವಾರಿಸಲು ವಿದ್ವಾಂಸರು ಮತ್ತು ಕಲಾವಿದರು ಒಟ್ಟು ಸೇರಿ ಚರ್ಚಿಸಬೇಕು ಎಂದು ಅವರು ಹೇಳಿದರು.

ಮಂಗಳೂರು ವಿವಿ ಡಾ| ಪಿ. ದಯಾನಂದ ಪೈ ಮತ್ತು ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ| ಧನಂಜಯ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ಸಂತ ಆ್ಯಗ್ನೆಸ್‌ ಕಾಲೇಜಿನ ಡಾ| ಸಂಪೂರ್ಣಾನಂದ ಬಳ್ಕೂರು ಸ್ವಾಗತಿಸಿದರು. ರಥಬೀದಿ ಸಪ್ರದ ಕಾಲೇಜಿನ ಡಾ| ಪ್ರಕಾಶಚಂದ್ರ ಶಿಶಿಲ ವಂದಿಸಿದರು. ಪವಿತ್ರಾ ಕೆ. ನಿರೂಪಿಸಿದರು.

ಸಂತ ಆ್ಯಗ್ನೆಸ್‌ ಕಾಲೇಜು, ಮಂಗಳೂರು ರಥಬೀದಿ ಸರಕಾರಿ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಮಂಗಳೂರು ಆಕಾಶವಾಣಿ ಸಂಯುಕ್ತವಾಗಿ ಈ ವಿಚಾರಸಂಕಿರಣ ಏರ್ಪಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next