ಚನ್ನರಾಯಪಟ್ಟಣ: ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮೂರು ಅವಧಿಗೆ ದೇವೇಗೌಡ ಹೆಸರಿನಲ್ಲಿ ಗೆದ್ದು ಅಧಿಕಾರ ನಡೆಸಿದ್ದರು. ಈಗ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ನೋಡಿದರೆ ರಾಜಕೀಯವಾಗಿ ಹತಾಶರಾಗಿದ್ದಾರೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಎಚ್. ಡಿ. ದೇವೇಗೌಡರು ರಾಜ್ಯಸಭೆ ಸದಸ್ಯ ರಾಗಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಅಭಿಲಾಷೆಯಾಗಿತ್ತು,
ಆದರೆ ಪುಟ್ಟೇಗೌಡರು ಮಾತ್ರ ಹಿಂಬಾಗಿಲಿನಲ್ಲಿ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಮೂಲಕ ರಾಜಕೀಯ ಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ, ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಕುಮಾರಸ್ವಾಮಿ ಮೊದಲ ಬಾರಿ ಮುಖ್ಯ ಮಂತ್ರಿಯಾದಾಗ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕಾರ್ನರ್ ಸೈಟ್ ಬೇಕೆಂದು ಹಟ ಹಿಡಿದು ಪಡೆದರು.
ಅಳಿಯನ ಅಧಿಕಾರಕ್ಕಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿಯನ್ನು ಬಳಕೆ ಮಾಡಿ ಕೊಂಡರು. ಜಿಲ್ಲೆಯಲ್ಲಿ ಅಭಿವೃದಿಟಛಿ ಮಂತ್ರ ಜಪಿಸುವ ರೇವಣ್ಣ ಹಾಗೂ ಭವಾನಿ ಬಗ್ಗೆ ಹಗುರವಾಗಿ ಮಾತನಾಡುವ ಇವರು ಸ್ವಾರ್ಥಕ್ಕಾಗಿ ಗಂಗಣ್ಣ ಅವರ ಬೆನ್ನಿಗೆ ಚೂರಿ ಹಾಕಿದರು. ನಾನು ರಾಜಕೀಯವಾಗಿ ಎಂದೂ ದ್ರೋಹ ಮಾಡಿಲ್ಲ. ಪಕ್ಷದ ವರಿಷ್ಠರ ನಿರ್ಧಾರದಂತೆ ಕೆಲಸ ಮಾಡುತ್ತಿದ್ದೇವೆ ಎಂದರು. ಇವರು ಶಾಸಕರಾಗಿದ್ದಾಗ ನಾಗ ಸಮುದ್ರ ಮತ್ತು ಮಾರೇನಹಳ್ಳಿ ಬಳಿ ವಸತಿ ಹಂಚಿಕೆ ವೇಳೆ ಬಡವರಿಗೆ ನಿವೇಶನ ನೀಡದೇ ಉಳ್ಳವರಿಗೆ ನೀಡುವ ಮೂಲಕ ಭಷ್ಟಾಚಾರ ಮಾಡಿದ್ದಾರೆ.
ನಾನು ಗುತ್ತಿಗೆದಾರ ರೊಂದಿಗೆ ಶಾಮೀಲಾಗಿ ಕೆಲಸ ಮಾಡಿದ್ದರೆ ಸಾಕ್ಷಿ ಸಮೇತ ಸಾಬೀತು ಮಾಡಲಿ ಎಂದು ತಿಳಿಸಿದರು. ರಾಷ್ಟ್ರಕ್ಕೆ ದೇವೇಗೌಡರ ಅಗತ್ಯವಿದೆ ಹಾಗಾಗಿ ಇವರ ಆಯ್ಕೆ ಅವಿರೋಧ ವಾಯಿತು. ಹಿರಿಯರು ಇತರರ ಬಗ್ಗೆ ಮಾತನಾಡುವಾಗ ಆಲೋಚನೆ ಮಾಡಬೇಕು ಎಂದು ಹೇಳಿದರು. ಟಿಎಪಿಎಂಎಸ್ ನಿರ್ದೇಶಕ ಕೃಷ್ಣೇಗೌಡ, ಮುಖಂಡ ಎಚ್.ಎನ್. ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.