ನಿತ್ಯ ಬಳಕೆಯ ಅಗತ್ಯ ವಸ್ತುವಿನ ಪಟ್ಟಿಗೆ ಈಗ ಕಂಪ್ಯೂಟರ್ ಕೂಡ ಸೇರಿಕೊಂಡಿದೆ. ಮಕ್ಕಳ ಓದಿನಕಾರಣಕ್ಕೆ, ಆನ್ ಲೈನ್ ಖರೀದಿಯ ವಿಚಾರಕ್ಕೆ, ಹಲವು ಸಂಗತಿಗಳನ್ನುಕುರಿತು ಮಾಹಿತಿ ಹುಡುಕಲಿಕ್ಕೆ… ಹೀಗೆ ಹಲವು ಕಾರಣಗಳಿಗೆ ಈಗಕಂಪ್ಯೂಟರ್ ಅತ್ಯಗತ್ಯ ಅನ್ನುವಂತಾಗಿದೆ.ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನಾವು ಹೆಚ್ಚಾಗಿ ಬಳಸುವುದು ಕೀ ಬೋರ್ಡ್ ಅಥವಾ ಕೀಲಿಮಣೆಯನ್ನು. ಅಕ್ಷರಗಳು, ಸಂಖ್ಯೆಗಳು, ಸಂಕೇತಾಕ್ಷರಗಳು… ಹೀಗೆ ಎಲ್ಲವನ್ನೂ ಹೊಂದಿರುವುದು ಕೀಲಿಮಣೆಯ ವೈಶಿಷ್ಟ್ಯ. ಹೆಚ್ಚಾಗಿ ಬಳಸುತ್ತೇವಲ್ಲ; ಅದೇಕಾರಣಕ್ಕೆ ಈ ಕೀಲಿಮಣೆ ಬಹುಬೇಗನೆ ಹಳೆಯದರ ಹಾಗೆಕಾಣುವುದುಂಟು. ಕೀಬೋರ್ಡ್ ಸುಸ್ಥಿತಿಯಲ್ಲಿ ಇರಬೇಕೆಂದರೆ ಏನು ಮಾಡಬೇಕು ಗೊತ್ತೇ?
1.ಕೀಬೋರ್ಡ್‌ನ ಮೇಲೆಯೇ ಬಿಸ್ಕತ್ ಅಥವಾ ಕುರುಕಲು ತಿಂಡಿಗಳನ್ನು ಇಡುವ,ಕಾಫಿ- ಟೀಕುಡಿದು ತಿಂಡಿ ತಿನ್ನುವ ಕೆಲಸವನ್ನೂ ಹೆಚ್ಚಿನವರು ಮಾಡುವುದುಂಟು.ಕೆಲವೊಮ್ಮೆ ತಿಂಡಿಯ, ಬಿಸ್ಕತ್‌ನ ಚೂರುಕೀಲಿಗಳ ಒಳಗೆ ತೂರಿಕೊಂಡುಕೂತುಬಿಡುವು ದುಂಟು. ಅಂಥ ಸಂದರ್ಭದಲ್ಲಿ ಕೆಲವೊಮ್ಮೆ ಈ ಕೀಗಳು ಪ್ರಸ್ ಆಗದೆ ಗಟ್ಟಿಯಾಗಿ ನಿಂತುಬಿಡುತ್ತವೆ. ಹಾಗಾಗಿ, ಕೀ ಬೋರ್ಡ್ ಮುಂದೆಕೂತು ತಿಂಡಿ ತಿನ್ನುವುದನ್ನು ಬಿಡಬೇಕು.
2.ಚಿಕಂಪ್ಯೂಟರ್ ಬಳಕೆಯಸಂದರ್ಭದಲ್ಲಿಕೀಬೋರ್ಡ್ ಮತ್ತು ಸಿಪಿಯು ಮಧ್ಯೆ ಸಂಪರ್ಕ ಕಲ್ಪಿಸುವ ಒಂದು ವೈರ್ ಇರುತ್ತದೆ. ಯಾವುದೇ ಸಂಗತಿಯನ್ನು ಟೈಪ್ ಮಾಡಿದರೂ, ಅದು ಕಂಪ್ಯೂಟರ್ ಪರದೆಯ ಮೇಲೆಕಾಣಲು ಸಹಾಯ ಮಾಡುವುದೇ ಈ ವೈರ್. ಅದುಕಂಪ್ಯೂಟರ್‌ನ ಅತೀ ಸೂಕ್ಷ¾ ಭಾಗ. ಕೀಬೋರ್ಡ್ ಸರಿಯಿಲ್ಲ ಅನ್ನುತ್ತಾ ಆ ವೈರ್ ಅನ್ನು ಎಳೆಯುವ,ಕಿತ್ತು ಬಿಡುವ ಕೆಲಸ ಮಾಡಬಾರದು.
3.ಪ್ರತಿಯೊಂದುಕೀಗಳನ್ನೂ ಸೂಕ್ಷ್ಮವಾಗಿ ಫಿಕ್ಸ್ ಮಾಡಲಾಗಿರುತ್ತದೆ. ಯಾವುದಾದರೂ ಕೀ ಸರಿಯಾಗಿ ಪ್ರಸ್ ಆಗದೇ ಹೋದರೆ, ಅದನ್ನು ಮಾತ್ರ ಹುಷಾರಾಗಿ ಅಲುಗಾಡಿಸಿ ನೋಡಬೇಕು ಅಥವಾ ಬೇರ್ಪಡಿಸಬೇಕು. ಹಾಗೆ ಮಾಡದೆ, ಬಲಪ್ರಯೋಗಿಸಿ ಕೀಳಲು ಹೋದರೆ, ಉಳಿದಕೀಗಳಿಗೂ ತೊಂದರೆ ಆಗುವ ಸಂಭವವಿರುತ್ತದೆ.
4.ಆಗಾಗ ಶುಚಿಗೊಳಿಸುವುದು,ಕೀ ಬೋರ್ಡ್ ಸಂರಕ್ಷಣೆಗೆ ಇರುವ ಮತ್ತೂಂದು ಮಾರ್ಗ. ಅಂದಹಾಗೆ, ಕೀಬೋರ್ಡ್ ಶುಚಿಗೊಳಿಸಲು ನೀರು ಬಳಸುವ ಬದಲು, ಅದಕ್ಕೆಂದೇ ಇರುವ ದ್ರಾವಣವನ್ನು ಬಳಸುವುದು ಒಳ್ಳೆಯದು.
5.ಎಲ್ಲಾ ಕೀಗಳನ್ನೂ ಬೋರ್ಡ್‌ನಿಂದ ತೆಗೆದುಹಾಕಿ, ಅವುಗಳನ್ನು ತೊಳೆದು, ಮೃದುವಾದ ಬಟ್ಟೆಯಿಂದ ಅಥವಾ ಬ್ರಷ್ ನಿಂದ ಒರೆಸಿ ಮತ್ತೆ ಬೋರ್ಡ್‌ಗೆ ಫಿಕ್ಸ್ ಮಾಡುವುದುಕೀ ಬೋರ್ಡ್ ಸಂರಕ್ಷಣೆಯ ಉತ್ತಮ ವಿಧಾನ. ಆದರೆ, ಹೀಗೆ ಮಾಡುವ ಮುನ್ನ, ಯಾವಕೀ ಯಾವ ಜಾಗದಲ್ಲಿ ಇರಬೇಕು ಅನ್ನುವುದನ್ನು ಚೆನ್ನಾಗಿ ಅರಿತಿರಬೇಕು. ಅದಕ್ಕಿಂತ ಹೆಚ್ಚಾಗಿ, ಈ ಕೆಲಸ ಮಾಡಲು ಹೊರಟವರಿಗೆ ಅಪಾರ ತಾಳ್ಮೆ ಇರಬೇಕು.
6.ಕೀಬೋರ್ಡ್ ಅನ್ನು ಯಾವುದೇ ಕಾರಣಕ್ಕೂ ಜೋರಾಗಿ ಕುಟ್ಟಬಾರದು. ಹೀಗೆ ಮಾಡಿದಾಗ ಅಕಸ್ಮಾತ್ ಒಡೆದುಹೋದರೆ, ಕೆಲಸಕೆ ಡುತ್ತದೆ…