Advertisement

ಸ್ವಾರ್ಥಕ್ಕಾಗಿ ಪಠ್ಯ ಪುಸ್ತಕದಿಂದ ಟಿಪ್ಪು ಚರಿತ್ರೆ ತೆಗೆಯಬೇಡಿ

09:06 PM Nov 02, 2019 | Lakshmi GovindaRaju |

ದೇವನಹಳ್ಳಿ: ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪುಸ್ತಕದಿಂದ ಟಿಪ್ಪು ಕುರಿತ ಚರಿತ್ರೆ ತೆಗೆದು ಹಾಕಲು ಹೊರಟಿರುವುದು ಕರ್ನಾಟಕದ ಅರ್ಧ ಇತಿಹಾಸವೇ ಕತ್ತಲು ಮಾಡಿದಂತೆ ಎಂದು ಮಾಜಿ ಸಚಿವ ಎನ್‌.ಮಹೇಶ್‌ ವಿಷಾದ ವ್ಯಕ್ತ ಪಡಿಸಿದರು.

Advertisement

ಆದಿ ಕವಿ ಮಹರ್ಷಿ ವಾಲ್ಮೀಕಿ ಗುರುಗಳ ಜಯಂತೋತ್ಸವ ಅಂಗವಾಗಿ ನಗರದ ಗಿರಿಯಮ್ಮ ವೃತ್ತದಲ್ಲಿರುವ ಡಾ.ಬಿ.ಆರ್‌ ಅಂಬೇಡ್ಕರ್‌ ಭವನದಲ್ಲಿ ತಾಲೂಕು ಬಹುಜನ ವಿಧ್ಯಾರ್ಥಿ ಸಂಘ ಬಿವಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ 2018-19 ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜಕೀಯ ಮತ್ತು ಸ್ವಾರ್ಥಕ್ಕಾಗಿ ಟಿಪ್ಪು ಸಲ್ತಾನ್‌ ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆಯಬಾರದ‌ು. ಇಂತಹ ತೀರ್ಮಾನಗಳನ್ನು ಕೈ ಬಿಡಬೇಕು. ವಾಲ್ಮೀಕಿಯ ಪ್ರತಿಭಾವಂತಿಕೆಯಿಂದ ರಾಮಾಯಣ ಬರೆದಿದ್ದಾರೆ. ಅವರು ಹಾಕಿರುವ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.

18 ವರ್ಷ ಹಿಂದೆ ವಿದ್ಯಾರ್ಥಿಗಳಿಗಾಗಿ ಕಟ್ಟಲಾಗಿರುವ ಬಹುಜನ ವಿದ್ಯಾರ್ಥಿ ಸಂಘದಿಂದ ಎಲ್ಲಾ ಜಾತಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಇಡೀ ದೇಶದಲ್ಲೇ ಮಾದರಿಯಾದೆ. ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣ ನೀಡಬೇಕಾಗಿದ್ದು, ಅಂಬೇಡ್ಕರ್‌ ವಿರಚಿತ ಸಂವಿಧಾನ ಅಳವಡಿಕೆಯಿಂದ ದೇಶದಲ್ಲಿ ಶೇ.16 ರಷ್ಟಿದ್ದ ಸಾಕ್ಷರತೆ ಶೇ.74 ರಷ್ಟು ಏರಿಕೆಯಾಗಿದೆ.

ಕಡ್ಡಾಯ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಮುಂದಿನ 30 ವರ್ಷಗಳಲ್ಲಿ ಶೇ.100% ಪ್ರಗತಿ ಸಾಧಿಸುತ್ತೇವೆ. ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ನೀಡುವುದು ಸಂವಿಧಾನ ದ ಆಶಯವಾಗಿದೆ. ಬಹುಜನ ವಿದ್ಯಾರ್ಥಿ ಸಂಘ ಯಾವುದೇ ಜಾತಿ, ಧರ್ಮ, ರಾಜಕೀಯ ಸಂಘಟನೆ ಅಲ್ಲ ಇದು ಕೇವಲ ಬಹುಜನ ವಿದ್ಯಾರ್ಥಿಗಳ ಸಂಘವಾಗಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಲ್‌.ಎನ್‌ ನಾರಾಯಣಸ್ವಾಮಿ ಅವರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯ. ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಬಡತನದ ನಡುವೆಯೂ ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರಅನುಕೂಲವಾಗಲಿದೆ ಎಂದರು.

ಬಿವಿಎಸ್‌ ಜಿಲ್ಲಾ ಸಂಯೋಜಕ ಎಮ್‌.ಮಹೇಶ್‌ ದಾಸ್‌ ಮಾತನಾಡಿ, ಮಹರ್ಷಿ ವಾಲ್ಮೀಕಿ ಗುರುಗಳ ಜಯಂತೋತ್ಸವದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕೆ ರೀತಿಯ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಎಂದು ತಿಳಿಸಿದರು.

ತಾಲೂಕು ಬಿವಿಎಸ್‌ ಅಧ್ಯಕ್ಷ ಕಾರಹಳ್ಳಿ ಕೇಶವ ಅಧ್ಯಕ್ಷತೆ ವಹಿಸಿದ್ದು, ಈ ವೇಳೆ ಹೈಕೋರ್ಟ್‌ ವಕೀಲ ಎ.ಹರಿರಾಮ್‌, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ, ಪುರಸಭೆ ನಿಕಟ ಪೂರ್ವ ಅಧ್ಯಕ್ಷ ಎಮ್‌. ಮೂರ್ತಿ, ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌, ಗ್ರಾಪಂ ಸದಸ್ಯ ಬುಳ್ಳ ಹಳ್ಳಿ ರಾಜಪ್ಪ, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ನಾಗೇಶ್‌ ಬಾಬು, ನಳಂದ ರೆಸಿಡೆನ್ಷಿಯಲ್‌ ಇಂಟರ್‌ ನ್ಯಾಷನಲ್‌ ಶಾಲೆಯ ಅಧ್ಯಕ್ಷ ಎಮ್‌.ಲೋಕೇಶ್‌,

ಪುರಸಭಾ ಸದಸ್ಯ ಬಾಲರಾಜ್‌, ಐಐಎಬಿಎಸ್‌ ಕಾಲೇಜು ಪ್ರಾಂಶುಪಾಲ ಡಾ.ತ್ರಿಪುರನೇನಿ ಜಗ್ಗಯ್ಯ, ಸಹ್ಯಾದ್ರಿ ಪ್ರಥ‌ಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಸಿ ರಾಘವೇಂದ್ರ, ಸರ್ಕಾರಿ ಪ್ರಥ‌ಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಎಸ್‌.ಎನ್‌ ರವಿಕುಮಾರ್‌, ಪುರಸಭಾ ಮುಖ್ಯಧಿಕಾರಿ ಎಚ್‌.ಸಿ ಹನುಮಂತೇಗೌಡ, ಹಾಗೂ ಬಿವಿಎಸ್‌ ಘಟಕದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next