Advertisement

ಕೋವಿಡ್ ಕ್ಷೀಣಿಸಿದರೂ ಮೈಮರೆಯದಿರಿ

06:48 PM Nov 09, 2020 | Suhan S |

ಬೆಳಗಾವಿ: ಜಿಲ್ಲೆಯಲ್ಲಿ ಸದ್ಯ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಸಾರ್ವಜನಿಕರು ಮೈಮರೆಯದೆ ಮುಂಜಾಗ್ರತೆ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

Advertisement

ಜನ ಕಲ್ಯಾಣ ಟ್ರಸ್ಟ್‌ ನೇತೃತ್ವದ ನಗರದ ಜನಸೇವಾ ಕೋವಿಡ್‌ ಚಿಕಿತ್ಸೆ ಕೇಂದ್ರದ ಸೇವೆಗೆ ತಾತ್ಕಾಲಿಕ ವಿರಾಮ ಘೋಷಿಸಿದ ಹಿನ್ನೆಲೆಯಲ್ಲಿರವಿವಾರ ಅನಗೋಳದ ಸಂತಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಮಾರೋಪಸಮಾರಂಭದಲ್ಲಿ 40 ವೈದ್ಯರಿಗೆ ಹಾಗೂ ಕೋವಿಡ್‌ ಸೇನಾನಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಿದೆ. ಆ್ಯಂಟಿಬಾಡಿ ಇರುವವರಸಂಖ್ಯೆ ಬೆಳಗಾವಿಯಲ್ಲಿ ಹೆಚ್ಚುತ್ತಿದೆ. ಕೊರೊನಾ ಅವಧಿಯಲ್ಲಿ ಸೇವೆ ಸಲ್ಲಿಸಿದ ವಾರಿಯರ್ಸ್‌ಗಳನ್ನು ಜನವರಿ 26ರಂದು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು. ಜನಸೇವಾ ಟ್ರಸ್ಟ್‌ ಸೇರಿ ಸೇವೆ ಸಲ್ಲಿಸಿದ ಇತರೆ ಸಂಸ್ಥೆಗಳಿಗೆ ನೆರವಾಗಲು ಎಲ್ಲ ಸಹಕಾರ ನೀಡಲಾಗುವುದು ಎಂದರು.

ಕೋವಿಡ್‌ ಸೋಂಕು ಕಡಿಮೆ ಆಗುತ್ತಿದೆ ಎಂದು ಯಾರೂ ಮೈ ಮರೆಯಬಾರದು. ಸೋಂಕು ಬಹುತೇಕ ಇಳಿಮುಖವಾಗಿದೆ. ಆದರೆ ಎಲ್ಲರೂ ಜಾಗೃತ ವಹಿಸಬೇಕಾದ ಅಗತ್ಯವಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಲಸಿಕೆ ಬರುವವರೆಗೆ ಯಾರೂ ಮೈಮರೆಯಬಾರದು ಎಂದು ಹೇಳಿದರು.

ಕೋವಿಡ್‌ ಸೋಂಕು ತಡೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಕೆಲ ತಿಂಗಳುಗಳ ಕಾಲ ಸೋಂಕಿತರ ಸಂಖ್ಯೆ ಹೆಚ್ಚುತ್ತ ಹೋಯಿತು. ಇಂಥದರಲ್ಲಿ ಜಿಲ್ಲಾಡಳಿತ ನುರಿತ ವೈದ್ಯರನ್ನು ನೇಮಿಸಿತು. ಕೋವಿಡ್‌ ಕೇಂದ್ರಗಳನ್ನು ತೆರೆದು ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಯಾವುದೇ ಆಸ್ಪತ್ರೆಗಳಲ್ಲಿಯೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದರು.

Advertisement

ಜಿಲ್ಲೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಕೋವಿಡ್‌ ಸೋಂಕು ನಿಯಂತ್ರಿಸುವಲ್ಲಿ ಹಗಲಿರುಳು ಶ್ರಮಿಸುತ್ತಿವೆ. ಅನೇಕ ಕಡೆಗೆ ಕೋವಿಡ್‌ ಕೇಂದ್ರಗಳನ್ನು ತೆರೆದು ಸರ್ಕಾರದ ನೆರವಿಗೆ ಧಾವಿಸಿವೆ. ಅದರಂತೆ ಜನಕಲ್ಯಾಣ ಟ್ರಸ್ಟ್‌ ತೆರೆದಿದ್ದ ಕೋವಿಡ್‌ ಕೇಂದ್ರ ಬಹಳಷ್ಟು ಜನರಿಗೆ ಅನುಕೂಲರವಾಗಿದೆ. ಜನರಿಗೆ ಆರೈಕೆ ಮಾಡಿ ಚಿಕಿತ್ಸೆ ನೀಡಿರುವ ಕಾರ್ಯ ಶ್ಲಾಘನೀಯ ಎಂದರು.

ಜನಕಲ್ಯಾಣ ಟ್ರಸ್ಟ್‌ ಅಧ್ಯಕ್ಷ ಅರವಿಂದರಾವ್‌ ದೇಶಪಾಂಡೆ ಅಧ್ಯಕ್ಷತೆ ವಹಿಸಿ, ಕೋವಿಡ್‌ ಸೋಂಕು ಹೆಚ್ಚಾಗುತ್ತಿದ್ದಂತೆ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಜನ ಕಲ್ಯಾಣ ಟ್ರಸ್ಟ್‌ ವತಿಯಿಂದ ಕೋವಿಡ್‌ ಕೇಂದ್ರ ತೆರೆಯಲಾಯಿತು. ಅನೇಕ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಅಗತ್ಯ ಸೌಕರ್ಯ ಒದಗಿಸುವ ಕಾರ್ಯ ಮಾಡಲಾಗಿದೆ ಎಂದರು.

ಆರ್‌ಎಸ್‌ಎಸ್‌ ಅಖೀಲ ಭಾರತೀಯ ವ್ಯವಸ್ಥಾಪಕ ಪ್ರಮುಖ ಮಂಗೇಶಜಿ ಭೇಂಡೆ ಪ್ರಮುಖ ವಕ್ತಾರರಾಗಿದ್ದರು. ಜನಸೇವಾ ಟ್ರಸ್ಟ್‌ ಕಾರ್ಯದರ್ಶಿ ಸುಧೀರ ಗಾಡಗೀಳ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಾರೋಪದಲ್ಲಿ ಸುಮಾರು 124 ಗುಣಮುಖರಾದ ರೋಗಿಗಳು ಭಾಗವಹಿಸಿದ್ದರು. ಉತ್ತಮವಾಗಿ ಚಿಕಿತ್ಸೆ ನೀಡಿದ ವೈದ್ಯರು, ಶೂಶ್ರಕ/ಶೂಶ್ರಕಿಯರು, ದಾನಿಗಳನ್ನು ಸ್ಮರಿಸಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next