Advertisement
ತಾಲೂಕಿನ ಖೋದಂಪೊರ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಮಹಿಳೆಯೊಬ್ಬಳು ತಮ್ಮ ಸಮಸ್ಯೆ ತೋಡಿಕೊಂಡಳು. ಈ ಬಗ್ಗೆ ತಾಪಂ ಇಒ ಮಹಮ್ಮದ ಮೈನೋದ್ದೀನ ಪಟಲಿಕರ ಮಾತನಾಡಿ, ತಾಲೂಕಿಗೆ ಅಂಬೇಡ್ಕರ ವಸತಿ ಯೋಜನೆ, ಬಸವ ವಸತಿ ಯೋಜನೆ ಮತ್ತು ರಾಜೀವಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮಂಜೂರಿಗೊಂಡಿರುವ ಮನೆಗಳ ಬಿಲ್‌ಗಳು ಪಾವತಿಯಾಗಿಲ್ಲ. ಇದಕ್ಕಾಗಿ ನಿಗಮದಿಂದ ಕಳೆದ ನಾಲ್ಕು ತಿಂಗಳಿಂದ ಅನುದಾನ ಬಂದಿಲ್ಲವೆಂದು ಶಾಸಕರ ಎದುರು ಸಮಸ್ಯೆವಿವರಿಸಿದರು.
Related Articles
Advertisement
ಖೋದಂಪೂರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಒಂಭತ್ತು ಬೋರವೆಲ್ ಗಳಿದ್ದರೂ ಒಂದೂ ಬೋರವೆಲ್‌ಗಳಲ್ಲಿ ನೀರು ಬರುತ್ತಿಲ್ಲ ಎಂದು ಗ್ರಾಪಂ ಸದಸ್ಯೆ ಬಂಡಯ್ಯ ಸ್ವಾಮಿ ಶಾಸಕರ ಗಮನಕ್ಕೆ ತಂದರು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಗಾಗಿ ಎಚ್.ಕೆ.ಆರ್.ಡಿ ಬಿ.ಯಿಂದ ಅನುದಾನ ನೀಡಿ ಟ್ಯಾಂಕ್ ನಿರ್ಮಿಸಿ ಜನರಿಗೆ ಸವಲತ್ತು ನೀಡುತ್ತೇನೆಂದು ಶಾಸಕರು ಭರವಸೆ ನೀಡಿದರು.
ಕೋಡ್ಲಿ ಹೋಬಳಿಯಲ್ಲಿ ಬರುವ ಖೋದಂಪೂರ ಗ್ರಾಮ ಕಂದಾಯ ಇಲಾಖೆ ಸಾಫ್ಟವೇರ್‌ನಲ್ಲಿ ಬರುತ್ತಿಲ್ಲ. ಇದರಿಂದ ಪ್ರಮಾಣ ಪತ್ರ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತೊಂದರೆ ಪಡಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಕಳೆದ ವರ್ಷ ಚಿಮ್ಮನಚೋಡ ತೊಗರಿ ಖರೀದಿ ಕೇಂದ್ರಕ್ಕೆ 40 ಕ್ಟಿಂಟಾಲ್ ತೊಗರಿ ಮಾರಾಟ ಮಾಡಿದ್ದೇನೆ. ಕೇವಲ 30ಕ್ವಿಂಟಾಲ್ ತೊಗರಿ ಹಣ ಬಂದಿದೆ ಇನ್ನು 10 ಕ್ವಿಂಟಾಲ್ ತೊಗರಿ ಹಣ ವರ್ಷವಾದರೂ ಬಂದಿಲ್ಲ ಎಂದು ರೈತ ಶಿವಪುತ್ರಪ್ಪ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಶಾಸಕರು, ಇಂತಹ ಅನೇಕ ಸಮಸ್ಯೆಗಳಿವೆ ತರಾತುರಿಯಲ್ಲಿ ಸಭೆ ನಡೆಸಬಾರದು. ಸಭೆಯನ್ನು ಮುಂದೂಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಡಾ| ಬಾಲರಾಜ, ಗ್ರೇಡ್ 2 ತಹಶೀಲ್ದಾರ್ ಮಾಣಿಕರಾವ್, ಗ್ರಾಪಂ ಅಧ್ಯಕ್ಷ ನಾಗರಾಜಶೆಟ್ಟಿಗೌಡ, ಉಪಾಧ್ಯಕ್ಷೆ ಅನ್ನಪೂರ್ಣ, ಎಇಇ ಮಹ್ಮದ ಅಹೆಮದ, ಎಇಇ ಬಸವರಾಜ ನೇಕಾರ, ಟಿಎಚ್ಒ ಡಾ| ಮಹಮ್ಮದ ಗಫಾರ, ಡಾ| ಧನರಾಜ ಬೊಮ್ಮ, ಎಇಇ ಶರಣಬಸಪ್ಪ ಕೇಶ್ವಾರ, ಅಬಕಾರಿ ಇನ್ಸಪೆಕ್ಟರ್ ನಾಜಿಯಾ ಬೇಗಂ, ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ, ಕೃಷಿ ಅಧಿಕಾರಿ ಶ್ರೀಮಂತ ಮೋತಕಪಳ್ಳಿ, ಕಾಶಿಮ ಪಟೇಲ ಕುಪನೂರ ಇನ್ನಿತರರಿದ್ದರು.