Advertisement

ಯೋಗವನ್ನು ವ್ಯಾಪಾರದಂತೆ ನೋಡಬೇಡಿ

12:22 PM Jun 23, 2018 | Team Udayavani |

ಮೈಸೂರು: ಇತ್ತೀಚಿನ ದಿನಗಳಲ್ಲಿ ಯೋಗವನ್ನು ವ್ಯಾಪಾರದಂತೆ ನೋಡುತ್ತಿರುವುದು ಬೇಸರದ ಸಂಗತಿ ಎಂದು ಸಮಾಜ ಸೇವಕ ಡಾ.ಕೆ.ರಘುರಾಂ ವಿಷಾದಿಸಿದರು. 

Advertisement

ನಗರದ ಪತ್ರಕರ್ತರ ಭವನದಲ್ಲಿ ಹಿಮಾಲಯ ಕಲಾ ಸಾಹಿತ್ಯ ವೇದಿಕೆ, ಮೈಸೂರು ಯೋಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ “ಯೋಗ ಕಲಾರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಯೋಗವನ್ನು ವ್ಯಾಪಾರವೆಂಬಂತೆ ನೋಡುತ್ತಿರುವುದು ಬೇಸರದ ಸಂಗತಿ.

ಶುದ್ಧ ಶಾಸ್ತ್ರೀಯವಾಗಿ ಅನುಸರಿಸಬೇಕಿದ್ದ ಯೋಗವನ್ನು ಸಂಗೀತದ ಜತೆಗೆ ಏರೋಬಿಕ್ಸ್‌ನೊಂದಿಗೆ ಸೇರಿಸಿ ವ್ಯಾಪಾರ ಉದ್ದೇಶಕ್ಕಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ವರಿಗೂ ಉತ್ತಮ ಆರೋಗ್ಯ ಸಿಗಲಿ ಎಂಬ ಕಾರಣಕ್ಕೆ ಪತಂಜಲಿ ಮಹರ್ಷಿಗಳು ಜಗತ್ತಿಗೆ ಯೋಗಾ ಪ್ರಕಾರವನ್ನು ಪರಿಚಯಿಸಿದರು.  

ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಯೋಗಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ಹಲವು ಯೋಗ ಶಾಲೆಗಳನ್ನು ಆರಂಭಿಸಲಾಗಿತ್ತು. ಯೋಗ ಶಿಕ್ಷಣ ಅವಶ್ಯಕವೆಂದು ಅರಿತ ನಾಲ್ವಡಿ ಅವರು ಪಠ್ಯದಲ್ಲಿ ಯೋಗಶಾಸ್ತ್ರ ಅಳವಡಿಸಲು ನಿರ್ಧರಿಸಿ, ಪಠ್ಯ ತಯಾರಿಸಲು ತೀರ್ಮಾನಿಸಿದಂತೆ ಅವರು ತಯಾರಿಸಿದ ಪಠ್ಯವನ್ನು ಯೋಗ ಶಾಸ್ತ್ರದಲ್ಲಿ ಅಳವಡಿಸಲಾಯಿತು. ಮೈಸೂರು ನಗರಕ್ಕೂ ಯೋಗಾ ದಿನಕ್ಕೂ ಸುಸಂಸ್ಕೃತ ಸಂಬಂಧವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಸಾಧಕರಾದ ವಿ.ಸೋಮಶೇಖರ್‌, ಶಶಿಕುಮಾರ್‌, ಸಂದೀಪ್‌, ಪಾರ್ವತಮ್ಮ, ವಿಶ್ವನಾಥ್‌ಶೆಟ್ಟಿ, ರಮೇಶ್‌ಗೆ ಯೋಗ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಹಿಮಾಲಯ ಕಲಾ ಸಾಹಿತ್ಯ ವೇದಿಕೆ ಸಂಚಾಲಕ, ಕವಯಿತ್ರಿ ಹಾಗೂ ಹಿರಿಯ ಸಮಾಜ ಸೇವಕಿ ಡಾ.ಎ.ಪುಷ್ಪ ಐಯ್ಯಂಗಾರ್‌, ಶ್ರೀ ಶಾರದಾಂಬ ದೇವಸ್ಥಾನದ ಉಪಾಧ್ಯಕ್ಷ ಕಲ್ಯಾಣ್‌ಕುಮಾರ್‌, ಮೈಸೂರು ಯೋಗ ಅಸೋಸಿಯೇಷನ್‌ ಉಪಾಧ್ಯಕ್ಷ ಸಿ.ರಮೇಶ್‌ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next