Advertisement
ಕೇಂದ್ರ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ತುಳಜಾ ಭವಾನಿ ಕಾಲೇಜ್ ಆಫ್ ನರ್ಸಿಂಗ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಸಹಭಾಗಿತ್ವದಲ್ಲಿ ಶುಕ್ರವಾರ ಕೋವಿಡ್ ಲಸಿಕೆಯ ಮಹತ್ವ ಮತ್ತು ಅನಾವರಣ ಕುರಿತಾಗಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಸಿಕೆ ಪಡೆಯುವುದರಿಂದ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂಬ ಗಾಳಿ ಸುದ್ದಿ ಹಬ್ಬುತ್ತಿದ್ದು, ಸಾರ್ವಜನಿಕರು ಕಿವಿಗೊಡಬಾರದು ಎಂದರು.
ಅನಾವಶ್ಯಕವಾಗಿ ಮಾನಸಿಕವಾಗಿ ನಾಕಾರಾತ್ಮಕ ಚಿಂತೆಗೆ ಒಳಗಾಗಬಾರದು ಎಂದರು. ಲಸಿಕೆ ನೀಡುವ ಅಭಿಯಾನ ಜ. 16ರಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಲಿದ್ದು, ಮೊದಲ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಮತ್ತು ಆರೋಗ್ಯ ಕಾರ್ಯಕರ್ತರಿಗೆ ನೀಡಲು ಸಕಲ ಸಿದ್ಧತೆ
ಮಾಡಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ:ಪ್ರತಿಯೊಬ್ಬ ದೇಶಭಕ್ತನ ದೇಣಿಗೆ ಸಲ್ಲಲಿ: ಮಲ್ಲಿಕಾರ್ಜುನ ಹಿಪ್ಪರಗಿ
Related Articles
50 ವರ್ಷಕ್ಕೆ ಮೇಲ್ಪಟ್ಟ ನಾಗರಿಕರಿಗೆ ನೀಡಲಾಗುವುದು ಎಂದರು. ತದನಂತರ ಜನಸಾಮಾನ್ಯರಿಗೆ ನೀಡುವ ಬಗ್ಗೆ ಸರಕಾರ ನಿರ್ಧಾರಕ್ಕೆ ಬರಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಿ.ಕೆ. ಸುರೇಶ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಸಂಕಲ್ಪಕ್ಕೆ
ದ್ಯೋತಕವಾಗಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಸಿದ್ಧಪಡಿಸಲಾಗಿದ್ದು, ವಿದೇಶಗಳಿಂದಲ್ಲೂ ಈ ಲಸಿಕೆಗಳಿಗೆ ಬೇಡಿಕೆ ಬಂದಿದೆ. ಆದ್ದರಿಂದ
ಲಸಿಕೆ ಬಗ್ಗೆ ಸಕಾರಾತ್ಮಕ ಚಿಂತನೆ ನಡೆಸಬೇಕು ಎಂದರು. ರೋಗ ನಿರೋಧಕ ಶಕ್ತಿಗಾಗಿ ಈ ಲಸಿಕೆ ಪಡೆಯಲು ಜನಸಾಮಾನ್ಯರು ಈಗಿನಿಂದಲೇ
ಸನ್ನದ್ಧರಾಗಬೇಕೆಂದರು.
Advertisement
ತುಳಜಾ ಭವಾನಿ ಕಾಲೇಜ್ ಆಫ್ ನರ್ಸಿಂಗ್ ಪ್ರಾಧ್ಯಾಪಕ ಪ್ರೊ| ಸಚಿನ್ ಕಿರಣಿ ಮಾತನಾಡಿ, ಲಸಿಕೆ ಬಗ್ಗೆ ಜನಸಾಮಾನ್ಯರು ಮೇಲಿಂದ ಮೇಲೆ ಕೇಳುವಹಲವು ಪ್ರಶ್ನೆಗಳ ಸಂಬಂಧ ಕೇಂದ್ರ ಸರಕಾರದ ಆರೋಗ್ಯ ಇಲಾಖೆ ನೀಡಿರುವ ಸಮಜಾಯಿಸಿ ನೀಡಿದರು. ತುಳಜಾ ಭವಾನಿ ಕಾಲೇಜಿನ ಪ್ರಾಂಶುಪಾಲೆ ಡಾ|
ಪ್ರಭಾವತಿ ಕಾಳೆ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ| ರಾಜಶೇಖರಯ್ಯ ಕಣಕಾಲಮಠ ನಿರೂಪಿಸಿದರು. ತುಳಜಾ ಭವಾನಿ ಕಾಲೇಜ್ ಆಫ್ ನರ್ಸಿಂಗ್
ಆಡಳಿತಾಧಿಕಾರಿ ಶಿನಾನಂದ ರಾಠೊಡ ಇದ್ದರು.