Advertisement

ಬಯೋ ಮೆಡಿಕಲ್‌, ಎಲೆಕ್ಟ್ರಾನಿಕ್‌ ತ್ಯಾಜ್ಯ ಪರಿಸರಕ್ಕೆ ಸೇರದಿರಲಿ

07:20 AM Aug 09, 2017 | Harsha Rao |

ಮಂಗಳೂರು: ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಬಯೋ ಮೆಡಿಕಲ್‌ ತ್ಯಾಜ್ಯ ಹಾಗೂ ಎಲೆಕ್ಟ್ರಾನಿಕ್‌ ತ್ಯಾಜ್ಯಗಳು ಪರಿಸರಕ್ಕೆ ಮಾರಕವಾಗಿರುವುದರಿಂದ ಅವುಗಳು ಪರಿಸರ ಸೇರದಂತೆ ಸಂಬಂಧಪಟ್ಟವರು ಎಚ್ಚರ ವಹಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಮನಪಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅರಣ್ಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿ.ವಿ., ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಪುರಭವನ ದಲ್ಲಿ ಮಂಗಳವಾರ ಆಯೋಜಿಸಲಾದ “ಪ್ರಕೃತಿ ಸಂರಕ್ಷಣಾ ದಿನಾಚರಣೆ’ ಹಾಗೂ ಜಿಲ್ಲಾ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರಕ್ಕೆ ಆಘಾತವನ್ನುಂಟು ಮಾಡುವ ಯಾವುದೇ ತ್ಯಾಜ್ಯಗಳನ್ನು ಯಾರೂ ಎಸೆಯಬಾರದು. ಬೃಹತ್‌ ಉದ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿ ಮೀಸಲಿಡುವ ಶೇ. 2ರಷ್ಟು ನಿಧಿಯನ್ನು ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಒತ್ತು ನೀಡಬೇಕು ಎಂದವರು ಕರೆ ನೀಡಿದರು.

ಅರ್ಬನ್‌ ಇಕೋ ಪಾರ್ಕ್‌ 
ಪಿಲಿಕುಳದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಅರ್ಬನ್‌ ಇಕೋ ಪಾರ್ಕ್‌ ನಿರ್ಮಾಣಗೊಳ್ಳಲಿದ್ದು, ಬೆಳವಣಿಗೆ ಯಾಗುತ್ತಿರುವ ನಗರದಲ್ಲಿ ಪರಿಸರಕ್ಕೆ ಅನುಕೂಲವಾದ ಯಾವ ರೀತಿಯಲ್ಲಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳ ಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕೆಲಸ ಈ ಅರ್ಬನ್‌ ಇಕೋ ಪಾರ್ಕ್‌ ಮೂಲಕ ಮಾಡಲಾಗುವುದು ಎಂದು ಹೇಳಿದರು.

ಪರಿಸರ ನೀತಿ ಅಗತ್ಯ: ಸುರೇಶ್‌ ಹೆಬ್ಳೀಕರ್‌
ಉಪನ್ಯಾಸ ನೀಡಿದ, ಚಲನಚಿತ್ರ ನಟ ಹಾಗೂ ಎಕೋವಾಚ್‌ ಸಂಸ್ಥೆಯ ಮುಖ್ಯಸ್ಥರಾದ ಸುರೇಶ್‌ ಹೆಬ್ಳೀಕರ್‌ ಮಾತನಾಡಿ, ಪರಿಸರ ಸಂರಕ್ಷಣೆಗೆ ಸಂಬಂಧಿಸಿ ಜಾಗೃತಿ, ಮಾಹಿತಿ ನೀಡುವ ಜತೆಗೆ ಸಮರ್ಪಕ ಪರಿಸರ ನೀತಿಗಳನ್ನು ಜಾರಿಗೊಳಿಸುವುದು ಕೂಡ ಅತ್ಯಗತ್ಯವಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅಮೆರಿಕ ದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸಾಕಷ್ಟು ಉಪಕ್ರಮ ಗಳು, ನೀತಿಗಳ ಮೂಲಕ ಈಗಾಗಲೇ ಜಾಗತಿಕ ತಾಪಮಾನದ ವಿರುದ್ಧ ಹಾಗೂ ಏರುತ್ತಿರುವ ಜನಸಂಖ್ಯೆ ಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮ ಗಳನ್ನು ನಿಯಂತ್ರಿಸಲು ಕ್ರಮಗಳನ್ನು ತಮ್ಮ ದಾಗಿಸಿಕೊಂಡಿವೆ. ಅಭಿವೃದ್ಧಿ ಹೊಂದುತ್ತಿರುವ ಭಾರತ ದಂತಹ ದೇಶಗಳಲ್ಲಿ ಪರಿಸರಕ್ಕೆ ಮಾರಕವಾದ ವಸ್ತುಗಳ ಬಳಕೆ ಬಗ್ಗೆ ನಿಯಂತ್ರಣ ಹೇರುವ ಕೆಲಸವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾಡುವ ಅಗತ್ಯವಿದೆ. ಈ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಪರಿಸರ ಪಾಠ ಅಗತ್ಯವೂ ಇದೆ ಎಂದು ಅವರು ಹೇಳಿದರು.

Advertisement

80 ಕ್ರಿಮಿನಲ್‌ ಪ್ರಕರಣ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ಮಾತನಾಡಿ, ಇಲಾಖೆಯು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಮಾನದಂಡಗಳನ್ನು ಉಲ್ಲಂ  ಸಿದ ವಿವಿಧ ಸಂಸ್ಥೆಗಳ ವಿರುದ್ಧ ಕ‌ಳೆದ ಒಂದು ವರ್ಷ ದಲ್ಲಿ  80 ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿ ಸಿರುವುದಾಗಿ ಹೇಳಿದರು.

ಶಾಸಕ ಜೆ.ಆರ್‌. ಲೋಬೋ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ಕವಿತಾ ಸನಿಲ್‌, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಪಿಯೂಸ್‌ ಎಲ್‌. ರಾಡ್ರಿಗಸ್‌, ಎಂ. ವೆಂಕಟರಾಮ್‌, ಸುರೇಶ್‌ ಗುರಪ್ಪಾ ತಳವಾರ್‌, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ಡಾ| ಸಂಜಯ್‌ ಎಸ್‌. ಬಿಜೂರು, ಹಿರಿಯ ಸಿವಿಲ್‌ ನ್ಯಾಯಾಧೀಶ ಮಲ್ಲನಗೌಡ ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ವಿ. ಕರಿಕಲನ್‌, ಮನಪಾ ಆಯುಕ್ತ ಮುಹಮ್ಮದ್‌ ನಝೀರ್‌, ಎನ್‌ಐಟಿಕೆಯ ಪ್ರಾಧ್ಯಾಪಕ ಡಾ| ಜಿ. ಶ್ರೀನಿಕೇತನ್‌ ಉಪಸ್ಥಿತರಿದ್ದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್‌ ಸ್ವಾಗತಿಸಿದರು. ಆರ್‌.ಜೆ. ಲಕ್ಷ್ಮಣ್‌ ಪ್ರಸ್ತಾವನೆಗೈದರು.

ಜಿಲ್ಲಾ ಪರಿಸರ ಪ್ರಶಸ್ತಿ ಪುರಸ್ಕೃತರು
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿ ಯಿಂದ ಜಿಲ್ಲಾ ಪರಿಸರ ಪ್ರಶಸ್ತಿಯನ್ನು ಪ್ರದಾನ ಮಾಡ ಲಾಯಿತು. ಪರಿಸರಕ್ಕೆ ಒತ್ತು ನೀಡಿ ನಡೆಸಲಾದ ಕ್ರಮಗಳನ್ನು ಪರಿಗಣಿಸಿ ವಿವಿಧ ವಿಭಾಗ ಗಳಲ್ಲಿ ಪರಿಸರ ಪ್ರಶಸ್ತಿಗೆ ಆಯ್ಕೆ ನಡೆಸ ಲಾಗಿತ್ತು. ಆಸ್ಪತ್ರೆ ವಿಭಾಗದಲ್ಲಿ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಹೊಟೇಲ್‌ ವಿಭಾಗ ದಲ್ಲಿ ದಿ ಗೇಟ್‌ ವೇ, ಬಹುಮಹಡಿ ಕಟ್ಟಡ ವಿಭಾಗ ದಲ್ಲಿ ಎಸ್‌ಕೆಎಸ್‌ ಪ್ಲಾನೆಟ್‌ ಕದ್ರಿ ಹಿಲ್ಸ್‌, ವಿಶ್ವವಿದ್ಯಾ ನಿಲಯದ ವಿಭಾಗದಲ್ಲಿ ದೇರಳಕಟ್ಟೆಯ ನಿಟ್ಟೆ ವಿಶ್ವ ವಿದ್ಯಾನಿಲಯ, ಬೃಹತ್‌ ಉದ್ಯಮಗಳಡಿ ಎಂಆರ್‌ಪಿಎಲ್‌, ಪ್ರಥಮ ದರ್ಜೆ ಕಾಲೇಜು ವಿಭಾಗದಲ್ಲಿ ಸೈಂಟ್‌ ಆ್ಯನ್ಸ್‌ ಕಾಲೇಜ್‌ ಆಫ್ ಎಜುಕೇಶನ್‌ ಸಂಸ್ಥೆ, ಎಂಎಸ್‌ಎಂಇಯ ಮೈಕ್ರೋ ವಿಭಾಗದ ಉದ್ದಿಮೆಗಳಡಿ ಬೈಕಂಪಾಡಿಯ ಗಣೇಶ ಆಗ್ರೋ ಇಂಪೆಕ್ಸ್‌ ಸಂಸ್ಥೆ, ಸಣ್ಣ ಕೈಗಾರಿಕೆಗಳಡಿ ಕಾರ್ತಿಕೇಯ ಎಂಟರ್‌ಪ್ರೈಸಸ್‌ ಸಂಸ್ಥೆಗಳು ಪ್ರಶಸ್ತಿಗೆ ಆಯ್ಕೆ ಯಾಗಿದ್ದು, ಸಂಸ್ಥೆಗಳ ಪ್ರತಿನಿಧಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.

ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್‌ ಮಟ್ಟ ದಲ್ಲಿ ಮೂಡಬಿದಿರೆ ಪುರಸಭೆ, ಧರ್ಮಸ್ಥಳ ಗ್ರಾ.ಪಂ., ಮಂಚಿ ಗ್ರಾ.ಪಂ., ಮನ್ನಬೆಟ್ಟು ಗ್ರಾ.ಪಂ.ಗಳು ಪ್ರಶಸ್ತಿ ಯನ್ನು ಸ್ವೀಕರಿಸಿದವು. ಪರಿಸರ ಪ್ರೇಮಿ ಗಳು ಹಾಗೂ ಪರಿಸರ ಸಂರಕ್ಷಣೆಯಲ್ಲಿ  ವಿವಿಧ ರೀತಿ ಯಲ್ಲಿ ಕೊಡುಗೆ ನೀಡಿರುವ ಮಾಧವ ನಾರಾಯಣ ಉಳ್ಳಾಲ್‌, ಕೃಷ್ಣಪ್ಪ ಬೊಂದೇಲ್‌, ಕೃಷ್ಣಪ್ಪ ಗೌಡ ತಡಂಬೈಲ್‌, ಡಾ| ಎಲ್‌.ಸಿ. ಸೋನ್ಸ್‌ ಅವರಿಗೆ ಪರಿಸರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next