Advertisement

ಕಾಲೇಜುಗಳಲ್ಲಿ ಯೂನಿಯನ್‌ಗಳು ಬೇಡ

12:33 PM Dec 01, 2018 | |

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಯೂನಿಯನ್‌ ವ್ಯವಸ್ಥೆ ತರಬಾರದು ಎಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್‌.ಎಸ್‌.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಕರ್ನಾಟಕ ಗಾಂಧೀ ಸ್ಮಾರಕ ನಿಧಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ “ಬಾಪೂ 150: ಗಾಂಧಿ ಅಂಗಳದಲ್ಲಿ ಗಾಂಧಿ ಚಿಂತಕರು’ ಸಂವಾದದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಹಂತದಲ್ಲಿ ಒಂದು ಪಕ್ಷಕ್ಕೆ ಮತ್ತು ಸಿದ್ಧಾಂತಕ್ಕೆ ಸೀಮಿತಗೊಳ್ಳಬಾರದು. ಕಾಲೇಜುಗಳಲ್ಲಿ ಯೂನಿಯನ್‌ಗಳನ್ನು ಮಾಡಲು ಮುಂದಾಗಿರುವುದು ಸೂಕ್ತವಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ನುಸುಳುತ್ತದೆ ಎಂದು ಹೇಳಿದರು.

ಗಾಂಧೀಜಿ ಎಂದಿಗೂ ದೇಶ ವಿಭಜನೆಯ ಬಗ್ಗೆ ಯೋಚಿಸಿರಲಿಲ್ಲ. ಭಾರತ ಇಬ್ಭಾಗವಾಗದಂತೆ ಮೊಹಮ್ಮದ್‌ ಅಲಿ ಜಿನ್ನಾ ಅವರ ಜತೆ ಗಾಂಧೀಜಿ ಚರ್ಚಿಸಿದರು. ಆದರೆ ಆ ಸಂದರ್ಭದಲ್ಲಿ ಪಾಕಿಸ್ತಾನದ ನೆಲದಲ್ಲಿ ವಾಸವಿದ್ದ ಹಿಂದೂಗಳು ಮತ್ತು ಸಿಖVರು ಹಿಂಸೆ ತಡೆಯಲಾರದೆ ಭಾರತಕ್ಕೆ ಬಂದರು.

ಹೀಗಾಗಿ, ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಹಾಗೂ ಜವಾಹರಲಾಲ್‌ ನೆಹರು ಅವರು ದೇಶದಲ್ಲಿ ಶಾಂತಿ ಮೂಡಿಸುವ ಸಲುವಾಗಿ ಭಾರತವನ್ನು ವಿಭಜಿಸಲು ಮುಂದಾದರು. ಒಂದು ವೇಳೆ ಅಂದು ಪಾಕಿಸ್ತಾನ ದೇಶ ಉದಯಿಸಲು ಅವಕಾಶ ನೀಡದಿದ್ದರೆ ಮತ್ತಷ್ಟು ಸಾವು ನೋವು ಸಂಭವಿಸುತ್ತಿದ್ದವು ಎಂದು ತಿಳಿಸಿದರು.

ಪ್ರಪಂಚದಲ್ಲಿ ಪರಿಪೂರ್ಣ ವ್ಯಕ್ತಿಗಳೆಂದು ಯಾರೂ ಇರುವುದಿಲ್ಲ. ಎಲ್ಲರಿಂದಲೂ ತಪ್ಪಾಗುತ್ತವೆ. ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಂಡು ಬದುಕುವವರು ನಿಜವಾದ ಮನುಷ್ಯರಾಗುತ್ತಾರೆ ಎಂದ ಅವರು, ತಾತ್ವಿಕ ವಿಚಾರದಲ್ಲಿ ಅಂಬೇಡ್ಕರ್‌ ಹಾಗೂ ಗಾಂಧೀಜಿ ಅವರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ಅವರಿಬ್ಬರ ನಡುವೆ ಹಗೆತನ ಇರಲಿಲ್ಲ ಎಂದು ಹೇಳಿದರು.

Advertisement

ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ಪರಿಸರವಾದಿ ನಾರಾಯಣ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next