Advertisement
ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಬಸ್ ಕೊರತೆ, ಹೆತ್ತವರ ಅಸಹಕಾರ ಸಹಿತ ಹಲವು ಸಮಸ್ಯೆಗಳಿವೆ. ಈ ನಿಟ್ಟಿನಲ್ಲಿ ಯಾರಿಗೂ ಒತ್ತಡಪೂರ್ವಕವಾಗಿ ತರಗತಿ ನಡೆಸಬೇಕಾಗಿಲ್ಲ. ಆಸಕ್ತಿಯಿಂದ ಬರುವಂಥ ವಿದ್ಯಾರ್ಥಿಗಳಿಗೆ ತರಗತಿ ನಡೆಸಿ. ರಾತ್ರಿ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಬೆಳಗ್ಗೆ ಅಥವಾ ಸಂಜೆ ವೇಳೆ ವಿಶೇಷ ತರಗತಿ ನೀಡುವುದು ಸೂಕ್ತ ಎಂದರು.
ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಗೆಳೆಯ ರಂತೆ ವರ್ತಿಸಿ ಅವರನ್ನು ಪಠ್ಯದ ಕಡೆಗೆ ಗಮನ ಕೊಡುವಂತೆ ಪ್ರೇರೇಪಣೆ ನೀಡುವುದು ಮುಖ್ಯ. ಫಲಿತಾಂಶ ಗಳಿಕೆಯಲ್ಲಿ ಶಿಕ್ಷಕರ ಶ್ರಮ ಮಹತ್ವವಾದದ್ದು. ಶಿಕ್ಷಕರು ಕರ್ತವ್ಯ ನಿಷ್ಠೆಯನ್ನು ಪಾಲನೆ ಮಾಡಬೇಕು. ಪಠ್ಯ ವಿಷಯಗಳನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಿ, ಉಳಿದ ಸಮಯಗಳನ್ನು ಅಭ್ಯಾಸಕ್ಕಾಗಿ ಮೀಸಲಿಡುವಂತೆ ಅವರು ತಿಳಿಸಿದರು. ರಾತ್ರಿ ಶಾಲೆ ನಡೆಸುವುದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ತಾ.ಪಂ. ಸದಸ್ಯರಿಂದಲೂ ಉತ್ತಮ ಪ್ರೇರಣೆ ದೊರೆತಿದೆ ಎಂದು ರಾಮಕುಂಜ, ಇರ್ದೆ, ಉಪ್ಪಳಿಗೆ ಶಾಲಾ ಶಿಕ್ಷಕರು ತಿಳಿಸಿದರು. ರಾತ್ರಿ ವೇಳೆ ಕಾಡು ಪ್ರಾಣಿಗಳ ತೊಂದರೆಯಿದೆ. ರಾತ್ರಿ ಶಾಲೆಗೆ ವಿದ್ಯಾರ್ಥಿಗಳು ಬರುವುದಕ್ಕೆ ಭಯಪಡುತ್ತಾರೆ ಎಂದು ಸುಳ್ಯಪದವು ಶಾಲಾ ಶಿಕ್ಷಕ ತಿಳಿಸಿದರು.
Related Articles
ಪೂರ್ವಸಿದ್ಧತಾ ಪರೀಕ್ಷೆಗಳು ಕಠಿನವಾಗಿದ್ದರೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಪರೀಕ್ಷೆಯ ಬಗ್ಗೆ ವಿಶ್ವಾಸ ಮೂಡಿಸಲು ಮೂರು ಹಂತವಾಗಿ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಹಂತ ಹಂತವಾಗಿ ಕಠಿನಗೊಳಿಸುವುದು ಉತ್ತಮ. ತಾಲೂಕು ಮಟ್ಟದಲ್ಲಿ ನಡೆಯುವ ಪರೀಕ್ಷೆಯನ್ನು ಅತ್ಯಂತ ಸರಳಗೊಳಿಸಿ, ಜಿಲ್ಲಾ ಮಟ್ಟದ ಪರೀಕ್ಷೆಯನ್ನು ಸ್ವಲ್ಪ ಕಠಿನ ಹಾಗೂ ರಾಜ್ಯ ಮಟ್ಟದ ಪರೀಕ್ಷೆಯನ್ನು ಇನ್ನಷ್ಟು ಕಠಿನ ಮಾದರಿಯಲ್ಲಿ ನಡೆಸುವುದು ಸೂಕ್ತ ಎಂದು ರಾಮಕುಂಜ ಶಾಲಾ ಶಿಕ್ಷಕ ಸಲಹೆ ನೀಡಿದರು.
Advertisement
ಅಂಕ ಗಳಿಕೆಯಲ್ಲಿ ಹಿಂದೆಅಂಕ ಗಳಿಕೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಸೀದಿಗಳ ಮೂಲಕ ಸಭೆ ನಡೆಸಿ, ವಿದ್ಯಾರ್ಥಿಗಳ ಬಗ್ಗೆ ಹೆತ್ತವರಿಗೆ ತಿಳಿವಳಿಕೆ ನೀಡುವ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ತಿಳಿಸಿದರು.ಶಿಕ್ಷಣಕ್ಕೆ ಪೂರಕ ರಸಪ್ರಶ್ನೆಯನ್ನು ಆಯೋಜಿಸುವಂತೆ ಶಿಕ್ಷಕರಿಗೆ ಸೂಚಿಸಿದರು. ಶಾಲಾ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಪರಿಹರಿಸುವ ಭರವಸೆ ನೀಡಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ
ಉಪಸ್ಥಿತರಿದ್ದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಲೋಕಾನಂದ ವಂದಿಸಿದರು. ತಾ.ಪಂ. ಸ್ಪಂದನವಾಣಿ
ಎಸೆಸೆಲ್ಸಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪೂರಕವಾಗುವಂತೆ ತಾಲೂಕು ಪಂಚಾಯತ್‌ನಿಂದ ಸ್ಪಂದನವಾಣಿಯನ್ನು ಪ್ರಾರಂಭಿಸಲಾಗಿದೆ. ಇದರ ಮುಖಾಂತರ ಶಿಕ್ಷಕರು 0-35 ಅಂಕಗಳಿಸುವ ವಿದ್ಯಾರ್ಥಿಗಳ ಹೆತ್ತವರ ದೂರವಾಣಿ ಸಂಖ್ಯೆಯನ್ನು ಪಡೆದು ಆಯಾ ಭಾಗದ ತಾ.ಪಂ. ಸದಸ್ಯರಿಗೆ ನೀಡಬೇಕಾಗಿದೆ. ಶಿಕ್ಷಕರಿಂದ ಪಡೆದ ದೂರವಾಣಿಗಳಿಗೆ ಸದಸ್ಯರು ಕರೆಮಾಡಿ ಮಕ್ಕಳ ಶಿಕ್ಷಣದ ಬಗ್ಗೆ ಹೆತ್ತವರ ಅರಿವು ಮೂಡಿಸುವುದು ಹಾಗೂ ಮಕ್ಕಳ ಮೇಲಿನ ಹೆತ್ತವರ ಜವಾಬ್ದಾರಿ ಬಗ್ಗೆ ಮನವರಿಕೆ ಮಾಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು ಎಂದು ಸಾಮಾಜಿಕ ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಹೇಳಿದರು.