Advertisement

ಪಕ್ಷದಲ್ಲಿ ಗುಂಪುಗಾರಿಕೆ ಮಾಡಬಾರದು

12:39 PM Jul 05, 2017 | Team Udayavani |

ಎಚ್‌.ಡಿ.ಕೋಟೆ: ಪಕ್ಷದ ಟಿಕೇಟ್‌ ಅಕಾಂಕ್ಷಿಗಳ ಹಿಂದೆ ಬಿದ್ದು ಗುಂಪುಗಾರಿಕೆ ಮಾಡಬಾರದು, ಇದನ್ನು ಪಕ್ಷ ಎಂದು ಸಹಿಸುವುದಿಲ್ಲ, ಸೂಕ್ತ ಅಭ್ಯರ್ಥಿಯನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.

Advertisement

ಪಟ್ಟಣದ ಜೈನ ಭವನದಲ್ಲಿ ಮಂಗಳವಾರ ನಡೆದ ಪಕ್ಷದ ಬೂತ್‌ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯಲ್ಲಿ ಯಾರು ಅಭ್ಯರ್ಥಿಗಳಾಗುತ್ತಾರೆ ಎಂಬುದನ್ನು ಬಿಟ್ಟು ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಕಾರ್ಯಕರ್ತರಿಗೆ ತಿಳಿಸಿ, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 800 ಜನ ವಿಸ್ತಾರಕರನ್ನು ಹೊರಡಿಸುವುದಾಗಿ ಪಕ್ಷಕ್ಕೆ ಮಾತು ಕೊಡ್ಡಿದ್ದೇನೆ, ತಾಲೂಕಿನಿಂದ 100ಕ್ಕೂ ಹೆಚ್ಚು ವಿಸ್ತಾರಕರನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಪಕ್ಷಸಂಘಟನೆಗೆ ಕಳುಹಿಸಲಾಗುವುದು ಎಂದರು.

ಪಕ್ಷದ ಗ್ರಾಮಾಂತರ ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ.ರಾಮಕೃಷ್ಣಪ್ಪ ಮಾತನಾಡಿ, ಚುನಾವಣೆಯಲ್ಲಿ ಪರಾಭವಗೊಂಡ ತಕ್ಷಣ ಮನೆ ಸೇರಿಕೊಳ್ಳುವವರನ್ನು ಅಭ್ಯ ರ್ಥಿ ಮಾಡುವ ಬದಲು ಕಾರ್ಯಕರ್ತರ ಮಾತಿಗೆ ಸ್ಪಂದಿಸುವ ಮತ್ತು ಜನರೊಡನೆ ನಿಕಟ ಸಂಪರ್ಕ ಹೊಂದಿರುಂತವರನ್ನು ಪಕ್ಷ ಅಭ್ಯರ್ಥಿಯಾಗಿ ಆರಿಸಬೇಕು ಎಂದು ಸಲಹೆ ನೀಡಿದರು. ಮಂಡ್ಯ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಕೃಷ್ಣ  ಬೂತ್‌ ಮಟ್ಟದ ಕಾರ್ಯಕ್ರಮದ ರೋಪುರೇಷೆಗಳು ಮತ್ತು ಕಾರ್ಯವೈಖರಿ ಕುರಿತು ವಿವರಣೆ ನೀಡಿದರು.

ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಗಿರೀಶ್‌, ಜಿಲ್ಲಾ ಯುವಮೋರ್ಚಾ ಮಾಜಿ ಅಧ್ಯಕ್ಷ ನಂದೀಶ್‌, ಜಿಪಂ ಸದಸ್ಯ ವೆಂಕಟಸ್ವಾಮಿ, ಗೋಪಾಲ್‌ ಪೂಜಾರಿ, ವೆಂಕಟಸ್ವಾಮಿ, ಜೆ.ಸಿ ಯೋಗೇಶ ಕುಮಾರ್‌, ಮೊತ್ತ ಬಸವರಾಜಪ್ಪ, ಸುನಂದಮ್ಮ, ಸರ್ವಮಂಗಳಾ, ಪ್ರಧಾನ ಕಾರ್ಯದರ್ಶಿ ರಾಜು , ಮಾದೇವ್‌, ಪುಟ್ಟರಾಜು, ಸಂಚಾಲಕ ಚಂದ್ರಶೇಖರ್‌ ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next