Advertisement

4ನೇ ಕ್ಲಾಸ್‌ವರೆಗಿನ ಮಕ್ಕಳಿಗೆ ಹೋಂ ವರ್ಕ್‌ ಕೊಡ್ಬೇಡಿ!

07:50 AM Jul 20, 2017 | Harsha Rao |

ಹೈದರಾಬಾದ್‌: ಆ ಪುಟಾಣಿಗಳು ಹೋಗುವುದು ಕಿಂಡರ್‌ಗಾರ್ಡನ್‌ಗೆ. ಬ್ಯಾಗ್‌ನಲ್ಲಿ 5-6ನೇ ತರಗತಿ ವಿದ್ಯಾರ್ಥಿ ಬಳಕೆ ಮಾಡುವಷ್ಟು ಪುಸ್ತಕಗಳಿರುತ್ತವೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಎಷ್ಟೆಷ್ಟೋ ತಜ್ಞರ ಸಮಿತಿಗಳು ಕೊಟ್ಟ ವರದಿ ಕಪಾಟು ಸೇರಿವೆ. ಅದರ ವಿರುದ್ಧ ಯಾವುದೇ ರಾಜ್ಯ ಸರಕಾರ ಕ್ರಮ ಕೈಗೊಂಡ ದ್ದಿಲ್ಲ. ಆದರೆ, ತೆಲಂಗಾಣ ಸರಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಶಾಲಾ ಮಕ್ಕಳ ಬ್ಯಾಗ್‌ ತೂಕ 1.5 ಕೆಜಿಯಿಂದ 5 ಕೆಜಿ ವರೆಗೆ ಇರಬೇಕು. ಜತೆಗೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗಿನ ವಿದ್ಯಾರ್ಥಿ ಗಳಿಗೆ ಮನೆ ಕೆಲಸ (ಹೋಮ್‌ ವರ್ಕ್‌) ಕೊಡಲೇ ಬಾರದು ಎಂದು ಆದೇಶವನ್ನೇ ಹೊರಡಿಸಿದೆ. 

Advertisement

ಈ ಬಗ್ಗೆ ತೆಲಂಗಾಣದಲ್ಲಿರುವ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಂಗಳವಾರ ಸರ್ಕಾರಿ ಆದೇಶ ರವಾನೆಯಾಗಿದೆ. ಆಯಾ ತರಗತಿಗೆ ಹೊಂದಿಕೊಂಡಂತೆ ಸ್ಕೂಲ್‌ ಬ್ಯಾಗ್‌ನ ತೂಕ ಇರಬೇಕು ಎಂದು ಕಟ್ಟಾಜ್ಞೆ ಹೊರಡಿಸಲಾಗಿದೆ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಒಂದನೇ ತರಗತಿಯಿಂದ 4-6ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಸ್ಕೂಲ್‌ ಬ್ಯಾಗ್‌ನ ತೂಕ 6-12 ಕೆಜಿ ಇರುತ್ತದೆ. ಪ್ರೌಢಶಾಲೆಯ ಹಂತಕ್ಕೆ ಬಂದಾಗ ಅದರ ತೂಕ 17 ಕೆಜಿ ವರೆಗೆ ಇರುತ್ತದೆ. ಇದರಿಂದಾಗಿ ಮಕ್ಕಳ ಕೈಕಾಲುಗಳ ಮೇಲೆ ನೋವು ಉಂಟಾಗುತ್ತದೆ ಎಂದು ಹಲವು ಬಾರಿ ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಉದ್ವೇಗ ಕೂಡ ಉಂಟಾ ಗಲಿದೆ ಎಂದು ಅಧ್ಯಯನದಿಂದ ಕಂಡುಬಂದಿದೆ. 

ಗೈಡ್‌ಗೆ ನಿಷೇಧ: ಹೇಳಿ ಕೇಳಿ ಎಲ್ಲ ಶಾಲೆಗಳಲ್ಲಿ ಗೈಡ್‌ಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ಹೊಸ ಆದೇಶ ಪ್ರಕಾರ ನಿಷೇಧವಿದೆ. ಅದರ ಬದಲಾಗಿ ಮಕ್ಕಳನ್ನು ಚಿಂತನೆಗೆ ಹಚ್ಚುವಂಥ ಕೆಲಸ ಹೆಚ್ಚು ನೀಡಬೇಕೆಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next