Advertisement

ಆಸೆ-ಆಮಿಷಕ್ಕೆ ಬಲಿಯಾಗಬೇಡಿ

04:42 PM Mar 22, 2018 | |

ಮುದ್ದೇಬಿಹಾಳ: ಸತ್ಯವನ್ನು ನೂರು ಬಾರಿ ಹೇಳಿದರೂ ಅದು ಸತ್ಯವಾಗದ ಕಾಲ ಇದು. ಸುಳ್ಳು ವಿಜೃಂಭಿಸುತ್ತಿದೆ. ಸೀರೆ,
ಬಾಂಡೆ ಸಾಮಾನು ಸೇರಿ ಮತದಾರರಿಗೆ ಆಮೀಷ ಒಡ್ಡುವ ರಾಜಕಾರಣ ಶುರುವಾಗಿದೆ. ಈ ಬಗ್ಗೆ ಜಾಗೃತರಾಗಿರಬೇಕು
ಎಂದು ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್‌. ನಾಡಗೌಡ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕಿನ ಕೋಳೂರಲ್ಲಿ ಬುಧವಾರ ಸಿಸಿ ರಸ್ತೆ ಕಾಮಗಾರಿ ಭೂಮಿಪೂಜೆ, ಮುಖ್ಯಮಂತ್ರಿ ಅನಿಲ ಭಾಗ್ಯ
ಯೋಜನೆ, ವಿವಿಧ ವಸತಿ ಯೋಜನೆ, ಪಶುಭಾಗ್ಯ ಯೋಜನೆ ಅಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಪಕ್ಷ ಬಡವರಿಗೆ ಆಧಾರವಾಗುವ ಯೋಜನೆ ಜಾರಿಗೊಳಿಸಿದೆ. ಉದ್ಯೋಗ ಮೇಳ ನಡೆಸುತ್ತಿದ್ದೇವೆ. ಯಾವುದೇ ರೈತರಿಗೆ ಅನ್ಯಾಯ ಮಾಡಿಲ್ಲ. ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ. ಕೆಲಸ ಆಗಿಲ್ಲ ಎಂದು ಹೇಳುವವರು ಸರಿಯಾಗಿ ಪರಿಶೀಲನೆ ನಡೆಸಿ ಮಾತನಾಡಬೇಕು.

ಮತಕ್ಷೇತ್ರದಲ್ಲಿ ನೀರಾವರಿ ಯೋಜನೆ ಪರಿಣಾಮ ಸಕ್ಕರೆ ಕಾರ್ಖಾನೆ ಬಂದಿದೆ. ಸೋಲಾರ ವಿದ್ಯುತ್‌ ಯೋಜನೆ ಪ್ರಗತಿಯಲ್ಲಿದೆ. ವಸತಿ ಶಾಲಾ ಕಾಲೇಜು ಪ್ರಾರಂಭಗೊಂಡಿವೆ. ಏತ ನೀರಾವರಿಗೆ ಶಂಕುಸ್ಥಾಪನೆ ಮಾಡಲಾಗಿದೆ. ರಸ್ತೆಗಳು ಉತ್ತಮ ಗುಣಮಟ್ಟದಲ್ಲಿ ತಯಾರಾಗುತ್ತಿವೆ. ಪಟ್ಟಣ ಪ್ರದೇಶಗಳಲ್ಲಿ ಒಳಚರಂಡಿ ಯೋಜನೆ ಬಂದಿದೆ. ಇವೆಲ್ಲ ಅಭಿವೃದ್ಧಿ ಅಲ್ಲವೇ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದುಕೊಂಡಿರುವ ಸರ್ಕಾರ ಎನ್ನಿಸಿಕೊಂಡಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶಾಸಕ ನಾಡಗೌಡರು ಸಾಕಷ್ಟು ಕೆಲಸ ಮಾಡಿದ್ದಾರೆ. ಅವರೊಬ್ಬ ಕಲಿಯುಗದ ಬಸವಣ್ಣ ಇದ್ದಂತೆ. ನಿಮ್ಮ ಸೇವೆ ಮಾಡಿದ್ದಕ್ಕೆ ಈ ಚುನಾವಣೆಯಲ್ಲಿ ಕೂಲಿ ಕೇಳುತ್ತಿದ್ದೇವೆ. ಈ ಬಾರಿಯೂ ಶಾಸಕ ನಾಡಗೌಡರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದರು.

Advertisement

ಅಲಬಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ತಾಪಂ ಸದಸ್ಯ ಪ್ರೇಮಸಿಂಗ್‌ ಚವ್ಹಾಣ, ಅಖೀಲ ಗೋವಾ ಕನ್ನಡಿಗರ ಮಹಾಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಜಿಪಂ ಮಾಜಿ ಸದಸ್ಯ ಚಿದಾನಂದ ಸೀತಿಮನಿ, ಗ್ರಾಪಂ ಅಧ್ಯಕ್ಷೆ ಸುಮಿತ್ರಾ ರಾಠೊಡ, ಉಪಾಧ್ಯಕ್ಷೆ ಯಲ್ಲವ್ವ ಚಲವಾದಿ, ಎಪಿಎಂಸಿ ನಿರ್ದೇಶಕ ಬೀರಪ್ಪ ಯರಝರಿ, ಗುರುಬಾಯಿ ಬಿರಾದಾರ, ಶರಣಪ್ಪ ಕತ್ತಿ, ಕೆ.ಎಸ್‌. ಗೂಳಿ ವೇದಿಕೆಯಲ್ಲಿದ್ದರು. 

ಇದೇ ವೇಳೆ ಹಲವಾರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ಮತ್ತು ಸೌಲಭ್ಯ ವಿತರಿಸಲಾಯಿತು. ಗ್ರಾಮಸ್ಥರು ಶಾಸಕರಿಗೆ ಬೆಳ್ಳಿಯ ಗಣಪತಿ ವಿಗ್ರಹ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮಕ್ಕೂ ಮೊದಲು ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ ಸ್ವಾಗತಿಸಿದರು. ಸಿಆರ್‌ಪಿ ಟಿ.ಡಿ. ಲಮಾಣಿ ನಿರೂಪಿಸಿದರು. ಕಾಂಗ್ರೆಸ್‌ ಮುಖಂಡ ಎಸ್‌.ಜಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next