Advertisement

ಸಿದ್ದಾಂತ ಶಿಖಾಮಣಿಯಿಂದ ಬದುಕು ಹಸನು

05:53 PM Aug 31, 2022 | Team Udayavani |

ಅಫಜಲಪುರ: ಮನುಷ್ಯ ಜೀವನದಲ್ಲಿ ಸಂಸಾರದ ಜಂಜಾಟ, ತೊಳಲಾಟಗಳಲ್ಲಿ ಬಿದ್ದು ಮನಃಶಾಂತಿ ಕಳೆದುಕೊಳ್ಳದೇ ಇರಲು ಸಿದ್ಧಾಂಥ ಶಿಖಾಮಣಿ ಓದಿದರೇ ಬದುಕು ಹಸನಾಗುತ್ತದೆ ಎಂದು ಸೊಲ್ಲಾಪುರ ಸಂಸದ ಹಾಗೂ ಗೌಡಗಾಂವ ಮಠದ ಪೂಜ್ಯ ಡಾ| ಜಯಸಿದ್ದೇಶ್ವರ ಸ್ವಾಮೀಜಿ ನುಡಿದರು.

Advertisement

ಪಟ್ಟಣದ ಮಳೇಂದ್ರ ಮಠದ ಆವರಣದಲ್ಲಿ ಶ್ರಾವಣ ಮಾಸ ಮುಕ್ತಾಯದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು ಹಬ್ಬ, ಹರಿದಿನಗಳನ್ನು ಆಚರಣೆ ಮಾಡಲು ಒಂದೊಂದು ಕಾಲ, ದಿನ, ಮೂಹೂರ್ತ ನಿಗದಿ ಮಾಡಿದ್ದಾರೆ. ಇದನ್ನೆಲ್ಲ ಸಿದ್ಧಾಂತ ಶಿಖಾಮಣಿಯಲ್ಲಿ ತಿಳಿಸಲಾಗಿದೆ.

ಹೀಗಾಗಿ ಎಲ್ಲರೂ ಸಿದ್ದಾಂತ ಶಿಖಾಮಣಿ ಓದಿ ಎಂದು ಸಲಹೆ ನೀಡಿದರು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಮಳೇಂದ್ರ ಮಠ ಭಕ್ತಿ, ಭಾವೈಕ್ಯತೆ ಸಾರಿದ ಮಠವಾಗಿದೆ. ಅದರಲ್ಲೂ ಈಗಿನ ಶ್ರೀಗಳಾದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಎಲ್ಲ ಜಾತಿ, ಜನಾಂಗದವರನ್ನು ಸಮಾನವಾಗಿ ಕಾಣುತ್ತ ಧರ್ಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಮಾದನಹಿಪ್ಪರಗಾ, ಚಿನ್ಮಯಗಿರಿ, ಆಲಮೇಲ, ಯಂಕಂಚಿ, ಶ್ರೀನಿವಾಸ ಸರಡಗಿ ಶ್ರೀಗಳು ಆಶಿರ್ವಚನ ನೀಡಿದರು. ಗಂಗಾಧರ ಶ್ರೀಗಿರಿ, ಶಿವಪುತ್ರ ಸಂಗೋಳಗಿ, ಸಿದ್ಧಯ್ಯ ಸ್ವಾಮಿ ಕರ್ಜಗಿ, ಶಿವಶರಣಪ್ಪ ಸಿರಿ, ರವೂಫ್‌ ಪಟೇಲ್‌, ಪುರಸಭೆ ಮುಖ್ಯಾಧಿಕಾರಿ ಸುರೇಶ ಬಬಲಾದ, ಧರ್ಮಸ್ಥಳ ಸಂಸ್ಥೆ ತಾಲೂಕು ಅಧಿಕಾರಿ ಶಿವರಾಜ ಆಚಾರ್ಯ ಇನ್ನಿತರರು ಇದ್ದರು. ಚಂದ್ರಶೇಖರ ಕರ್ಜಗಿ ಸ್ವಾಗತಿಸಿದರು, ಶಿವಕುಮಾರ ಗುಂದಗಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next