ಬಾಂಡೆ ಸಾಮಾನು ಸೇರಿ ಮತದಾರರಿಗೆ ಆಮೀಷ ಒಡ್ಡುವ ರಾಜಕಾರಣ ಶುರುವಾಗಿದೆ. ಈ ಬಗ್ಗೆ ಜಾಗೃತರಾಗಿರಬೇಕು
ಎಂದು ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್. ನಾಡಗೌಡ ಹೇಳಿದರು.
Advertisement
ಮುದ್ದೇಬಿಹಾಳ ತಾಲೂಕಿನ ಕೋಳೂರಲ್ಲಿ ಬುಧವಾರ ಸಿಸಿ ರಸ್ತೆ ಕಾಮಗಾರಿ ಭೂಮಿಪೂಜೆ, ಮುಖ್ಯಮಂತ್ರಿ ಅನಿಲ ಭಾಗ್ಯಯೋಜನೆ, ವಿವಿಧ ವಸತಿ ಯೋಜನೆ, ಪಶುಭಾಗ್ಯ ಯೋಜನೆ ಅಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಅಲಬಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ತಾಪಂ ಸದಸ್ಯ ಪ್ರೇಮಸಿಂಗ್ ಚವ್ಹಾಣ, ಅಖೀಲ ಗೋವಾ ಕನ್ನಡಿಗರ ಮಹಾಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಜಿಪಂ ಮಾಜಿ ಸದಸ್ಯ ಚಿದಾನಂದ ಸೀತಿಮನಿ, ಗ್ರಾಪಂ ಅಧ್ಯಕ್ಷೆ ಸುಮಿತ್ರಾ ರಾಠೊಡ, ಉಪಾಧ್ಯಕ್ಷೆ ಯಲ್ಲವ್ವ ಚಲವಾದಿ, ಎಪಿಎಂಸಿ ನಿರ್ದೇಶಕ ಬೀರಪ್ಪ ಯರಝರಿ, ಗುರುಬಾಯಿ ಬಿರಾದಾರ, ಶರಣಪ್ಪ ಕತ್ತಿ, ಕೆ.ಎಸ್. ಗೂಳಿ ವೇದಿಕೆಯಲ್ಲಿದ್ದರು.
ಇದೇ ವೇಳೆ ಹಲವಾರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ಮತ್ತು ಸೌಲಭ್ಯ ವಿತರಿಸಲಾಯಿತು. ಗ್ರಾಮಸ್ಥರು ಶಾಸಕರಿಗೆ ಬೆಳ್ಳಿಯ ಗಣಪತಿ ವಿಗ್ರಹ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮಕ್ಕೂ ಮೊದಲು ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ ಸ್ವಾಗತಿಸಿದರು. ಸಿಆರ್‌ಪಿ ಟಿ.ಡಿ. ಲಮಾಣಿ ನಿರೂಪಿಸಿದರು. ಕಾಂಗ್ರೆಸ್ ಮುಖಂಡ ಎಸ್.ಜಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.