Advertisement
ಈ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಯು. ಶ್ರೀನಿವಾಸ ಮಲ್ಯ ಅವರ ಅಭಿವೃದ್ಧಿ ಮಾದರಿಗಳನ್ನು ಮುಂದಿಟ್ಟುಕೊಂಡು ದೂರದೃಷ್ಟಿಯುಳ್ಳ ಅಭಿವೃದ್ಧಿ ಯತ್ತ ಹೆಜ್ಜೆ ಇರಿಸಿದ್ದೇನೆ. ಬೃಹತ್ ಕಂಪೆನಿಗಳಿರುವ ಈ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ವಾಹನಗಳ ದಟ್ಟಣೆ, ಜನದಟ್ಟಣೆ ಏರುವ ಸಾಧ್ಯತೆಗಳು ನಿಚ್ಚಳ ವಾಗಿವೆ. ಈ ನಿಟ್ಟಿನಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ, ಬ್ಯಾಂಕುಗಳ ಏಕಕಿಂಡಿ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾದರಿಯಾಗಿ ರೂಪಿಸುವ ಆಶಯದಿಂದ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಇದರಲ್ಲಿ ಲಂಚ ಪಡೆದಿ ದ್ದಾರೆ ಎಂಬ ಆರೋಪ ಗಳಿದ್ದು, ಆರೋಪ ಸಾಬೀತಾದರೆ ರಾಜೀನಾಮೆ ನೀಡಲೂ ಹಿಂಜರಿಯಲಾರೆ. ಮಾದರಿ ಕ್ಷೇತ್ರ ರೂಪಿಸಲು ಹಲವು ಅಡ್ಡಿ ಆತಂಕ ಸಹಜ. ಮತ ದಾರರು ಅಭಿವೃದ್ಧಿ ಬಯಸಿ ದ್ದಾರೆ. ಇದನ್ನು ಈಡೇರಿ ಸಲು ಕಳೆದ ನಾಲ್ಕೂ ಮುಕ್ಕಾಲು ವರ್ಷಗಳಲ್ಲಿ ಗರಿಷ್ಠ ಪ್ರಯತ್ನ ಪಟ್ಟಿದ್ದೇನೆ. ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿ ಗರಿಷ್ಠ ಅನುದಾನ ತಂದಿದ್ದೇನೆ ಎಂದರು.
ಈಗ 2.75 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ, ಗುಡ್ಡೆಕೊಪ್ಲ ರಸ್ತೆಗೆ 1.13 ಕೋ.ರೂ. ವೆಚ್ಚದಲ್ಲಿ ಶಿಲಾನ್ಯಾಸ, 40 ಲಕ್ಷ ರೂ. ವೆಚ್ಚದ ಒಳರಸ್ತೆ, 8 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಬೀದಿದೀಪ ಉದ್ಘಾಟನೆ ನಡೆಸಲಾಗಿದೆ. ಪ್ರಥಮ ಹಂತದಲ್ಲಿ 62 ಕೋ.ರೂ. ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಬೈಲಾರೆ ತೋಡು ನಿರ್ಮಾಣಕ್ಕೆ 2 ಕೋ. ರೂ., ಕಟ್ಲ ಚರಂಡಿ ನಿರ್ಮಾಣಕ್ಕೆ 2 ಕೋ. ರೂ., ಸುರತ್ಕಲ್ ವಲಯ ಕಚೇರಿಗೆ 2.25 ಕೋ.ರೂ., ಮೀನಕಳಿಯ ಕಡಲ್ಕೊರೆತ ತಡೆಗೆ 4.70 ಕೋ.ರೂ. ಮತ್ತಿತರ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿ ಹಂತದಲ್ಲಿವೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.