Advertisement

ರೈತರಿಗೆ ಹೆಚ್ಚಿನ ಶುಲ್ಕ ವಿಧಿಸಬೇಡಿ

04:11 PM Mar 06, 2018 | Team Udayavani |

ಲಿಂಗಸುಗೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಕರಡಕಲ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಿರಿಮಲ್ಲನಗೌಡ ಪಾಟೀಲ್‌ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು ಸರ್ಕಾರ ಕಡಲೆ ಖರೀದಿ ಕೇಂದ್ರ ಆರಂಭಿಸಿರುವುದು ಸಂತಸದ ವಿಷಯವಾಗಿದೆ. ಕೇಂದ್ರದ ಅಧಿಕಾರಿಗಳು ರೈತರಿಗೆ ಯಾವುದೇ ತೊಂದರೆಯಾಗದಂತೆ ಕಡಲೆ ಖರೀದಿ ಮಾಡಿ, ತೂಕದಲ್ಲಿ ವ್ಯತ್ಯಾಸ ಕಂಡುಬರದಂತೆ ಹಾಗೂ ಹೆಚ್ಚಿನ ಶುಲ್ಕ ವಿಧಿಸದೇ ನ್ಯಾಯಯುತವಾಗಿ ಖರೀದಿ ಮಾಡಬೇಕು ಎಂದರು.

ಪ್ರತಿ ಎಕರೆಗೆ 5 ಕ್ವಿಂಟಲ್‌ ಕಡಲೆ ಖರೀದಿ ಮಾಡಲಾಗುವುದು. ಒಬ್ಬ ರೈತರಿಂದ 15 ಕ್ವಿಂಟಲ್‌ ಮಾತ್ರ ಕಡಲೆ ಖರೀಸಲಾಗುವುದು. ಆನ್‌ಲೈನ್‌ನಲ್ಲಿ ನೋಂದಾಯಿಸಲಾಗಿದೆ. ಇಲ್ಲಿವರಿಗೂ 926 ರೈತರು ಹೆಸರು ನೋಂದಾಯಿಸಿದ್ದಾರೆ. ಮಾ.6ರಂದು ನೋಂದಣಿಗೆ ಕೊನೆ ದಿನವಾಗಿದೆ. ಪ್ರತಿ ಕ್ವಿಂಟಲ್‌ ಕಡಲೆಗೆ 4,400 ರೂ.ಬೆಂಬಲ ಬೆಲೆ ನೀಡಿ ಖರೀದಿಸಲಾಗುವುದು ಎಂದು ವಿಎಸ್‌ಎನ್‌ಎನ್‌
ಕಾರ್ಯದರ್ಶಿ ಸಿದ್ದಲಿಂಗಪ್ಪ ಕುಂಬಾರ ತಿಳಿಸಿದ್ದಾರೆ.

ಸಹಕಾರಿ ಅಭಿವೃದ್ಧಿ ಅಧಿಕಾರಿ ಶೇಖ್‌ ಹುಸೇನ್‌, ಮುಖಂಡರಾದ ಸಿದ್ಧಲಿಂಗಪ್ಪ, ಈಶ್ವರಪ್ಪ ಸಾಲ್ಮನಿ, ವೆಂಕನಗೌಡ ಐದನಾಳ, ಬಸವರಾಜ ಸೇರಿದಂತೆ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next