Advertisement

ಮೊರಾರ್ಜಿ ದೇಸಾಯಿ ಹೆಸರು ಬದಲಿಸುವ ಉದ್ದೇಶ ಇಲ್ಲ: ಸಿಎಂ

08:00 AM Aug 18, 2017 | Team Udayavani |

ಬೆಂಗಳೂರು: ವಸತಿ ಶಾಲೆಗಳಿಗೆ ಇಟ್ಟಿರುವ ಮೊರಾರ್ಜಿ ದೇಸಾಯಿ ಹೆಸರನ್ನು ಬದಲಾವಣೆ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸದಾಗಿ ಆರಂಭಿಸುವ ಶಾಲೆಗಳಿಗೆ ಮಾತ್ರ ಇಂದಿರಾಗಾಂಧಿ ಹೆಸರು ಇಡಲಾಗುವುದು ಎಂದು ಹೇಳಿದ್ದಾರೆ.

Advertisement

ದೆಹಲಿಯಲ್ಲಿ ಮಾತನಾಡಿದ ಅವರು, ವಸತಿ ಶಾಲೆಗಳಿಗೆ ಮೊರಾರ್ಜಿ ದೇಸಾಯಿ ಅವರ ಹೆಸರು ನಾಮಕರಣ ಮಾಡಿದ್ದೇ ನಾನು. ಹಣಕಾಸು ಸಚಿವನಾಗಿದ್ದಾಗ ಮೊರಾರ್ಜಿ ದೇಸಾಯಿ ಹೆಸರು ನಾಮಕರಣ ಮಾಡಿದೆ.

ಯಡಿಯೂರಪ್ಪ ಅವರಿಗೆ ಇದು ಗೊತ್ತಾ ಎಂದು ಪ್ರಶ್ನಿಸಿದರು. ಅಂಬೇಡ್ಕರ್‌ ಅವರ 125ನೇ ವರ್ಷದ ಜನ್ಮದಿನಾಚಣೆ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ 125 ವಸತಿ ಶಾಲೆ ಆರಂಭಿಸುತ್ತಿದ್ದೇವೆ. ಅದೇ ರೀತಿ ಇಂದಿರಾಗಾಂಧಿ ಅವರ 100ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ 100 ವಸತಿ ಶಾಲೆಗಳಿಗೆ ಚಾಲನೆ ನೀಡಿದ್ದೇವೆ. ದೇವರಾಜ ಅರಸು ಅವರ ಹೆಸರಿನಲ್ಲೂ ಶಾಲೆಗಳನ್ನು ಆರಂಭಿಸಿದ್ದೇವೆ. ಬಿಜೆಪಿಯವರು ಸುಮ್ಮನೆ ಗೊಂದಲ ಸೃಷ್ಟಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next