Advertisement

ಧರ್ಮ ಒಡೆಯುವ ಕೆಲಸ ಬೇಡ

04:58 PM Feb 16, 2018 | |

ಹೂವಿನಹಿಪ್ಪರಗಿ: ಮಠಗಳಲ್ಲಿ ಯಂತ್ರ, ದಾರ ಕಟ್ಟುವುದು ಮೂಢನಂಬಿಕೆ ಎಂದು ಸರಕಾರ ಜಾರಿಗೆ ತರುತ್ತಿರುವ ಕಾಯಿದೆ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದೆ ಎಂದು ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ಹೇಳಿದರು.

Advertisement

ಸುಕ್ಷೇತ್ರ ಕರಿಭಂಟನಾಳದ ವಿಷಮರ್ಧನ ಶ್ರೀ ಗುರು ಗಂಗಾಧರೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಗಂಗಾಧರ ಶ್ರೀ ಪ್ರಶಸ್ತಿ ಪ್ರದಾನ, ಜನಜಾಗೃತಿ ಸಭೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ದೇವರ ಮೇಲೆ ನಂಬಿಕೆ ಇರಿಸಿಕೊಂಡ ಭಕ್ತರು ತಮಗೆ ನೆಮ್ಮದಿ ಸಿಗಲೆಂದು ಬಸವನಾಡಿನ ಸುಕ್ಷೇತ್ರಗಳಾದ ಉತ್ನಾಳ ಹಾಗೂ ಕರಿಭಂಟನಾಳದಲ್ಲಿ ಯಂತ್ರ, ದಾರಗಳನ್ನು ಕಟ್ಟಿಸಿಕೊಳ್ಳಲು ಬರುತ್ತಾರೆ. ಅದನ್ನೇಕೆ ಸರ್ಕಾರ ನಿಷೇಧ ಹೇರಲು ಮುಂದಾಗಿದೆ ಎಂದು ಪ್ರಶ್ನಿಸಿದರು. 

ಧರ್ಮ ಧರ್ಮಗಳನ್ನು ಕೂಡಿಸುವ ಕೆಲಸ ಮಾಡಬೇಕೇ ಹೊರತು ಧರ್ಮ ಧರ್ಮಗಳನ್ನು ಒಡೆಯುವ ಕೆಲಸಗಳನ್ನು ಮಾಡಬೇಡಿ. ಧರ್ಮದ ಇತಿಹಾಸ ಗೊತ್ತಿಲ್ಲದೇ ರಾಜಕಾರಣ ಮಾಡದಿರಿ ಎಂದರು.

 ಪತ್ರಕರ್ತ ಪ್ರಶಾಂತ ರಿಪ್ಪನಪೇಟೆ ಮಾತನಾಡಿದರು. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ ಎಕ್ಸಲೆಂಟ್‌ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ದೇಶ ಕಟ್ಟುವಲ್ಲಿ ಮಠ ಮಂದಿರಗಳ ಪಾತ್ರ ದೊಡ್ಡದಾಗಿದೆ ಎಂದರು. ಗಂಗಾಧರಶ್ರೀ ಪ್ರಶಸ್ತಿ ಸ್ವೀಕರಿಸಿ ತಾಲೂಕು ದಂಡಾಧಿಕಾರಿ ಎಂ.ಎನ್‌. ಚೋರಗಸ್ತಿ ಮಾತನಾಡಿದರು.

Advertisement

ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶಿವಪುತ್ರಯ್ಯ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸೋಮನಗೌಡ ಪಾಟೀಲ, ರಾಜುಗೌಡ ಪಾಟೀಲ, ಮುಖಂಡ ಡಾ| ಬಸನಗೌಡ ಪಾಟೀಲ, ಶಿವಮೊಗ್ಗ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ, ಶಹಾಪುರದ ಸೂಗುರೇಶ್ವರ ಶಿವಾಚಾರ್ಯರು, ಐ.ಬಿ. ಹಿರೇಮಠ, ಕೊಟ್ರೇಶಪ್ಪ ಬಿದರಿ, ಡಾ| ಬಿ.ಎಚ್‌ . ಶಿವಲಿಂಗಮೂರ್ತಿ, ಶೇಖರಯ್ಯ ಹಿರೇಮಠ, ಬಸವರಾಜ ಶಿವಯೋಗಿ, ಶರಣಪ್ಪಗೌಡ ಕರಡಿ, ಮಲ್ಲಿಕಾರ್ಜುನ ಭಾವಿಕಟ್ಟಿ, ಶಿವಾನಂದ ಕೆಲ್ಲೂರ, ಶಿವಾನಂದ ಕಲ್ಯಾಣಿ, ರಮೇಶ ಬಿದನೂರ, ಬಸವರಾಜ ದೇಶಮುಖ ಸೇರಿದಂತೆ ಅನೇಕರು ಇದ್ದರು. ಈರಯ್ಯ ಹೀರೇಮಠ ನಿರೂಪಿಸಿದರು.  ಪ್ರೊ| ಐ.ಬಿ. ಹಿರೇಮಠ ಸ್ವಾಗತಿಸಿದರು. ದೇವೇಂದ್ರ ಗೋನಾಳ ವಂದಿಸಿದರು.

ಗಂಗಾಧರಶ್ರೀ ಪ್ರಶಸ್ತಿ: ದಾವಣಗೆರೆಯ ಸುರಭಿ ಮತ್ತು ಮೈತ್ರಿ ಸಂಸ್ಥೆ ಅಧ್ಯಕ್ಷ ಡಾ| ಶಂಕರ ಪಾಟೀಲ, ತಹಶೀಲ್ದಾರ ಎಂ.ಎನ್‌. ಚೋರಗಸ್ತಿ ಹಾಗೂ ಗದಗದ ವೀಶ್ವರಪ್ಪ ರೇವುಡಿ ಅವರಿಗೆ ಗಂಗಾಧರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next