ಮಂಗಳೂರು: ‘ಕರಾವಳಿಗೆ ಬಂದು ಅಭಿವೃದ್ದಿ ವಿಚಾರದಲ್ಲಿ ಪ್ರಚಾರ ಮಾಡಿ. ಆದರೆ ಹಿಂದು, ಮುಸ್ಲಿಂ,ಕ್ರಿಶ್ಚಿಯನ್ ಬಂಧುಗಳನ್ನು ಬೇರ್ಪಡಿಸಬೇಡಿ’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಲ್ಲಿ ಆಹಾರ ಸಚಿವ ಯು.ಟಿ.ಖಾದರ್ ಬೇಡಿಕೊಂಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್ ‘ಕರಾವಳಿಯಲ್ಲಿ ಕಾಂಗ್ರೆಸ್ ಎಷ್ಟು ಬಲಿಷ್ಠವಾಗಿದೆ ಎಂದು ಈಗ ತಿಳಿದಿದೆ. ರಾಜ್ಯದ ಬಿಜೆಪಿ ನಾಯಕರಿಂದ ಯಾವ ಕೆಲಸವೂ ಆಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ಅಧ್ಯಕ್ಷರೇ ಬರುತ್ತಿದ್ದಾರೆ’ ಎಂದರು.
‘ಜಿಲ್ಲೆಯ ಜನ ಸದ್ಯ ಒಟ್ಟಾಗಿದ್ದಾರೆ,ಇಲ್ಲಿ ಹಿಂದು,ಮುಸ್ಲಿಂ,ಕ್ರೈಸ್ತರು ಒಂದೇ ತಾಯಿಯ ಮಕ್ಕಳ ತರ ಇದ್ದೇವೆ. ನಮ್ಮ ವ್ಯಾಪಾರ ಸಂಸ್ಕೃತಿ ಇರಲಿ ಎಲ್ಲಾ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಇದ್ದೇವೆ. ಇದನ್ನು ಕದಲಿಸಲು ಯತ್ನಿಸಬೇಡಿ. ಎಂದರು.
ಅಮಿತ್ ಶಾ ಅವರು ಫೆ. 18, 19 ಮತ್ತು 20ರಂದು ಅಮಿತ್ ಶಾ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು,ಎರಡೂ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಮೀನುಗಾರರ ಸಮಾವೇಶದಲ್ಲಿ
ಭಾಗವಹಿಸಲಿದ್ದಾರೆ.