Advertisement

ಸಮ್ಮೇಳನ ಮಾತುಗಳ ಭರಾಟೆಯಾಗದಿರಲಿ

05:53 AM Feb 03, 2019 | |

ಚನ್ನಗಿರಿ: ಕನ್ನಡ ಸಾಹಿತ್ಯ ಸಮ್ಮೇಳನಗಳು ಬರಿ ಮಾತುಗಳ ಭರಾಟೆಯಾಗಬಾರದು. ಸಮಸ್ಯೆಗಳಿಗೆ ಮುಕ್ತಿ ನೀಡುವ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

Advertisement

ಪಾಂಡೋಮಟ್ಟಿ ಗ್ರಾಮದಲ್ಲಿ ಶನಿವಾರ 16ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅವರು ಮಾತನಾಡಿದರು.

ಚನ್ನಗಿರಿ ತಾಲೂಕು ಧೋಂಡಿಯ ವಾಘ, ಶಹಾಜಿ, ಕೆಳದಿ ಚೆನ್ನಮ್ಮರಂತಹ ಮಹಾನ್‌ ವ್ಯಕ್ತಿಗಳು ನೆಲೆಸಿದ್ದ ನಾಡು. ಇಂತಹ ನೆಲದಲ್ಲಿ ಕನ್ನಡ ಸಾಹಿತ್ಯವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಪ್ರತಿಯೊಬ್ಬರ ಸಹಕಾರ ಅತ್ಯವಶ್ಯಕವಾಗಿದೆ ಎಂದರು.

ಬಸವತತ್ವ ಸಾಹಿತ್ಯ ಕನ್ನಡಕ್ಕೆ ಬೇಕಿದೆ. ಮಹಿಳೆಯರನ್ನು ಸರಿಸಮಾನವಾಗಿ ಕಾಣಬೇಕು ಎಂಬ ದೃಷ್ಟಿಯನ್ನು ಬಸವಣ್ಣನವರು 12ನೆಯ ಶತಮಾನದಲ್ಲಿಯೇ ನೀಡಿದ್ದಾರೆ. ಶೇ. 97 ಜಾತಿಗಳನ್ನು ಒಗ್ಗೂಡಿಸಿದ ಕೀರ್ತಿ ಬಸವಣ್ಣನವರದು. ಆದರೆ ಸರ್ಕಾರಗಳು ಮಹಿಳೆಯರಿಗೆ ಪರಿಪೂರ್ಣ ಮೀಸಲಾತಿಯನ್ನು ನೀಡದಂತಹ ಸ್ಥಿತಿಯಲ್ಲಿವೆ ಎಂದರು.

ಮಕ್ಕಳು ನ್ಯೂಯಾರ್ಕ್‌, ಡಾಲರ್‌ ಕನಸುಗಳನ್ನು ಕಾಣದಂತೆ ಪೋಷಕರು ನೋಡಿಕೊಳ್ಳಬೇಕು. ಆಗ ವೃದ್ಧಾಶ್ರಮದ ಕನಸು ನಿಮ್ಮಿಂದ ದೂರವಾಗಲಿದೆ. ಮಕ್ಕಳನ್ನು ಆಟವಾಡುವ ವಯಸ್ಸಿನಲ್ಲಿ ಕೈದಿಗಳನ್ನಾಗಿಸಬೇಡಿ. ಅವರಿಗೆ ಸ್ವಾತಂತ್ರ್ಯ ನೀಡಿ. ಅಂಕ ಪಡೆಯುವ ಯಂತ್ರವನ್ನಾಗಿಸಬೇಡಿ. ತಾಯಂದಿರ ಸಿರಿಯಲ್‌ಗ‌ಳ ವ್ಯಾಮೋಹದಿಂದ ಮಕ್ಕಳ ಜೊತೆಗಿನ ಸಂಬಂಧದ ಮೌಲ್ಯ ಕಣ್ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಸಂಸದ ಜಿಎಂ. ಸಿದ್ದೇಶ್ವರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಜಿಪಂ ಸದಸ್ಯರಾದ ಮಂಜುಳಾ, ಲೋಕೇಶ್ವರ, ಯಶೋಧಮ್ಮ, ವಾಗೀಶ್‌, ತಾಪಂ ಅಧ್ಯಕ್ಷೆ ರೂಪ, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಜಗದೀಶ್‌, ಕಸಾಪ ಜಿಲ್ಲಾಧ್ಯಕ್ಷ ಮಂಜುನಾಥ್‌ ಕುರ್ಕಿ, ಮತ್ತಿತರರಿದ್ದರು.

ಆಂಗ್ಲ ಮಾಧ್ಯಮ ಶಾಲೆಗೆ ವಿರೋಧ
ಮುಖ್ಯಮಂತ್ರಿ ಕುಮಾರಸ್ವಾಮಿ ಆಂಗ್ಲ ಮಾಧ್ಯಮದ 1 ಸಾವಿರ ಶಾಲೆಗಳನ್ನು ತೆರೆಯಲು ನಿರ್ಧಾರ ಮಾಡಿರುವುದಕ್ಕೆ ನನ್ನ ವಿರೋಧವಿದೆ. ಸರ್ಕಾರಗಳೇ ಆಂಗ್ಲ ಶಾಲೆಗಳನ್ನು ಪ್ರಾರಂಭಿಸಲು ಹೊರಟಿರುವುದು ನೋಡಿದರೆ ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು. ಮುಖ್ಯಮಂತ್ರಿ ಮಗ ನಿಖೀಲ್‌ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಅವರ ಚಿತ್ರವನ್ನು ಆಂಗ್ಲ ಭಾಷಿಕರು ಬಂದು ನೋಡಬೇಕಾ? ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭ ಕನ್ನಡದ ಶವಪೆಟ್ಟಿಗೆಗೆ ಮೊಳೆ ಹೊಡೆದಂತೆ.
∙ ಕುಂ. ವೀರಭದ್ರಪ್ಪ, ಸಾಹಿತಿ.

ಕನ್ನಡಕ್ಕಿದೆ ಅನ್ನ ಕೊಡುವ ಶಕ್ತಿ
ಕನ್ನಡಕ್ಕೆ ಅನ್ನ ಕೊಡುವ ಶಕ್ತಿಯಿದೆ. ಯಾರಾದರೂ ಕನ್ನಡಕ್ಕೆ ಅನ್ನಕೊಡುವ ಶಕ್ತಿಯಿಲ್ಲ ಎಂದರೆ ಅಂತಹವರ ಮೇಲೆ ಕೇಸ್‌ ದಾಖಲು ಮಾಡುತ್ತೇನೆ. ಇಂದು ಸಾಫ್ಟವೇರ್‌ ಕಂಪನಿಗಳ ಉದ್ಯೋಗಿಗಳಲ್ಲಿ ಶೇ. 25 ರಷ್ಟೂ ಕನ್ನಡಿಗರು ಇಲ್ಲ. ಅದರೆ ಸರ್ಕಾರಗಳು ಸಾಫ್ಟವೇರ್‌ ಕಂಪನಿಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಕನ್ನಡಿಗರ ಜಾಗವನ್ನು ನೀಡುತ್ತಿರುವುದು ನಮ್ಮಗಳ ದೌರ್ಭಾಗ್ಯ.
∙ ಕುಂ. ವೀರಭದ್ರಪ್ಪ, ಸಾಹಿತಿ.

ಕುಂವೀ-ಸಿದ್ದೇಶ್ವರ್‌ ವಾಗ್ವಾದ
ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡುವಾಗ ಕೇಂದ್ರ ಸರ್ಕಾರದ ಹಣ ಲಪಟಾಯಿಸಿ ಹೋದ ನೀರವ್‌ ಮೋದಿ, ವಿಜಯ್‌ ಮಲ್ಯರಂತಹ ಉದ್ಯಮಿಗಳಿಗೆ ಹೆಚ್ಚು ಸಪೋರ್ಟ್‌ ಮಾಡಲಾಗುತ್ತಿದೆ ಎಂದು ಪ್ರಸ್ತಾಪಿಸಿದಾಗ ವೇದಿ ಕೆಯಲ್ಲಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಆಕ್ಷೇಪ ವ್ಯಕ್ತಪಡಿಸಿ, ಅದು ಯುಪಿಎ ಸರ್ಕಾರವಿದ್ದಾಗ ಪ್ರಧಾನಿ ಮನಮೊಹನ್‌ ಸಿಂಗ್‌ ಆಡಳಿತಾವಧಿಯಲ್ಲಿ ನಡೆದಿರುವುದು ಎಂದರು. ಆಗ ಕುಂ.ವೀರಭದ್ರಪ್ಪ ಮಾತನಾಡಿ, ಸರ್ಕಾರದ ಹಣವನ್ನು ಲಪಟಾಯಿಸಿಕೊಂಡು ಹೋಗುತ್ತಿರುವುದು ನಮ್ಮಗಳ ದೌರ್ಭಾಗ್ಯ ಎಂದರು.

ಭಾಷೆ ಸ್ಥಿತಿಗತಿಗೆ ಸರ್ಕಾರಗಳೇ ಕಾರಣ
ಚನ್ನಗಿರಿ: ಶಿಕ್ಷಣದ ಖಾಸಗೀಕರಣ ಜ್ಞಾನದ ಪ್ರಸಾರಕ್ಕಿಂತ ಹಣ ಮಾಡುವ ಉದ್ಯಮವಾಗಿದೆ. ಇದರಿಂದ ಮಾತೃಭಾಷೆಯನ್ನು ಕಳೆದುಕೊಳ್ಳುವ ಸನ್ನಿವೇಶಗಳು ಎದುರಾಗುತ್ತಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ| ಬಿ.ವಿ. ವಸಂತ್‌ ಕುಮಾರ್‌ ಹೇಳಿದ್ದಾರೆ.

ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಶನಿವಾರ 16ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮ್ಮೇಳನಾಧ್ಯಕ್ಷರ ನುಡಿಗಳಾಡಿದರು.

ಕೇಂದ್ರ-ರಾಜ್ಯ ಸರ್ಕಾರಗಳು ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ಪ್ರಾದೇಶಿಕ ಭಾಷೆಗಳ ಉಳಿವು ಸಾಧ್ಯ. ಪ್ರಾದೇಶಿಕ ಭಾಷೆಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸರ್ಕಾರಗಳೇ ಕಾರಣವಾಗಿದೆ. ಆದ್ದರಿಂದ ಮೊದಲು ಸರ್ಕಾರಗಳು ತಮ್ಮಲ್ಲಿರುವ ತೊಡಕುಗಳನ್ನು ನಿವಾರಣೆ ಮಾಡಿಕೊಳ್ಳಬೇಕು. ಆಗ ಕನ್ನಡ ಭಾಷೆಯ ಉಳಿಯಲಿದೆ ಎಂದರು. ನಮ್ಮ ಪೂರ್ವಜರು ಬಿಟ್ಟುಹೋಗಿರುವ ಭಾಷೆಗಳನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತದ ವಿಷಯ, ಕನ್ನಡದ ಉಳಿವಿಗಾಗಿ ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬೆರೆಯುವಂತೆ ಮಾಡಬೇಕು. ಆಗ ಮಾತ್ರ ಕನ್ನಡದ ಉಳಿವು, ಸಂಸ್ಕೃತಿ ಪ್ರತಿಪಾದಿಸಲು ಸಾಧ್ಯವಾಗಲಿದೆ ಎಂದರು. ಸಾಹಿತ್ಯ ಸಮ್ಮೇಳನಗಳು ಪ್ರತಿಯೊಬ್ಬರಲ್ಲಿ ಸೋದರತ್ವದ ಭಾವವನ್ನು ಮೂಡಿಸುವ ಸಂಸ್ಕೃತಿ ಬೆಳೆಸಬೇಕಿದೆ. ಆಗ ಮಾತ್ರ ಇಂತಹ ಸಮ್ಮೇಳನಗಳು ಸಾರ್ಥಕವಾಗಲಿವೆ. ಪ್ರಸ್ತುತ ಮನುಷ್ಯ ಮನುಷ್ಯರ ನಡುವೆ ಸಂಬಂಧಗಳು ಕಣ್ಮರೆಯಾಗುತ್ತಿವೆ, ಮನೆಗಳು,ಊರುಗಳು, ಸಮಾಜಗಳು, ರಾಜ್ಯ, ದೇಶ, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಧರ್ಮಗಳು ಎಂದು ಮನುಷ್ಯ ಒಡೆದು ಹೋಗುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.

ನಾಡು-ನುಡಿ, ಜನಾಂಗ, ಸಾಹಿತ್ಯ-ಸಂಸ್ಕೃತಿಗಳ ಪ್ರತೀಕ. ಅವುಗಳನ್ನು ನಾವು ಉಳಿಸಿ, ಬೆಳೆಸುವ ಸಂಕಲ್ಪ ಕೈಗೊಳ್ಳುವುದಕ್ಕಾಗಿ ಸಮ್ಮೇಳನಗಳನ್ನು ಹಿಂದಿನಿಂದಲೂ ನಡೆಸುತ್ತಾ ಬರಲಾಗಿದೆ ಎಂದು ನುಡಿದರು. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವಿದ್ದು, 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿದೆ, ಸಾಹಿತ್ಯಿಕವಾಗಿ ಕನ್ನಡ ಭಾಷೆಯು ಶ್ರೀಮಂತವಾಗಿದೆ, ಅಂತಹ ಭಾಷೆಯನ್ನು ನಾವು ಪ್ರತಿಪಾದಿಸುವ ಮೂಲಕ ಎತ್ತಿ ಹಿಡಿಯಬೇಕು ಎಂದರು.

ಖಾಸಗಿ ಶಾಲೆಗಳು ಆಂಗ್ಲ ಭಾಷೆಗೆ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆಯ ಕೀಳರಿಮೆ ಮೂಡುವಂತೆ ನಡೆದುಕೊಳ್ಳುತ್ತಿವೆ. ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದ ಅದೆಷ್ಟೋ ಜನರು ಉನ್ನತ ಸ್ಥಾನದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿರುವ ಜ್ಞಾನ ಮತ್ತೂಂದು ಭಾಷೆಯಲ್ಲಿಲ್ಲ. ಆದ್ದರಿಂದ ಕನ್ನಡ ಭಾಷೆಗೆ ಹೆಚ್ಚಿನ ಮೌಲ್ಯವನ್ನು ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಕನ್ನಡ ಭಾಷೆ ಜಾಗೃತಿ ಮೂಡಿಸಬೇಕು ಎಂದರು. ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Udayavani is now on Telegram. Click here to join our channel and stay updated with the latest news.

Next