Advertisement

ಮಾತು ಸಾಧನೆಯಾಗಲಿ, ಸಾಧನೆ ಮಾತಾಗದಿರಲಿ

01:25 PM Dec 23, 2017 | |

ಹೊನ್ನಾಳಿ: ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ನಾಣ್ಣುಡಿಯಂತೆ ಲಿಂ|ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರತಿ ವರ್ಷ ಒಂದೊಂದು ಗ್ರಾಮದಲ್ಲಿ ಮೌನ ಇಷ್ಟಲಿಂಗ ಅನುಷ್ಠಾನ ಕಾರ್ಯಕ್ರಮ ನಡೆಸುತ್ತಿರುವುದನ್ನು ತಾವು ಮುಂದುವರಿಸಿರುವುದಾಗಿ ಹಿರೇಕಲ್ಮಠದ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಮೀಪದ ಗೊಗ್ಗ ಗ್ರಾಮದಲ್ಲಿ ನಡೆದ ಮೌನ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಾತಿನಿಂದ ಏನನ್ನು ಸಾಧಿಸಲಾಗದು. ಮೌನ ಅನೇಕ ಬಾರಿ ತುಂಬಾ ಪರಿಣಾಮ ಬೀರಿ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವ ತಂತ್ರಗಾರಿಕೆ ಹೊಂದಿದೆ. ಮಾತು ಸಾಧನೆಯಾಗಬಾರದು ಸಾಧನೆ ಮಾತಾಗಬೇಕು. ಅನೇಕ ಬಾರಿ ಮಾತಿನಿಂದ ಜಗಳ, ಗೊಂದಲಗಳು ಸೃಷ್ಟಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ಯಾರಾದರೂ ಮೌನವಹಿಸಿದರೆ ಎಲ್ಲಾ ಅವಘಡಗಳಿಗೆ ತಡೆ ಹಾಕಬಹುದು. ಮಾತಿಗೆ ಮಾತು ಬೆಳೆದು
ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದರು. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಮನುಕುಲದ ಒಳಿತಿಗಾಗಿ ಧರ್ಮ ಇರುವುದು. ಯಾರು ಧರ್ಮದ ಆಚರಣೆಯಲ್ಲಿ ನಡೆಯುತ್ತಾರೋ ಅಂತವರ ಬಾಳು ಹಸನಾಗುತ್ತದೆ. ಲಿಂ| ಒಡೆಯರ್‌ ಚಂದ್ರಶೇಖರ ಶಿವಾಚಾರ್ಯರು ಎಲ್ಲಾ ಜನಾಂಗದವರನ್ನು ಸಮಾನ ರೀತಿಯಲ್ಲಿ ಕಂಡ ಕಾರಣ ಅವರೊಬ್ಬ ನಡೆದಾಡುವ
ದೇವರೆನಿಸಿಕೊಂಡಿದ್ದರು ಎಂದು ಹೇಳಿದರು. ಉಪನ್ಯಾಸಕ ಎ.ಬಿ.ಸುಧೀರ್‌ ಉಪನ್ಯಾಸ ನೀಡಿದರು. ಮುಖಂಡರಾದ ಎಚ್‌.ಎ.ಉಮಾಪತಿ, ಪ್ರಭು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next