Advertisement
ದಾನಿ ದಿ| ಹಾಜಿ ಅಬ್ದುಲ್ಲಾ ಸಾಹೇಬ್ ಅವರು ವೀಲು ಬರೆದು ಸಾರ್ವಜನಿಕ ಸೇವೆಗಾಗಿ ಸರಕಾರಕ್ಕೆ ದಾನ ನೀಡಿದ್ದರು. ಆ ಜಾಗವನ್ನು ಸರಕಾರ ಖಾಸಗಿ ಸಂಸ್ಥೆಧಿಯವರಿಗೆ ನೀಡುವಾಗ ಯಾವುದೇ ನಿಯಮ ಪಾಲಿಸಿಲ್ಲ. ವೀಲ್‌ನ ನಿಯಮಾನುಸಾರ ಕೋರ್ಟ್‌ನ ಅನುಮತಿಯನ್ನೂ ಕೇಳಿಲ್ಲ. ಹಾಗೆಯೇ ಸಾರ್ವಜನಿಕರ ಸೇವೆಧಿಯನ್ನು ವ್ಯಾಪಾರ ಮಾಡಲು ಹೊರಧಿಟಿರುವುದನ್ನು ವಿರೋಧಿಸಿ ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಸಂಬಂಧಿ ಖುರ್ಷಿದ್ ಅಹಮದ್ ಮತ್ತು ಇತರ 7 ಮಂದಿ ಸಂಬಂಧಿಗಳ ಸಹಿತ ನಾಗರಿಕರ ಪರವಾಗಿ 48 ಮಂದಿ ಒಟ್ಟಾಗಿ ಅಪೀಲು ಸಲ್ಲಿಸಿದ್ದಾರೆ.
ಅಪೀಲನ್ನು ಸೋಮವಾರ ಕೈಗೆತ್ತಿಕೊಂಡ ಪ್ರಿನ್ಸಿಪಲ್ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರು, ಪ್ರಕರಣ ಸ್ವೀಕರಿಸಿಕೊಂಡು ವಿಚಾರಣೆ ನಡೆಸಬೇಕೋ? ಯಾವ ಪೀಠದಲ್ಲಿ ವಿಚಾರಣೆ ನಡೆಸಬೇಕು ಎನ್ನುವ ನಿರ್ಣಯವನ್ನು ಸಿವಿಲ್ ನ್ಯಾಯಾಧೀಶರು ಮಂಗಳವಾರ ತಿಳಿಸಲಿದ್ದಾರೆ ಎಂದು ಅಪೀಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತದಾರರು ತಿಳಿಸಿದ್ದಾರೆ.