Advertisement

ಬೀಡಿ, ಸಿಗರೇಟು ಬಿಡಿ ಮಾರಾಟ ನಿಷೇಧ ಬೇಡ

01:01 PM Oct 19, 2017 | Team Udayavani |

ಬೆಂಗಳೂರು: ಬಿಡಿ ಬಿಡಿಯಾಗಿ ಬೀಡಿ, ಸಿಗರೇಟು ಮಾರಾಟ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದ ಸಣ್ಣ ಪುಟ್ಟ ವ್ಯಾಪಾರಿಗಳ ವಹಿವಾಟಿಗೆ ತೀವ್ರ ಹೊಡೆತ ಬಿದ್ದಿದ್ದು, ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸಣ್ಣ ಬೀಡಿ ಸಿಗರೇಟು ಮಾರಾಟಗಾರರ ಸಂಘ ಒತ್ತಾಯಿಸಿದೆ.

Advertisement

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎನ್‌.ಮುರಳೀಕೃಷ್ಣ, ತಂಬಾಕು ಉತ್ಪನ್ನಗಳು ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ. ಅವಿದ್ಯಾವಂತರು, ಜೀವನೋಪಾಯಕ್ಕೆ ಇದನ್ನೇ ನೆಚ್ಚಿಕೊಂಡಿರುವ ಆರ್ಥಿಕವಾಗಿ ಹಿಂದುಳಿದವರಷ್ಟೇ ಹೆಚ್ಚಾಗಿ ಈ ವ್ಯಾಪಾರದಲ್ಲಿ ತೊಡಗಿದ್ದಾರೆ. ಹೀಗಿರುವಾಗ ಬಿಡಿ ಬಿಡಿಯಾಗಿ ಬೀಡಿ, ಸಿಗರೇಟು ಮಾರಾಟ ನಿಷೇಧದಿಂದ ವಹಿವಾಟಿಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಹೇಳಿದರು.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳ ನಿಷೇಧ ಕಾಯ್ದೆ 2013ರ ಅಡಿ ಹಲವು ನಿಬಂಧನೆ ವಿಧಿಸಿರುವುದರಿಂದ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ಹೀಗಿದ್ದರೂ ಕಾಯ್ದೆಯ ನಿಯಮಗಳನ್ನು ಪಾಲಿಸಲಾಗುತ್ತಿದೆ. ಮಕ್ಕಳಿಗೆ ತಂಬಾಕು ಪದಾರ್ಥ ನೀಡುತ್ತಿಲ್ಲ. ತಂಬಾಕು ನಿಷೇಧ ವಲಯದ ಬಗ್ಗೆ ಜಾಗೃತಿ ಫ‌ಲಕಗಳನ್ನು ಅಳವಡಿಸಲಾಗಿದ್ದು ಯಾವುದೇ ಕಾನೂನು ಉಲ್ಲಂಘನೆಯಾಗುತ್ತಿಲ್ಲ. ಹೀಗಿದ್ದರೂ ಇನ್ನಷ್ಟು ನಿರ್ಬಂಧ ಹೇರುವುದು ಸರಿಯಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಲಕ್ಷಾಂತರ ಮಂದಿ ಇದೇ ವ್ಯಾಪಾರ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಆದೇಶದಿಂದ ವಹಿವಾಟು ತೀವ್ರ ಕುಸಿಯಲಿದೆ. ಹಾಗಾಗಿ ಕೂಡಲೇ ಆದೇಶ ಹಿಂಪಡೆದು ಸಣ್ಣ ವ್ಯಾಪಾರಿಗಳು ವಹಿವಾಟು ಮುಂದುವರಿಸಲು ಅವಕಾಶ ಕಲ್ಪಿಸಬೇಕು. ಈ ಸಂಬಂಧ ಸದ್ಯದಲ್ಲೇ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next